ರಕ್ತ ಶುದ್ಧೀಕರಿಸಲು ಸಹಕಾರಿ ಪುದಿನ ಎಲೆ

ಆಯುರ್ವೇದ ಔಷಧ ತಯಾರಿಕೆಯಲ್ಲಿ ಪುದಿನ ಎಲೆಗೆ ಅಗ್ರಸ್ಥಾನ. ಹಲವು ಗಿಡಮೂಲಿಕೆಗಳಲ್ಲಿ ಪುದಿನ ಎಲೆ ಅತಿ ಹೆಚ್ಚು ಉಪಯೋಗ...
ಪುದಿನ ಎಲೆ
ಪುದಿನ ಎಲೆ

ಆಯುರ್ವೇದ ಔಷಧ  ತಯಾರಿಕೆಯಲ್ಲಿ  ಪುದಿನ ಎಲೆಗೆ ಅಗ್ರಸ್ಥಾನ. ಹಲವು ಗಿಡಮೂಲಿಕೆಗಳಲ್ಲಿ ಪುದಿನ ಎಲೆ ಅತಿ ಹೆಚ್ಚು ಉಪಯೋಗ. ಪ್ರತಿದಿನ ಆಹಾರದಲ್ಲಿ ಪುದಿನ ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.

ಪುದಿನ ಎಲೆಗಳನ್ನು ತಿನ್ನುವುದರಿಂದ ಬಾಯಿಯ ದುರ್ವಾಸನೆ ದೂರಾಗುತ್ತದೆ. ಹಲ್ಲಗಳಿಗೆ ತಗಲುವ ಹುಳುಕನ್ನು ಹೋಗಲಾಡಿಸುತ್ತದೆ. ವಸಡುಗಳನ್ನು ಆರೋಗ್ಯವಾಗಿಸುತ್ತದೆ ಪುದಿನ. ಜೊತೆಗೆ ಬಾಯಲ್ಲಿ ಉಂಟಾಗುವ ಅಲ್ಸರ್ ಗೆ ಪುದಿನ ಉತ್ತಮ ಔಷಧಿ.

ಒಂದು ಹಿಡಿ ಪುದಿನ ಎಲೆಯನ್ನು ರುಬ್ಬಿ ಸೋಸಿಕೊಂಡು ಅದಕ್ಕೆ ಸ್ವಲ್ಪ ಜೀರಿಗೆ, ನಿಂಬೆಹಣ್ಣು, ಜೇನುತುಪ್ಪ ಸೇರಿಸಿ ಪ್ರತಿದಿನ 3 ರಿಂದ 4 ಕಪ್ ಕುಡಿಯುವುದರಿಂದ ರಕ್ತವನ್ನು ಶುದ್ಧೀಕರಿ, ದೇಹವನ್ನು ಆರೋಗ್ಯಯುತವಾಗಿಸುತ್ತದೆ.ಇನ್ನು ಕರುಳಿನ ಮೇಲೆ ಉಂಟಾಗುವ ಅಲ್ಸರ್ ಅನ್ನು ನಿವಾರಿಸುತ್ತದೆ. ದೇಹದಲ್ಲಿರುವ ಟಾಕ್ಸಿನ್ ಹೊರಹಾಕುತ್ತದೆ.

ಪುದಿನ ಎಲೆ ಆಸಿಡಿಟಿ ನಿವಾರಣೆಗೆ ಉತ್ತಮ ಮದ್ದು. ಪುದಿನ ಎಲೆಯನ್ನು ಗ್ರೀನ್ ಟೀ ಜೊತೆ ಮಿಕ್ಸ್ ಮಾಡಿ ಕುಡಿಯುವುದರಿಂದ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ.ಗ್ಯಾಸ್ಟ್ರಿಕ್ ನಿಂದ ಉಂಟಾಗುವ ಹೊಟ್ಟೆನೋವು, ವಾಂತಿಯನ್ನು ದೂರ ಮಾಡುತ್ತದೆ.

 ಪುದಿನ ಎಲೆ ಚರ್ಮದ ಅಲರ್ಜಿ ಹಾಗೂ ಮೊಡವೆಗಳಿಗೆ ರಾಮಬಾಣ. ಪುದಿನ ದಲ್ಲಿ ಇರುವ ಸಾಲಿಸಿಲಿಕ್ ಆಸಿಡ್ ಚರ್ಮವನ್ನು ಮೃದುಗೊಳಿಸುವುದರ ಜೊತೆಗೆ ಚರ್ಮವನ್ನು ಸ್ವಚ್ಚಗೊಳಿಸಿ ಕ್ಲೆನ್ಸರ್ ರೀತಿ ಕೆಲಸ ಮಾಡುತ್ತದೆ.

ಇನ್ನು ಪುದಿನ ಶೀತ ಹಾಗೂ ಕೆಮ್ಮಿನಿಂದ ಬಳಲುವ ಮಕ್ಕಳಿಗೆ ತುಂಬಾ ಉಪಯುಕ್ತ. ಪುದಿನ ಎಲೆ ಜಜ್ಜಿ ರಸ ತೆಗೆದು ಅದಕ್ಕೆ ಸ್ವಲ್ಪ ಶುಂಠಿ ಮತ್ತು ತುಳಸಿ ರಸ ಹಾಗೂ ಜೇನುತುಪ್ಪ ಸೇರಿಸಿ ಮಕ್ಕಳಿಗೆ ನೀಡಿದರೆ ಕಫ ನಿವಾರಣೆಯಾಗಿ ಶೀತ ಗುಣಮುಖವಾಗುತ್ತದೆ. ಅಸ್ತಮಾದಿಂದ ಬಳಲುತ್ತಿರುವವರು ಪುದಿನ ಎಲೆಗಳನ್ನು ನಿಯಮಿತವಾಗಿ ಸೇವಿಸಿದರೆ ಉಸಿರಾಟದ ಸಮಸ್ಯೆ  ಕಡಿಮೆಯಾಗುತ್ತದೆ.

ಪುದಿನ ಎಲೆಯಲ್ಲಿ ಕ್ಯಾಲ್ಸಿಯಂ, ಪ್ರಾಸ್ಪರಸ್ ಮತ್ತು ವಿಟಮಿನ್ ಸಿ, ಡಿ, ಇ ಹಾಗೂ ವಿಟಮಿನ್ ಬಿ ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಅಲರ್ಜಿ, ನಿಶಕ್ತಿಯಿಂದ ದೂರವಿಡುತ್ತದೆ. ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ನೋವನ್ನು ಪುದಿನ ಉಪಶಮನ ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com