ತ್ರಿವಳಿ ರಿಯರ್ ಕ್ಯಾಮೆರಾ ಹೊಂದಿರುವ ವಿವೋ Y51A ಭಾರತದ ಮಾರುಕಟ್ಟೆಗೆ ಲಗ್ಗೆ

ಮೊಬೈಲ್ ತಯಾರಕ ಸಂಸ್ಥೆ ವಿವೋ ವೈ ಸರಣಿಯನ್ನು ವಿಸ್ತರಿಸಿದ್ದು, Y51A ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

Published: 11th January 2021 04:56 PM  |   Last Updated: 11th January 2021 04:56 PM   |  A+A-


Vivo Y51A with triple rear camera launched at Rs 17,990

ತ್ರಿವಳಿ ರಿಯರ್ ಕ್ಯಾಮೆರಾ ಹೊಂದಿರುವ ವಿವೋ Y51A ಭಾರತದ ಮಾರುಕಟ್ಟೆಗೆ ಲಗ್ಗೆ

Posted By : Srinivas Rao BV
Source : Online Desk

ಮೊಬೈಲ್ ತಯಾರಕ ಸಂಸ್ಥೆ ವಿವೋ ವೈ ಸರಣಿಯನ್ನು ವಿಸ್ತರಿಸಿದ್ದು, Y51A ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

1 ಟಿಬಿ ವರೆಗೂ ವಿಸ್ತರಿಸಬಹುದಾದ 128 ಜಿಬಿ ಸಂಗ್ರಹ ಸಾಮರ್ಥ್ಯ ಹಾಗೂ 8 ಜಿಬಿ ವರೆಗಿನ ರ್ಯಾಮ್, ಹೊಂದಿರುವ ಮೊಬೈಲ್ ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ಅಮೇಜಾನ್, ಫ್ಲಿಪ್ ಕಾರ್ಟ್, ಪೇಟಿಎಂ, ಟಾಟಾಕ್ಲಿಕ್ ಸಂಸ್ಥೆಯ ಇ-ಸ್ಟೋರ್ ಗಳಲ್ಲಿ ಖರೀದಿಸಬಹುದಾಗಿದೆ.

16.71 ಸಿಎಂ (6.58) ಹ್ಯಾಲೊ ಫುಲ್ ವ್ಯೂ ಜೊತೆ ಗೆ(2408X1080) ಎಫ್ ಹೆಚ್ ಡಿ+ ರೆಸೆಲ್ಯೂಷನ್ ಡಿಸ್ಪ್ಲೇ, ವಿಡಿಯೋ ಹಾಗೂ ಗೇಮ್ ಗಳಿಗೆ ಅತ್ಯುತ್ತಮ ಅನುಭವ ನೀಡಲಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 6-ಸರಣಿ ಪ್ರೊಸೆಸರ್ ನ್ನು ಈ ಮೊಬೈಲ್ ಹೊಂದಿದ್ದು, ಆಂಡ್ರಾಯ್ಡ್ 11 ಆಧರಿತ ಇತ್ತೀಚಿನ ಫನ್ ಟಚ್ ಒಎಸ್11 ನ್ನು ಹೊಂದಿದೆ.

ಹಿಂಬದಿಯಲ್ಲಿ 48 ಮೆಗಾ ಪಿಕ್ಸಲ್ ರಿಯರ್ ಕ್ಯಾಮೆರಾವನ್ನು Y51A ಹೊಂದಿದ್ದು, ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಷನ್ (ಇಐಎಸ್) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. 

ಮುಂಭಾಗ ಹಾಗೂ ಹಿಂಬದಿಯ ಕ್ಯಾಮಾರಾಗಳಲ್ಲಿ ಸೂಪರ್ ನೈಟ್ ಕ್ಯಾಮೆರಾ ಸಾಮರ್ಥ್ಯ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ಕ್ಲಿಕ್ಕಿಸುವುದಕ್ಕೆ ಸಹಕಾರಿಯಾಗಲಿದೆ.

ತ್ರಿವಳಿ ಕ್ಯಾಮರಾಗಳು ಹೆಚ್ಚಿನ ವಿಶಾಲವಾದ ವ್ಯಾಪ್ತಿಯ ಫೋಟೋ ಕ್ಲಿಕ್ಕಿಸಲು ಸಹಕಾರಿಯಾಗಿದೆ. ಮುಂಭಾಗದಲ್ಲಿ 16 ಎಂಪಿ ಕ್ಯಾಮೆರಾ ಇದ್ದು, 5000ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 18W ಫಾಸ್ಟ್ ಚಾರ್ಜ್ ನ್ನು ಸಾಮರ್ಥ್ಯದ ಮೊಬೈಲ್ ಫೋನ್ ಗೆ 17,990 ಗೆ ಬೆಲೆ ನಿಗದಿಪಡಿಸಲಾಗಿದೆ.
 

Stay up to date on all the latest ಗ್ಯಾಡ್ಜೆಟ್ಸ್ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp