
ಭಾರತದ ಮಾರುಕಟ್ಟೆಗೆ ನೋಕಿಯಾ 3.4 ಲಗ್ಗೆ: ಜಿಯೋ ಸಿಮ್ ಹೊಂದಿರುವವರಿಗೆ ವಿಶೇಷ ಆಫರ್!
ನೋಕಿಯಾ ಫೋನ್ಗಳ ಮಾತೃಸಂಸ್ಥೆ ಎಚ್ಎಂಡಿ ಗ್ಲೋಬಲ್, ನೋಕಿಯಾ 3.4 ಆವೃತ್ತಿಯ ಹೊಸ ಮೊಬೈಲ್ ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
ಜೋರ್ಡ್, ಡಸ್ಕ್ ಮತ್ತು ಇದ್ದಿಲು ಬಣ್ಣದ ಆಯ್ಕೆಯಲ್ಲಿ ಮೊಬೈಲ್ ಫೋನ್ ಗಳು ಆರ್ಎಎಂ/ಆರ್ಓಎಂ 4ಜಿಬಿ/64ಜಿಬಿ ಅವತರಣಿಕೆಯಲ್ಲಿ ಲಭ್ಯವಿದ್ದು, ರೂ. 11,999 ಗಳ ಬೆಲೆಯನ್ನು ನಗದಿಪಡಿಸಲಾಗಿದೆ.
Nokia.com/com ಅಮೆಜಾನ್.ಇನ್ ಮತ್ತು ಫ್ಲಿಪ್ಕಾರ್ಟ್ ಸೇರಿದಂತೆ ಭಾರತದ ಎಲ್ಲ ಮುಂಚೂಣಿ ಚಿಲ್ಲರೆ ಮಳಿಗೆಗಳು ಮತ್ತು ಆನ್ಲೈನ್ನಲ್ಲಿ ಲಭ್ಯವಿದೆ.
ಜಿಯೊ ಸಂಪರ್ಕ ಹೊಂದಿರುವವರು ನೋಕಿಯಾ 3.4 ಗ್ರಾಹಕರಾದಲ್ಲಿ 4000 ರೂಪಾಯಿ ಮೌಲ್ಯದ ವಿಶೇಷ ಲಾಭಗಳಿಗೆ ಅರ್ಹರಾಗಿರುತ್ತಾರೆ. ಈ ಪ್ರಯೋಜನಗಳಲ್ಲಿ 349 ರೂಪಾಯಿ ಪ್ಲಾನ್ನ ಪ್ರಿಪೆಯ್ಡ್ ರೀಚಾರ್ಜ್ ಮೇಲೆ 2000 ರೂಪಾಯಿ ಇನ್ಸ್ಟಂಟ್ ಕ್ಯಾಶ್ಬ್ಯಾಕ್ ಮತ್ತು ಪಾಲುದಾರರಿಂದ 2000 ರೂಪಾಯಿ ಮೌಲ್ಯದ ವೋಚರ್ಗಳು ಸೇರಿರುತ್ತವೆ. ಈ ಆಫರ್ಗಳು ಹೊಸ ಹಾಗೂ ಹಾಲಿ ಇರುವ ಜಿಯೊ ಗ್ರಾಹಕರಿಗೆ ಅನ್ವಯವಾಗುತ್ತವೆ. ಈ ಆಫರ್ಗಳು Nokia.com/phones ಮೂಲಕ ಖರೀದಿಸುವವರಿಗೆ ಲಭ್ಯ ಇರುತ್ತವೆ.
