ಶಂಖದಿಂದ ಬಂದ್ರೇನೆ ಔಷಧ!

Published: 30th November 2013 02:00 AM  |   Last Updated: 30th November 2013 12:38 PM   |  A+A-


Posted By : Lingaraj
ಈ ಚೆಲುವಾದ ಹೂವಿನ ಅನ್ವರ್ಥನಾಮ ಶಂಖಪುಷ್ಪ. ಅದಕ್ಕೆ ಆಯುರ್ವೇದದಲ್ಲಿ ವಿಶಿಷ್ಟ ಸ್ಥಾನ. ಸಾರಸ್ವತಾರಿಷ್ಟ ತಯಾರಿಸಲು ಬಳಕೆಯಾಗುವುದು ಇದರ ಬೇರೇ. ಆತಂಕ, ಒತ್ತಡ, ನಿದ್ದೆ ಬಾರದಿರುವಿಕೆ ಮುಂತಾದ ತೊಂದರೆಗಳಿಗೆ ಔಷಧವಾಗಿ ಬಳಸುತ್ತಾರೆ. ಶಂಖಪುಷ್ಪ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಕ್ರಿಮಿ ದೋಷಕ್ಕೂ ರಾಮಬಾಣ. ಕಫ, ದೋಷ ಮತ್ತು ಸ್ತ್ರೀ ಸಂಬಂಧಿ ರೋಗಗಳಿಗೆ ಔಷಧಿಯಾಗಿ ಬಳಸುತ್ತಾರೆ.

ಆಹಾರಕ್ಕೆ ನೈಸರ್ಗಿಕವಾಗಿ ಬಣ್ಣ ಬರಲು ಈ ಹೂವನ್ನು ಬಳಸುತ್ತಾರೆ. ತಲೆಗೆ ಹಚ್ಚುವ ತೈಲ ತಯಾರಿಕೆಯಲ್ಲಿಯೂ ನೀಲಿ ಶಂಖಪುಷ್ಪ ಹೂ ಮತ್ತು ಅದರ ಬೇರನ್ನು ಭೃಂಗರಾಜ ಸೊಪ್ಪಿನೊಂದಿಗೆ ಬಳಸುತ್ತಾರೆ. ಇದರಿಂದ ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುತ್ತವೆ.
ನೆನಪಿರಲಿ. ನೀವು ಔಷಧೀಯ ಉದ್ದೇಶಕ್ಕೆ ಶಂಖಪುಷ್ಪವನ್ನು ಬಳಸುವುದಿದ್ದರೆ ಆಯುರ್ವೇದ ತಜ್ಞರು ಅಥವಾ ನಾಟಿ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಒಳಿತು.

ಮನಮೋಹಕ ಚೆಲುವು
ಶಂಖಪುಷ್ಪ ಫೆಬೇಸಿಯಾ ಕುಟುಂಬಕ್ಕೆ ಸೇರಿದೆ. ಇದರ ಸಸ್ಯಶಾಸ್ತ್ರೀಯ ಹೆಸರು ಕ್ಲಿಟೋರಿಯಾ ಟರ್ನೆಟಿಯಾ. ಬಿಳಿ, ಕೆಂಪು, ಕಡು ನೀಲಿ, ನಸು ನೀಲಿ, ತಿಳಿ ನೇರಳೆ ಮುಂತಾದ ಬಣ್ಣಗಳಲ್ಲಿ ಕಾಣಸಿಗುವ ಇದರಲ್ಲಿ ಏಕ ಮತ್ತು ದ್ವಿತೀಯ ಎಂಬ ಎರಡು ತಳಿಗಳಿವೆ. ಏಕ ತಳಿಯ ಹೂವಿನಲ್ಲಿ ದೊಡ್ಡದಾದ ಒಂದು ಎಸಳಿದ್ದು, ಗಮನಿಸಿ ನೋಡಿದಾಗ ಬುಡದಲ್ಲಿ ಪುಟ್ಟದಾದ ಎರಡು ಎಸಳುಗಳು ಕಾಣಬಹುದು. ದ್ವಿತೀಯ ತಳಿಯಲ್ಲಿ ಒಂದಕ್ಕೊಂದು ಸುರುಳಿ ಸುತ್ತಿ ಕೊಂಡಿರುವ ಐದು ಎಸಳುಗಳಿವೆ. ಇದರ ಎಸಳುಗಳು ಮೃದು, ಹತ್ತಿರವಿರುವ ಗಿಡಗಳಿಗೆ ಹಬ್ಬುವ ಈ ಬಳ್ಳಿಯ ಹೂಗಳಿಂದ ತುಂಬಿದಾಗ ಮೋಹಕವಾಗಿ ಕಾಣುತ್ತದೆ. ಈ ಸಸ್ಯದಲ್ಲಿ ನಾಲ್ಕೈದು ಬೀಜಗಳಿರುವ ಕೋಡುಗಳು ಬೆಳೆಯುತ್ತವೆ. ಬೀಜ ಬಿದ್ದಲ್ಲಿ ತನ್ನಷ್ಟಕ್ಕೆ ಗಿಡವಾಗುತ್ತದೆ. ಪ್ರತ್ಯೇಕ ಆರೈಕೆ ಬೇಕಾಗಿಲ್ಲ. ನೀರುಣಿಸಿದರೆ ಸಾಕು.

- ಫಕ್ಕೀರೇಶ  ಗು. ಕುಂದಗೋಳ

Stay up to date on all the latest ಆರೋಗ್ಯ-ಜೀವನಶೈಲಿ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp