100% ಮೇಡ್ ಇನ್ ಇಂಡಿಯಾ: ಮಿವಿ ಇಯರ್‌ಬಡ್‌ ಬಿಡುಗಡೆ – ಬೆಲೆ ಕೇವಲ 999 ರೂಪಾಯಿ!

ಶೇ.100ರಷ್ಟು ಸಂಪೂರ್ಣ ಸ್ವದೇಶಿ ನಿರ್ಮಿತ ಇಯರ್‌ಬಡ್‌ ಅನ್ನು ಮಿವಿ ಸಂಸ್ಥೆ ಬಿಡುಗಡೆ ಮಾಡಿದ್ದು, ಇದರ ಬೆಲೆ ಕೇವಲ 999 ರೂಪಾಯಿ ಎನ್ನಲಾಗಿದೆ.

Published: 28th April 2022 11:27 AM  |   Last Updated: 28th April 2022 02:49 PM   |  A+A-


Mivi-Collar-2-Made-In-India

ಮಿವಿ ಇಯರ್‌ಬಡ್‌

Online Desk

ನವದೆಹಲಿ: ಶೇ.100ರಷ್ಟು ಸಂಪೂರ್ಣ ಸ್ವದೇಶಿ ನಿರ್ಮಿತ ಇಯರ್‌ಬಡ್‌ ಅನ್ನು ಮಿವಿ ಸಂಸ್ಥೆ ಬಿಡುಗಡೆ ಮಾಡಿದ್ದು, ಇದರ ಬೆಲೆ ಕೇವಲ 999 ರೂಪಾಯಿ ಎನ್ನಲಾಗಿದೆ.

ಹೈದ್ರಾಬಾದ್ ಮೂಲದ ಸ್ವದೇಶಿ ಕಂಪನಿಯಾಗಿರುವ ಮಿವಿ ಕಂಪನಿ ಮಾರುಕಟ್ಟೆಗೆ ಇಯರ್ ಬಡ್ ಗಳನ್ನು ಬಿಡುಗಡೆ ಮಾಡಿದೆ. ಉತ್ತಮ ಸಂಪರ್ಕಕ್ಕಾಗಿ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಮಿವಿ ಡ್ಯುಪಾಡ್ಸ್ F60 ಡ್ಯುಯಲ್ ನಲ್ಲಿ ಮೈಕ್ ಅನ್ನು ಹೊಂದಿದೆ. ಈ ಮಿವಿ ಇಯರ್‌ಬಡ್‌ಗಳೊಂದಿಗೆ ಅಮೆಜಾನ್ ಅಲೆಕ್ಸಾ, ಆ್ಯಪಲ್ ಸಿರಿ ಮತ್ತು ಗೂಗಲ್ ಅಸಿಸ್ಟಂಟ್ ಸಹ ಬೆಂಬಲಿಸುತ್ತದೆ. ನಿಯಂತ್ರಣಕ್ಕಾಗಿ ಮಿವಿ ಡ್ಯುಪಾಡ್ಸ್ F60 ನಲ್ಲಿ ಟಚ್ ಬೆಂಬಲವಿದೆ. ವೈರ್ಲೆಸ್ ಗ್ಯಾಜೆಟ್ ಗಳಲ್ಲಿ ಮಿವಿ ಸಂಸ್ಥೆಯ ಇಯರ್‌ಬಡ್‌ ಗಳ ಬೆಲೆ ತುಂಬಾ ಅಗ್ಗ ಎನ್ನಲಾಗಿದೆ. 

