ಕೇರಳದಲ್ಲಿ ಕೋಳಿ ಜ್ವರ ಪತ್ತೆ

ಎಚ್೫ಎನ್೧ ರೋಗಾಣು ಇರುವ ಕೋಳಿ ಜ್ವರ ಕೇರಳದಲ್ಲಿ ಬಾತುಕೋಳಿಗಳಲ್ಲಿ ಪತ್ತೆಯಾಗಿದೆ...

Published: 27th November 2014 02:00 AM  |   Last Updated: 27th November 2014 06:54 AM   |  A+A-


Bird Flu

ಸಾಂದರ್ಭಿಕ ಚಿತ್ರ

ಕೊಟ್ಟಾಯಂ: ಎಚ್೫ಎನ್೧ ರೋಗಾಣು ಇರುವ ಕೋಳಿ ಜ್ವರ ಕೇರಳದಲ್ಲಿ ಬಾತುಕೋಳಿಗಳಲ್ಲಿ ಪತ್ತೆಯಾಗಿದೆ. ಇದು ತೀವ್ರ ಸಾಂಕ್ರಾಮಿಕ ಮತ್ತು ಮನುಷ್ಯರಿಗೆ ಮಾರಕ ಎನ್ನಲಾಗಿದೆ.

ರೋಗ ಹರಡದಂತೆ ತಡೆಯಲು ಸಾವಿರಾರು ಬಾತುಕೋಳಿಗಳನ್ನು ಕೊಟ್ಟಾಯಂನಲ್ಲಿ  ಸಾಮೂಹಿಕವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

೨೦೦೫-೨೦೦೬ ರಲ್ಲಿ ಈ ಎಚ್೫ಎನ್೧ ರೋಗಾಣು ಇಲ್ಲಿಯವರೆಗೂ ಏಶಿಯಾ, ಯೂರೋಪ್ ಮತ್ತು ಆಫ್ರಿಕಾ ಪ್ರದೇಶಗಳಲ್ಲಿ ಸುಮಾರು ೪೦೦ ಜನರನ್ನು ಬಲಿ ತೆಗೆದುಕೊಂಡು ಲಕ್ಷಾಂತರ ಜನರನ್ನು ರೋಗಗ್ರಸ್ಥನ್ನಾಗಿ ಮಾಡಿತ್ತು.

ಕಳೆದ ಕೆಲವು ದಿನಗಳಿಂದ ೨ ಲಕ್ಷಕ್ಕೂ ಹೆಚ್ಚು ಕೋಳಿಗಳನ್ನು ಕೊಲ್ಲಲಾಗಿದೆ ಮತ್ತು ೧೦ ಕಿಮೀ ಸುತ್ತಳತೆಯಲ್ಲಿ ಕಣ್ಗಾವಲು ಇಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
Stay up to date on all the latest ಆರೋಗ್ಯ-ಜೀವನಶೈಲಿ news with The Kannadaprabha App. Download now
facebook twitter whatsapp