ನೋಕಿಯಾ 3.4 ಮೊಬೈಲ್, ಅತ್ಯಂತ ಶಕ್ತಿಶಾಲಿ ಪ್ರೊಸೆಸರ್ ಎನಿಸಿದ ಹೊಚ್ಚಹೊಸ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 460 ವ್ಯವಸ್ಥೆಯನ್ನು ಒಳಗೊಂಡಿದ್ದು, ಹೆಚ್ಚು ಕೈಗೆಟುಕುವ ಬೆಲೆಯ ಮಟ್ಟದಲ್ಲಿ ಪ್ರಬಲ ಕ್ಷಮತೆಯ ಮೇಲ್ದರ್ಜೆಯ ಸೌಲಭ್ಯವನ್ನು ಒಳಗೊಂಡಿದೆ. 6.39 ಇಂಚ್'ಗಳ (16.23 ಸೆಂಟಿಮೀಟರ್) ಎಚ್ಡಿ+ ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ. ನೋಕಿಯಾ 3 ಸರಣಿಯಲ್ಲೇ ಪಂಚ್ಹೋಲ್ ಪ್ರದರ್ಶಕ ವ್ಯವಸ್ಥೆಯನ್ನು ಹೊಂದಿರುವ ಮೊಟ್ಟಮೊದಲ ಸ್ಮಾರ್ಟ್ಫೋನ್ ಇದಾಗಿದ್ದು ಹೆಚ್ಚು ಸ್ಥಳಾವಕಾಶದ ಪರದೆಯನ್ನು ಒದಗಿಸಲಿದೆ.
ಹಿಂಬದಿ ತ್ರಿವಳಿ ಕ್ಯಾಮೆರಾ, ಹೆಚ್ಚು ವಿಶಾಲವಾದ ಲೆನ್ಸ್ ಮತ್ತು ಎಐ ಇಮೇಜಿಂಗ್ ಸೌಲಭ್ಯ ಹೊಂದಿದೆ. ವಿಶೇಷವೆನಿಸಿದ ಎರಡು ದಿನಗಳ ಬ್ಯಾಟರಿ ಜೀವಿತಾವಧಿಯಿಂದ ಚಾಲಿತವಗಿದ್ದು, ಮೂರು ವರ್ಷಗಳ ಕಾಲ ಮಾಸಿಕ ಸೆಕ್ಯುರಿಟಿ ಅಪ್ಡೇಟ್ಗಳು ಮತ್ತು ಎರಡು ವರ್ಷಗಳ ಸಾಫ್ಟ್ವೇರ್ ಅಪ್ಟೇಟ್ಗಳ ಖಾತರಿನ್ನು ಹೊಂದಿದೆ.
ಗೂಗಲ್ ಪಾಡ್ಕ್ಯಾಸ್ಟ್ಸ್ ಸಮನ್ವಿತವಾಗಿರುವ ನೋಕಿಯಾ 3.4 ಮೂಲಕ ನೀವು ನಿಮ್ಮ ಫೇವರಿಟ್ ಕಾರ್ಯಕ್ರಮಗಳನ್ನು ಆಲಿಸಬಹುದಾಗಿದೆ.
ಈ ಬಗ್ಗೆ ಎಚ್ಎಂಡಿ ಗ್ಲೋಬಲ್ನ ಉಪಾಧ್ಯಕ್ಷ ಸುಮೀತ್ ಸಿಂಗ್ ಕೊಚಾರ್ ಮಾತನಾಡಿ, "ಭಾರತಕ್ಕೆ ಬಹುನಿರೀಕ್ಷಿತ ನೋಕಿಯಾ 3.4 ಬಿಡುಗಡೆ ಮಾಡುತ್ತಿರುವುದು ಸಂತಸವಾಗಿದೆ. ನೋಕಿಯಾ 3.4 ಕೈಗೆಟುಕುವ ಸ್ಮಾರ್ಟ್ಫೋನ್ ಆಗಿದ್ದು, ಉತ್ಕೃಷ್ಟ ಕ್ಷಮತೆ, ಪವರ್ ಮತ್ತು ಬಳಕೆ ಅನುಭವವನ್ನು ಒದಗಿಸುತ್ತದೆ. ಸ್ಟೈಲಿಶ್ ಎನಿಸುವ ಪ್ಯಾಕೇಜ್ನಲ್ಲಿ ಎಲ್ಲವೂ ಲಭ್ಯವಿದೆ. ಗೂಗಲ್ ಪಾಡ್ಕಾಸ್ಟ್ಸ್ ಮೂಲಕ ನೋಕಿಯಾ 3.4, ಎಲ್ಲ ಬಗೆಯ ಅಂಶಗಳು, ವಿಷಯಗಳನ್ನು ಕಂಡುಕೊಳ್ಳಲು ಮತ್ತು ನಿಮ್ಮದೇ ಸ್ವಂತ ಪಾಡ್ಕಾಸ್ಟ್ಸ್ ಮಾಡಿಕೊಳ್ಳಲು ಪ್ರತತ್ನಿಸಬಹುದಾಗಿದೆ.