ಇದನ್ನೂ ಓದಿ: ವೊಡಾಫೋನ್-ಐಡಿಯಾ 4G ಪಾಕೆಟ್ ರೂಟರ್ Vi MiFi ಮಾರುಕಟ್ಟೆಗೆ

ಮಿವಿ ಡ್ಯುಪಾಡ್ಸ್ F60 13 ಎಂಎಂ ಎಲೆಕ್ಟ್ರೋ-ಡೈನಾಮಿಕ್ ಡ್ರೈವರ್‌ನಿಂದ ಚಾಲಿತವಾಗಿದ್ದು ಅದು ಸ್ಟುಡಿಯೋ ಗುಣಮಟ್ಟದ ಆಡಿಯೊವನ್ನು ಬಳಕೆದಾರರಿಗೆ ನೀಡಲಿದೆ. ಇದರೊಂದಿಗೆ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ (ENC) ಕೂಡ ಇದೆ. ಮಿವಿ ಡ್ಯುಯೊಪಾಡ್‌ಗಳನ್ನು ದೀರ್ಘಕಾಲದವರೆಗೆ ಬಳಸಲು ಸಾಕಷ್ಟು ಹಗುರವಾಗಿ ವಿನ್ಯಾಸಗೊಳಿಸಲಾಗಿದೆ.

ಮಿವಿ ಡ್ಯುಪಾಡ್ಸ್ F60 ನ ಬ್ಯಾಟರಿಯು 50 ಗಂಟೆಗಳ ಬ್ಯಾಕಪ್ ಹೊಂದಿದೆ ಎಂದು ಹೇಳಲಾಗಿದೆ. ಇದು ಚಾರ್ಜ್ ಮಾಡಲು ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಮಿವಿ ಡ್ಯುಪಾಡ್ಸ್ F60 ನೀರು ನಿರೋಧಕಕ್ಕಾಗಿ IPX4 ಎಂದು ರೇಟ್ ನೀಡಲಾಗಿದೆ. ಆದ್ದರಿಂದ ನೀರು ಅಥವಾ ಬೆವರು ತಾಕಿದರು ಪರಿಣಾಮ ಬೀರುವುದಿಲ್ಲ.

ಮಿವಿ ಡ್ಯುಪಾಡ್ಸ್ F60 ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ ಮತ್ತು ರೂ 999 ರ ಆರಂಭಿಕ ಬೆಲೆಯೊಂದಿಗೆ ಮಾರಾಟಕ್ಕೆ ಬಂದಿದೆ, ಬಳಿಕ ಇದರ ಬೆಲೆ 1,499 ರೂಪಾಯಿ ಆಗಲಿದೆ. ಮೊದಲ ಮಾರಾಟಕ್ಕೆ ಮಾತ್ರ 999 ಬೆಲೆ ಸೀಮಿತ. ಮಿವಿ ಡ್ಯುಪಾಡ್ಸ್ F60 ಹಸಿರು, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಇದನ್ನೂ ಓದಿ: ಇನ್ನು ಭಾರತದಲ್ಲಿಯೇ ತಯಾರಾಗಲಿದೆ ಆ್ಯಪಲ್ ಸಂಸ್ಛೆಯ 'ಐಫೋನ್-13'

ಕೆಲವೇ ದಿನಗಳ ಹಿಂದೆ ಕಂಪನಿಯು ಮಿವಿ ಫೋರ್ಟ್ S60 ಮತ್ತು S100 ಅನ್ನು ಒಳಗೊಂಡಿರುವ ಎರಡು ಹೊಸ ಸೌಂಡ್‌ಬಾರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಸೌಂಡ್‌ಬಾರ್ ವಿಭಾಗಕ್ಕೂ ಲಗ್ಗೆ ಇಟ್ಟಿತ್ತು. ಕಂಪನಿ ನೀಡಿರುವ ಮಾಹಿತಿ ಪ್ರಕಾರ, ಈ ಸೌಂಡ್‌ಬಾರ್‌ಗಳ 3,600 ಯುನಿಟ್‌ಗಳು ಮೊದಲ ದಿನದಲ್ಲಿ ಮಾರಾಟವಾಗಿವೆ ಎಂದು ಹೇಳಿದೆ.


Stay up to date on all the latest ಗ್ಯಾಡ್ಜೆಟ್ಸ್ news
Poll
Students greet each other, relieved that their SSLC examinations

SSLC ಪರೀಕ್ಷೆ ಫಲಿತಾಂಶ: 145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್; ಧಾರಾಳವಾಗಿ ಅಂಕ ನೀಡಿರುವ ಈ ಮೌಲ್ಯಮಾಪನ ರೀತಿ ಸರಿಯೇ?


Result
ಸರಿ
ಸರಿಯಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp