ವಿಶಿಷ್ಟ ಡಿಸೈನ್, ಯುಪಿಐ ಸೇವೆ ಸಹಿತ ಜಿಯೋಫೋನ್ ಪ್ರೈಮಾ 4G ಫೋನ್ ಬಿಡುಗಡೆ; ಬೆಲೆ 2599 ರೂ.
ರಿಲಯನ್ಸ್ ಜಿಯೋ ಸಂಸ್ಥೆ ತನ್ನ ನೂತನ ಜಿಯೋಫೋನ್ ಪ್ರೈಮಾ 4G ಫೋನ್ ಬಿಡುಗಡೆ ಮಾಡಿದ್ದು, ಈ ಫೋನ್ ಯುಪಿಐ ಬೆಂಬಲಿತ ಸೇವೆ ಹೊಂದಿರುವುದು ವಿಶೇಷವಾಗಿದೆ.
Published: 08th November 2023 06:39 PM | Last Updated: 08th November 2023 06:56 PM | A+A A-

ಜಿಯೋಫೋನ್ ಪ್ರೈಮಾ 4G ಫೋನ್
ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಅವರ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ನೂತನ ಜಿಯೋಫೋನ್ ಪ್ರೈಮಾ 4G ಫೋನ್ ಬಿಡುಗಡೆ ಮಾಡಿದ್ದು, ಈ ಫೋನ್ ಯುಪಿಐ ಬೆಂಬಲಿತ ಸೇವೆ ಹೊಂದಿರುವುದು ವಿಶೇಷವಾಗಿದೆ.
ಇಷ್ಟಕ್ಕೂ ಫೋನ್ ವಿಶೇಷತೆಗಳೇನು? ಬೆಲೆ ಎಷ್ಟು? ಎಂಬಿತ್ಯಾದಿ ಅಂಶಗಳು ಇಲ್ಲಿವೆ...
ಜಿಯೋಫೋನ್ ಪ್ರೈಮಾ (JioPhone Prima) ಕೀಪ್ಯಾಡ್ ಸಹಿತ 4ಜಿ ಸ್ಮಾರ್ಟ್‌ಫೋನ್ ಆಗಿದ್ದು, ಕೈಗೆಟುಕುವ ಬೆಲೆಗೆ ಲಭ್ಯವಾಗಲಿದೆ. ಈ ಫೋನ್ ಒಎಸ್ (KaiOS)ನಲ್ಲಿ ಕೆಲಸ ಮಾಡಲಿದ್ದು, ಇತರೆ ಸ್ಮಾರ್ಟ್ ಫೋನ್ ಗಳಲ್ಲಿ ಇರುವಂತೆ ಯೂಟ್ಯೂಬ್, ಫೇಸ್ ಬುಕ್, ವಾಟ್ಸಾಪ್, ಗೂಗಲ್ ವಾಯ್ಸ್ ಅಸಿಸ್ಟೆಂಟ್ ನಂಥ ಎಲ್ಲ ವೈಶಿಷ್ಟ್ಯಗಳು ಜಿಯೋಫೋನ್ ಪ್ರೈಮಾದಲ್ಲಿ ಕೇವಲ ಒಂದೇ ಕ್ಲಿಕ್ ನಲ್ಲಿ ದೊರೆಯಲಿದೆ.
ಇದನ್ನೂ ಓದಿ: Apple India revenue: ಭಾರತದಲ್ಲಿ ಆ್ಯಪಲ್ ಮೋಹ; ಆದಾಯ ಶೇ.48ರಷ್ಟು ಏರಿಕೆ, ಟಾಟಾದಿಂದ ಐಫೋನ್ ಉತ್ಪಾದನೆ
2.4 ಇಂಚಿನ ಡಿಸ್ ಪ್ಲೇ ಪರದೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್ 1800mAhನ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ವಿಡಿಯೋ ಕರೆ ಮತ್ತು ಫೋಟೋಗ್ರಫಿಗಾಗಿ ಮೊಬೈಲ್‌ನ ಎರಡೂ ಬದಿಯಲ್ಲಿ ಡಿಜಿಟಲ್ ಕ್ಯಾಮೆರಾಗಳನ್ನು ನೀಡಲಾಗಿದೆ. ಮೊಬೈಲ್ ಹಿಂಭಾಗದಲ್ಲಿ ಫ್ಲ್ಯಾಷ್ ಲೈಟ್ ಕೂಡ ಇದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್‌ನಂತಹ ಪ್ರೀಮಿಯಂ ಡಿಜಿಟಲ್ ಸೇವೆಗಳೊಂದಿಗೆ ಸ್ಮಾರ್ಟ್‌ಫೋನ್ ಸಿದ್ಧವಾಗಿದೆ. ಜಿಯೋ ಪ್ರೈಮಾ 23 ಭಾಷೆಗಳನ್ನು ಬೆಂಬಲಿಸುತ್ತದೆ. ಅಂದರೆ ಇದರಲ್ಲಿ 23 ಭಾಷೆಗಳಲ್ಲಿ ಕೆಲಸ ಮಾಡಬಹುದು.
ಯುಪಿಐ ಆಯ್ಕೆ
ಈ ಜಿಯೋಫೋನ್ ಪ್ರೈಮಾ ಫೋನ್ ಅನ್ನು ಯುಪಿಐ ಸೇವೆ ಸಹಿತವಾಗಿ ವಿನ್ಯಾಸಗೊಳಿಸಲಾಗಿದ್ದು, ಜಿಯೋಪೇ ಮೂಲಕ ಯುಪಿಐ ಪಾವತಿ ಮಾಡಬಹುದು.
ಇದನ್ನೂ ಓದಿ: ಸೌಂಡ್ ಬಾರ್ ಖರೀದಿ ಮಾಡ್ಬೇಕಾ... ಸರಿಯಾದ ಆಯ್ಕೆಗೆ ಈ ಸುದ್ದಿ ಓದಿ..
ಈ ಸ್ಮಾರ್ಟ್‌ಫೋನ್ ಅನ್ನು ಪ್ರಮುಖ ರಿಟೇಲ್ ಸ್ಟೋರ್‌ಗಳು ಮತ್ತು ರಿಲಯನ್ಸ್ ಡಿಜಿಟಲ್.ಇನ್, ಜಿಯೋಮಾರ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಅಮೆಜಾನ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಖರೀದಿಸಬಹುದು. ಇದರ ಬೆಲೆ 2599 ರೂ ಆಗಿದೆ.