ನೋಕಿಯಾ ಪವರ್ ಈಯರ್ಬಡ್ಸ್ ಲೈಟ್, ಬಹು ನಿರೀಕ್ಷಿತ, ನೋಕಿಯಾ 5.4, 3.4 ಮೊಬೈಲ್ ಬಿಡುಗಡೆ; ವಿವರ ಹೀಗಿದೆ...
ನೋಕಿಯಾ ಫೋನ್ಗಳ ಗೃಹವಾದ ಎಚ್ಎಂಡಿ ಗ್ಲೋಬಲ್ ಇಂದು ನೋಕಿಯಾ 5.4 ನೋಕಿಯಾ 3.4 ಮತ್ತು ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
Published: 10th February 2021 08:45 PM | Last Updated: 10th February 2021 08:45 PM | A+A A-

ನೋಕಿಯಾ ಪವರ್ ಈಯರ್ಬಡ್ಸ್ ಲೈಟ್, ಬಹು ನಿರೀಕ್ಷಿತ, ನೋಕಿಯಾ 5.4, 3.4 ಮೊಬೈಲ್ ಬಿಡುಗಡೆ; ವಿವರ ಹೀಗಿದೆ...
ನವದೆಹಲಿ: ನೋಕಿಯಾ ಫೋನ್ಗಳ ಗೃಹವಾದ ಎಚ್ಎಂಡಿ ಗ್ಲೋಬಲ್ ಇಂದು ನೋಕಿಯಾ 5.4 ನೋಕಿಯಾ 3.4 ಮತ್ತು ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಕ್ವಾಲ್ಕಾಮ್ ಸ್ನ್ಯಾಪ್ ಡ್ರಾಗನ್ 662 ಪ್ರೊಸೆಸರ್ನಿಂದ ಚಾಲಿತವಾಗಿರುವ ನೋಕಿಯಾ 5.4 ಹೆಚ್ಚು ವೇಗ, ಸುಧೀರ್ಘ ಬ್ಯಾಟರಿ ಲೈಫ್, ಉತ್ತಮ ಇಮೇಜಿಂಗ್ ಮತ್ತು ಹೆಚ್ಚಿನ ಕ್ಷಮತೆಯನ್ನು ಒದಗಿಸುತ್ತದೆ. ನೋಕಿಯಾ 5.4, 48 ಮೇಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾ ಮತ್ತು 16 ಎಂಪಿ ಮುಂಬದಿ ಕ್ಯಾಮೆರಾ ಹೊಂದಿದ್ದು, ಇದು ವಿಶೇಷವಾಗಿ 'ಸಿನಿಮಾ' ಕಾರ್ಯನಿರ್ವಹಣೆಯ ವಿಶೇಷತೆಯನ್ನು ಹೊಂದಿದೆ. ಇದು 24 ಎಫ್ಪಿಎಸ್ (ಚಿತ್ರೋದ್ಯಮ ಮಾನದಂಡ) ದ ಚಿತ್ರಗಳನ್ನು ಸೆರೆ ಹಿಡಿಯಲಿದ್ದು, ಇದು ಬಳಕೆದಾರರು 21:9 ಸಿನಿಮ್ಯಾಟಿಕ್ ವಿಧದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಲು ಅನುವು ಮಾಡಿಕೊಡುತ್ತದೆ. ಓಝೆಡ್ಓ ಸ್ಪೇಷಿಯಲ್ ಆಡಿಯೊದೊಂದಿಗೆ ನೋಕಿಯಾ 5.4, ಅಮೂಲ್ಯ ಫಿಲ್ಮಿ ಕ್ಷಣಗಳ ಸುಲಲಿತ ಚಿತ್ರೀಕರಣದ ಅನುಭವಕ್ಕಾಗಿ ಉದಯೋನ್ಮುಖ ವಿಡಿಯೊಗ್ರಾಫರ್ಗಳಿಗೆ ಸಹಕಾರಿಯಾಗಲಿದೆ. ಇದರ ಜತೆಗೆ 6.39 ಇಂಚುಗಳು (16.23 ಸೆಂಟಿಮೀಟರ್) ಎಚ್ಡಿ+ ಪಂಚ್ಹೋಲ್ ಪ್ರದರ್ಶಕ ವ್ಯವಸ್ಥೆಯು ದೊಡ್ಡ ಪರದೆಯನ್ನು ಆಸ್ವಾದಿಸಲು ಅನುವು ಮಾಡಿಕೊಡುತ್ತದೆ. 4000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಈ ಮೊವೈಲ್ ಹೊಂದಿದೆ.
ನೋಕಿಯಾ 3.4 ಅತ್ಯಂತ ಶಕ್ತಿಶಾಲಿ ಪ್ರೊಸೆಸರ್ ಎನಿಸಿದ ಹೊಚ್ಚಹೊಸ ಕ್ವಾಲ್ಕಾಮ್ ಸ್ನ್ಯಾಪ್ ಡ್ರಾಗನ್ 460 ವ್ಯವಸ್ಥೆಯನ್ನು ಒಳಗೊಂಡಿದ್ದು, ಹೆಚ್ಚು ಕೈಗೆಟುಕುವ ಬೆಲೆಯ ಮಟ್ಟದಲ್ಲಿ ಪ್ರಬಲ ಕ್ಷಮತೆಯ ಮೇಲ್ದರ್ಜೆಯ ಸೌಲಭ್ಯವನ್ನು ಒಳಗೊಂಡಿದೆ. ನಿಮ್ಮನ್ನು ಹೆಚ್ಚು ತಲ್ಲೀನಗೊಳಿಸುವ 6.39 ಇಂಚುಗಳ (16೬.23 ಸೆಂಟಿಮೀಟರ್) ಎಚ್ಡಿ+ ಪ್ರದರ್ಶಕ ವ್ಯವಸ್ಥೆಯನ್ನು ಹೊಂದೆ. ಈ ಸರಣಿಯಲ್ಲೇ ಪಂಚ್ಹೋಲ್ ಪ್ರದರ್ಶಕ ವ್ಯವಸ್ಥೆಯನ್ನು ಹೊಂದಿರುವ ಮೊಟ್ಟಮೊದಲ ಸ್ಮಾರ್ಟ್ಫೋನ್ ಎನಿಸಿದೆ. ಇದು ಹೆಚ್ಚು ಸ್ಥಳಾವಕಾಶದ ಪರದೆಯನ್ನು ಒದಗಿಸಲಿದ್ದು, ಶಕ್ತಿಶಾಲಿ ಹಿಂಬದಿ ತ್ರಿವಳಿ ಕ್ಯಾಮೆರಾವನ್ನೂ ಒಳಗೊಂಡಿದೆ. ಎಐ ಇಮೇಜಿಂಗ್ ಸೌಲಭ್ಯ ಹೊಂದಿದೆ. ನೋಕಿಯಾ ಪವರ್ ಇಯರ್ಬಡ್ ಲೈಟ್, ವಿನ್ಯಾಸವನ್ನು ಹೊಂದಿದ್ದು, ಜೇಬಿನ ಗಾತ್ರದ ಚಾರ್ಜಿಂಗ್ ಕೇಸ್ಗಳನ್ನು ಹೊಂದಿರುತ್ತದೆ.