
ಸ್ಮಾರ್ಟ್ ಫೋನ್ ಮಾರುಕಟ್ಟೆ ತೊರೆಯಲಿರುವ ಎಲ್ ಜಿ!
ನವದೆಹಲಿ: ಮೊಬೈಲ್ ಉತ್ಪಾದಕ ಸಂಸ್ಥೆ ಎಲ್ ಜಿ ಸ್ಮಾರ್ಟ್ ಫೋನ್ ಮಾರುಕಟ್ಟೆ ತೊರೆಯುವ ಸೂಚನೆ ನೀಡಿದೆ.
ಎಲ್ ಜಿ ಮೊಬೈಲ್ ಉದ್ಯಮ 2015 ರಿಂದ ನಷ್ಟ ಎದುರಿಸುತ್ತಿದ್ದು, ಈ ವರ್ಷ ಹಾಗೂ ಕಳೆದ ವರ್ಷ 4.5 ಬಿಲಿಯನ್ ಡಾಲರ್ ಕಾರ್ಯಾಚರಣೆಯ ನಷ್ಟವನ್ನು ಎದುರಾಗುತ್ತಿದೆ.
ಫೋಲ್ಡಬಲ್ ಎಲ್ ಜಿ ವಿಂಗ್ ರೋಲಬಲ್ ಡಿವೈಸ್ ಗಳು ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ವಿಭಾಗಗಳಲ್ಲಿ ಎಲ್ ಜಿ ಹಲವಾರು ಪ್ರಯೋಗಗಳಿಗೆ ತೆರೆದುಕೊಂಡಿತ್ತು.
ಗಮನಾರ್ಹ ಮತ್ತು ಸುಸ್ಥಿರ ಮಾರುಕಟ್ಟೆ ಯಶಸ್ಸು ಎಲ್ ಜಿ ಸಂಸ್ಥೆ ಭಾರತದಲ್ಲಿ ಈ ವರೆಗೆ ಉಳಿವಿಗೆ ಕಾರಣವಾಗಿದೆ. ಜಾಗತಿಕ ಮಟ್ಟದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಎಲ್ ಜಿ ಸಂಸ್ಥೆ ಶೇ.1-2 ರಷ್ಟು ಪಾಲನ್ನು ಹೊಂದಿದೆ.
ಸಿಎಂಆರ್ ನ ಇಂಡಸ್ಟ್ರಿ ಇಂಟಲಿಜೆನ್ಸ್ ಗ್ರೂಪ್ (ಐಐಜಿ) ಮುಖ್ಯಸ್ಥ ಪ್ರಭು ರಾಮ್ ಎಲ್ ಜಿ ಕುರಿತು ಪ್ರತಿಕ್ರಿಯೆ ನೀಡಿದ್ದು, ಕುಸಿಯುತ್ತಿರುವ ಸ್ಮಾರ್ಟ್ ಫೋನ್ ವಿಭಾಗವನ್ನು ಎಲ್ ಜಿ ತ್ಯಜಿಸುವ ಆಯ್ಕೆಯನ್ನು ಪರಿಗಣಿಸುವ ಸಾಧ್ಯತೆ ಇದೆ. ಈ ಮೂಲಕ ರೋಬೋಟಿಕ್ಸ್ ಹಾಗೂ ಆಟೋಮೊಟೀವ್ ಕೇಂದ್ರಿತ ಗ್ರಾಹಕ ಉಪಕರಣಗಳ ವ್ಯವಹಾರದತ್ತ ಹೆಚ್ಚಿನ ಗಮನ ಹರಿಸುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಿದ್ದಾರೆ.