ಹೀಗೆ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಹೊಸ ಆಯಾಮಗಳನ್ನು ಕಲ್ಪಿಸಲು ನೋಕಿಯಾ 3.4 ನೆರವಾಗಲಿದೆ. ದೇಶದಲ್ಲಿ ಪಾಡ್ಕಾಸ್ಟ್ಸ್ ಸುತ್ತ ವ್ಯಾಪಕ ಪ್ರಗತಿ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಮ್ಮ ಫೋನ್ ಸುತ್ತಲಿನ ಸಂವಾದವು ಹೇಗೆ ಗೂಗಲ್ ಪಾಡ್ಕಾಸ್ಟ್ಸ್ ನಿಮಗೆ ಹೊಸದನ್ನು ತರಬಲ್ಲದು ಎನ್ನುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದೆ."
ಗೂಗಲ್ ಪಾಡ್ಕಾಸ್ಟ್ಸ್ನ ಉತ್ಪನ್ನ ಮುಖ್ಯಸ್ಥ ಗೇಬ್ ಬೆಂಡರ್ ಮಾತನಾಡಿ, "ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪಾಡ್ಕಾಸ್ಟ್ಸ್ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದು, ನೋಕಿಯಾ 3.4 ಬಳಕೆದಾರರು ಸುಲಭವಾಗಿ ತಮ್ಮ ಫೇವರಿಟ್ ಶೋಗಳನ್ನು ಆಲಿಸಲು ಮತ್ತು ಗೂಗಲ್ ಪಾಡ್ಕಾಸ್ಟ್ಸ್ನಲ್ಲಿ ಹೊಸದನ್ನು ಸಂಶೋಧಿಸಲು ನೆರವಾಗುವ ನಿಟ್ಟಿನಲ್ಲಿ ನೋಕಿಯಾ 3.4 ಜತೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಕಠಿಣ ಮತ್ತು ಧೀರ್ಘ ಬಾಳಿಕೆ
ನೋಕಿಯಾ 34. ಆಕರ್ಷಕವಾದ ನಿರ್ಮಾಣ ಗುಣಮಟ್ಟವನ್ನು ಹೊಂದಿದ್ದು ಸಂಪೂರ್ಣ ಮರುಬಳಕೆ ಮಾಡಬಹುದಾದ ಡೈ ಕಾಸ್ಟ್ ಲೋಹದ ಚಾಸಿಸ್ ಮತ್ತು ಸುಲಲಿತವಾದ ಧೀರ್ಘಕಾಲಿಕ ಬಾಳಿಕೆ ಬರುವ ರೀತಿಯಲ್ಲಿ ನೋಕಿಯಾ 3.4 ನ್ನು ತಯಾರಿಸಲಾಗಿದೆ. 3ಡಿ ನ್ಯಾನೊ ವಿನ್ಯಾಸದ ಹಿಂಬದಿ ರಕ್ಷಾಕವಚ ಈ ಮೊಬೈಲ್ ನ ವಿಶೇಷತೆಯಾಗಿದ್ದು, ಇದು ಕೈಗಳಲ್ಲಿ ಭದ್ರವಾಗಿ ಸಾಧನವನ್ನು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ.