
ಒಪ್ಪೋ ಸಂಸ್ಥೆಯ 5 ಜಿ ಮೊಬೈಲ್ ಫೋನ್ ಮಾರುಕಟ್ಟೆಗೆ ಲಗ್ಗೆ
ಮೊಬೈಲ್ ಫೋನ್ ತಯಾರಕ ಸಂಸ್ಥೆ ಒಪ್ಪೊ 2021 ರ ಮೊದಲ ಮೊಬೈಲ್ ಫೋನ್ ನ್ನು ಮಾರುಕಟ್ಟಗೆ ಬಿಡುಗಡೆ ಮಾಡಿದೆ.
"ಒಪ್ಪೋ ರೆನೋ ಪ್ರೋ 5 ಜಿ" ಮೊಬೈಲ್ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದು, ರೆನೋ ಸರಣಿಯಲ್ಲಿ ಇದೇ ಮೊದಲ 5 ಜಿ ಸ್ಮಾರ್ಟ್ ಆಗಿದೆ.
ಸಿಂಗಲ್ ಮೆಮೊರಿ ಆವೃತ್ತಿಯ ಬಂದಿರುವ ಒಪ್ಪೊ ರೆನೋ 5 ಜಿ ಪ್ರೋ 8 ಜಿಬಿ ರ್ಯಾಮ್ 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಜ.22 ರಿಂದ ಪ್ಲಿಪ್ ಕಾರ್ಟ್, ಒಪ್ಪೊ ವೆಬ್ ಸೈಟ್ ಹಾಗೂ ಮುಖ್ಯ ರಿಟೇಲ್ ಸ್ಟೋರ್ ಗಳಲ್ಲಿ ಖರೀದಿಗೆ ಲಭ್ಯವಿದೆ.
ಗ್ರೇಟರ್ ನೋಯ್ಡಾದಲ್ಲಿ ಈ ಮೊಬೈಲ್ ಉತ್ಪಾದನೆಯಾಗಿದ್ದು,ಈ ಮೊಬೈಲ್ ನ ಎಫ್ ಡಿಎಫ್ ಸಿಸ್ಟಮ್ ಅಭಿವೃದ್ಧಿಪಡಿಸುವಲ್ಲಿ ಹೈದರಾಬಾದ್ ನ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಮಹತ್ವದ ಪಾತ್ರ ವಹಿಸಿದೆ.
ಎಫ್ ಡಿಎಫ್ ಸಿಸ್ಟಮ್ ನ ಪೋರ್ಟ್ರೈಟ್ ಪರ್ಸೆಪ್ಷನ್ ಇಂಜಿನ್ ರೆನೋ 5 ಪ್ರೋ ಬಳಕೆದಾರರಿಗೆ ಪೋರ್ಟೈಟ್ ಇಮೇಜ್ ನಲ್ಲಿ ಫೀಚರ್ ಗಳನ್ನು ಸ್ಪಷ್ಟವಾಗಿಸುತ್ತದೆ.
ವಿಡಿಯೋ ಚಿತ್ರೀಕರಿಸುವುದಕ್ಕೆ ಈ ಫೀಚರ್ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. 64 ಮೆಗಾ ಪಿಕ್ಸಲ್ ಮುಖ್ಯ ಸೆನ್ಸರ್, 8 ಮೆಗಾಪಿಕ್ಸಲ್ ಅಲ್ಟ್ರಾವೈಡ್ ಸೆನ್ಸರ್, 2 ಎಂಪಿ ಮ್ಯಾಕ್ರೋ ಸೆನ್ಸಾರ್ ಹಾಗೂ 2 ಎಂಪಿ ಮೋನೋ ಸೆನ್ಸಾರ್ ನ್ನು ಒಳಗೊಂಡಿದೆ.
ಈ ಸ್ಮಾರ್ಟ್ ಫೋನ್ ನಲ್ಲಿ 32 ಎಂಪಿ ಸೆಲ್ಫಿ ಕ್ಯಾಮರ ಅಳವಡಿಸಲಾಗಿದ್ದು ಆಂಡ್ರಾಯ್ಡ್ 11 ಆಧಾರಿತ ಕಲರ್ ಒ. ಎಸ್ 11.1 ನ್ನು ಹೊಂದಿದೆ
6.5 ಇಂಚಿನ Super AMOLED ಡಿಸ್ಲ್ಪೇ ಹೊಂದಿದ್ದು, 20:9 ಆಸ್ಪೆಕ್ಟ್ ರೇಷಿಯೋ ಹಾಗೂ 1080x2400 ಪಿಕ್ಸಲ್ ರೆಸೆಲ್ಯೂಷನ್ ನ್ನು ಹೊಂದಿದೆ. 4350 ಎಂಎಎಚ್ ಬ್ಯಾಟರಿ, 65W ಫಾಸ್ಟ್ ಚಾರ್ಜಿಂಗ್ ಸಮಾರ್ಥ್ಯವನ್ನು ಈ ಮೊಬೈಲ್ ಹೊಂದಿದ್ದು 35,990 ರೂಪಾಯಿಗಳ ಬೆಲೆಯನ್ನು ನಿಗದಿಪಡಿಸಲಾಗಿದೆ.