
ಐಪೋನ್-13
ನವದೆಹಲಿ: ಅಮೆರಿಕಾದ ಬಹುರಾಷ್ಟ್ರೀಯ ಟೆಕ್ ಸಮೂಹ ಸಂಸ್ಥೆ ಆ್ಯಪಲ್ ಈಗ ಭಾರತದಲ್ಲಿಯೇ ತನ್ನ 'ಐಫೋನ್-13' ಮೊಬೈಲ್ ಫೋನ್ ಗಳನ್ನು ತಯಾರಿಸಲಿದೆ ಎಂದು ತಿಳಿದುಬಂದಿದೆ.
ಶೀಘ್ರದಲ್ಲೇ ಭಾರತದಲ್ಲಿ ಸ್ಥಳೀಯವಾಗಿ ಚೆನ್ನೈ ಬಳಿಯ ಫಾಕ್ಸ್ಕಾನ್ ಸ್ಥಾವರದಲ್ಲಿ ಐಫೋನ್ 13 ಅನ್ನು ತಯಾರಿಸಲಾಗುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
GSM ಅರೆನಾ ನೀಡಿರುವ ಮಾಹಿತಿ ಪ್ರಕಾರ, ಕ್ಯುಪರ್ಟಿನೊ ಮೂಲದ ಆ್ಯಪಲ್ ಕಂಪನಿಯು ಡಿಸೆಂಬರ್ನಿಂದಲೇ ಭಾರತದಲ್ಲಿ ಐಫೋನ್ 13 ನ ಪ್ರಾಯೋಗಿಕ ಉತ್ಪಾದನೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ. iPhone 12, iPhone 11 ಮತ್ತು iPhone SE (2020) ನಂತಹ ಹಳೆಯ ಮಾದರಿಗಳನ್ನು ಸಹ ಭಾರತದಲ್ಲಿ ತಯಾರಿಸಲಾಗುತ್ತಿದೆ. ಆ್ಯಪಲ್ ಭಾರತದಲ್ಲಿ ಮಾರಾಟ ಮಾಡುವ ಶೇ.70 ಪ್ರತಿಶತ ಫೋನ್ಗಳನ್ನು ಸ್ಥಳೀಯವಾಗಿ ತಯಾರಿಸುತ್ತಿದೆ ಎಂದು ಅಂದಾಜಿಸಲಾಗಿದೆ.
ಈ ಹಿಂದೆ ಐಫೋನ್ 13 ಪ್ರೊ ಸರಣಿಯು ಭಾರತದಲ್ಲಿ ಉತ್ಪಾದನೆಯಾಗುವ ಸಾಲಿನಲ್ಲಿ ಮುಂದಿನದು ಎಂದು ಸೂಚಿಸಿತ್ತು. ಶೇ.20 ಪ್ರತಿಶತ ಆಮದು ತೆರಿಗೆಯನ್ನು ಒಳಗೊಂಡಿರುವ ಆಮದು ಸುಂಕಗಳ ಉಳಿಸುವ ಪ್ರೋತ್ಸಾಹವನ್ನು ಪಡೆಯುವುದರಿಂದ ಸ್ಮಾರ್ಟ್ಫೋನ್ ತಯಾರಕರು ತಮ್ಮ ಸಾಧನಗಳನ್ನು ಭಾರತದಲ್ಲಿ ಜೋಡಿಸಲು ಬಯಸುತ್ತಾರೆ ಎನ್ನಲಾಗಿದೆ.
ಸದ್ಯದಲ್ಲಿಯೇ, Apple ತನ್ನ ಐಫೋನ್ ಉತ್ಪಾದನೆಯ 20 ಪ್ರತಿಶತವನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸುತ್ತದೆ ಎಂದು ವದಂತಿಗಳಿವೆ. ಮಿಂಚಿನ ವೇಗದ A15 ಬಯೋನಿಕ್ ಚಿಪ್, ಸುಧಾರಿತ ಕ್ಯಾಮೆರಾ ವ್ಯವಸ್ಥೆಗಳು, ಉತ್ತಮ ಬ್ಯಾಟರಿ ಬಾಳಿಕೆ, ಪ್ರಭಾವಶಾಲಿ ಬಾಳಿಕೆ ಮತ್ತು 5G ಸೇರಿದಂತೆ ಕೆಲವು ಹೊಸ ವೈಶಿಷ್ಟ್ಯಗಳೊಂದಿಗೆ ಐಫೋನ್ 13 ಅನ್ನು ಸೆಪ್ಟೆಂಬರ್ 14 ರಂದು ಘೋಷಿಸಲಾಗಿತ್ತು.