ಈ ಹೊಸ ಸ್ಮಾರ್ಟ್ ಫೋನ್ ಗಳ ಮೂಲಕ ಮಾರುಕಟ್ಟೆಗೆ ಮೋಟೊರೋಲಾ ಮತ್ತೆ ಎಂಟ್ರಿ
ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹಲವಾರು ಏರಿಳಿತಗಳನ್ನು ಕಂಡಿರುವ ಮೊಬೈಲ್ ತಯಾರಕ ಸಂಸ್ಥೆ ಮೋಟೋರೋಲಾ ಈಗ ಹೊಸ ಸ್ಮಾರ್ಟ್ ಫೋನ್ ಗಳನ್ನು ಪರಿಚಯ ಮಾಡುವ ಮೂಲಕ ಮತ್ತೆ ಮಾರುಕಟ್ಟೆ ಪ್ರವೇಶಿಸುವುದಕ್ಕೆ ಸಜ್ಜುಗೊಂಡಿದೆ.
Published: 14th February 2021 09:14 PM | Last Updated: 14th February 2021 09:14 PM | A+A A-

ಈ ಹೊಸ ಸ್ಮಾರ್ಟ್ ಫೋನ್ ಗಳ ಮೂಲಕ ಮಾರುಕಟ್ಟೆಗೆ ಮೋಟೊರೋಲಾ ಮತ್ತೆ ಎಂಟ್ರಿ
ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹಲವಾರು ಏರಿಳಿತಗಳನ್ನು ಕಂಡಿರುವ ಮೊಬೈಲ್ ತಯಾರಕ ಸಂಸ್ಥೆ ಮೋಟೋರೋಲಾ ಈಗ ಹೊಸ ಸ್ಮಾರ್ಟ್ ಫೋನ್ ಗಳನ್ನು ಪರಿಚಯ ಮಾಡುವ ಮೂಲಕ ಮತ್ತೆ ಮಾರುಕಟ್ಟೆ ಪ್ರವೇಶಿಸುವುದಕ್ಕೆ ಸಜ್ಜುಗೊಂಡಿದೆ.
ಮೋಟೋ ಜಿ ಮೂಲಕ ಕೈಗೆಟುಕುವ ದರದಲ್ಲಿ ಸ್ಮಾರ್ಟ್ ಫೋನ್ ತಯಾರಿಸಿ, ಆಂಡ್ರಾಯ್ಡ್ ಆಪರೇಟಿಂಗ್ ವ್ಯವಸ್ಥೆಗೆ ಬದಲಾವವಣೆ ಮಾಡಿಕೊಂಡಿದ್ದ ಮೊಟೋರೋಲಾ ಮೊಬೈಲ್ ತಯಾರಕ ಸಂಸ್ಥೆಯನ್ನು ಗೂಗಲ್, ಲೆನೆವೋ ಕಂಪನಿಗಳಿಗೆ ಮಾರಾಟವಾಗಿದ್ದ ಮೋಟೋರೋಲಾ ಬ್ರಾಂಡ್ ಕಳೆದ ಕೆಲವು ಸಮಯದಿಂದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ನೆಲ ಕಚ್ಚಿದೆ. ಆದರೆ ಹೊಸ ವರ್ಷಕ್ಕೆ ಹೊಸ ಸ್ಮಾರ್ಟ್ ಫೋನ್ ಗಳ ಮೂಲಕ ಮಾರುಕಟ್ಟೆಗೆ ಪುನಃ ಲಗ್ಗೆ ಇಡಲು ಸಂಸ್ಥೆ ತಯಾರಾಗಿದೆ.
ವದಂತಿಗಳ ಪ್ರಕಾರ, ಈ ವರ್ಷ ಬಿಡುಗಡೆಯಾಗಲಿರುವ ಮೋಟೋರೋಲಾದ ಮೊಬೈಲ್ ಗಳ ಪಟ್ಟಿ ಹೀಗಿದೆ.
ಮೋಟೋರೋಲಾ ಇಬಿಜಾ (G40), ಮೋಟೋ ಜಿ10- ಮೋಟೋ ಜಿ30, ಮೋಟೋ E7ಪವರ್, ಮೋಟೋ ಜಿ ಪ್ಲೇ (2021), ಮೋಟೋರೋಲಾ ನಿಯೋ, ಮೋಟೋ ಜಿ ಸ್ಟೈಲಸ್ (2021), ಮೋಟೋರೋಲಾ ಅಥೇನಾ
ಮೊಟೋರೋಲಾ ಇಬಿಜಾ (ಜಿ40): ಸ್ಪೋರ್ಟ್ ಕ್ವಾಲ್ಕಮ್ ಸ್ನ್ಯಾಪ್ ಡ್ರ್ಯಾಗನ್ 480 Soc, 90 Hz ಪರದೆ, 49 ಮೆಗಾ ಪಿಕ್ಸಲ್ ಪ್ರೈಮರಿ ಲೆನ್ಸ್ ನ್ನು ಒಳಗೊಂಡ ತ್ರಿವಳಿ ಕ್ಯಾಮರಾ ಸೆಟ್ ಅಪ್, 5000 ಎಂಎಎಚ್ ಬ್ಯಾಟರಿ ಹಾಗೂ ಆಂಡ್ರಾಯ್ಡ್ 11 ಚಾಲಿತ ಈ ಮೊಬೈಲ್ ಫೆಬ್ರವರಿ 2021 ರಲ್ಲಿ ಬಿಡುಗಡೆಯಾಗಲಿದೆ.
ಮೋಟೋ ಜಿ10: ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 480 ಪ್ರೊಸೆಸರ್, 48 ಮೆಗಾ ಪಿಕ್ಸಲ್ ಮುಖ್ಯ ಲೆನ್ಸ್, 8 ಮೆಗಾಪಿಕ್ಸಲ್ ಮುಂಭಾಗದ ಕ್ಯಾಮರಾವನ್ನೊಳಗೊಂಡ ಕ್ವಾಡ್ ಕ್ಯಾಮರಾ ಸೆಟ್ ಅಪ್, 6.5 ಇಂಚಿನ ಟಚ್ ಸ್ಕ್ರೀನ್ ಪ್ಯಾನಲ್ 60Hz ರಿಫ್ರೆಷ್ ರೇಟ್, 4/64 ಜಿಬಿ ಸ್ಟೋರೇಜ್ ಸಾಮರ್ಥ್ಯ ಹಾಗೂ 5000 ಎಂಎಎಚ್ ಬ್ಯಾಟರಿಯೊಂದಿಗೆ ಬರಲಿದೆ.
ಮೋಟೋ ಜಿ30: ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 662 ಎಸ್ಒಸಿ ತ್ರಿವಳಿ ಕ್ಯಾಮರ, 64 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮರಾ ಸೆನ್ಸರ್, ಹೊರತುಪಡಿಸಿದರೆ ಬಹುತೇಕ ಎಲ್ಲಾ ಫೀಚರ್ ಗಳೂ ಮೋಟೋ ಜಿ10ಯದ್ದೇ ಆಗಿದ್ದು, ಮೋಟೋ ಜಿ10 ಗೆ ಅಂದಾಜು 13,100 ರೂಪಾಯಿಗಳ ಬೆಲೆ ಹಾಗೂ ಮೋಟೋ ಜಿ30ಯ ಬೆಲೆಯನ್ನು 15,800 ರೂಪಾಯಿಗಳಿಗೆ ನಿಗದಿಪಡಿಸಲಾಗುತ್ತದೆ ಎಂದು ಹೇಳಲಾಗಿದೆ.