2017ರಲ್ಲಿ ಭಾರತದಲ್ಲಿ 1.2 ಲಕ್ಷ ಮಕ್ಕಳು, ಹದಿಹರೆಯದವರಲ್ಲಿ ಹೆಚ್ ಐವಿ; ವಿಶ್ವಸಂಸ್ಥೆ

ಕಳೆದ ವರ್ಷ 2017ರಲ್ಲಿ ಸುಮಾರು 1 ಲಕ್ಷದ 20 ಸಾವಿರ ಮಕ್ಕಳು ಮತ್ತು 19 ವರ್ಷದೊಳಗಿನ ಹದಿಹರೆಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಯುನೈಟೆಡ್ ನೇಷನ್ಸ್: ಕಳೆದ ವರ್ಷ 2017ರಲ್ಲಿ ಸುಮಾರು 1 ಲಕ್ಷದ 20 ಸಾವಿರ ಮಕ್ಕಳು ಮತ್ತು 19 ವರ್ಷದೊಳಗಿನ ಹದಿಹರೆಯದವರು ಹೆಚ್ ಐವಿಗೆ ತುತ್ತಾಗಿದ್ದಾರೆ. ಹೆಚ್ ಐವಿ ಪೀಡಿತರ ಸಂಖ್ಯೆ ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹೆಚ್ಚಾಗಿದೆ ಎಂದು ಯುನಿಸೆಫ್ ವರದಿ ತಿಳಿಸಿದೆ ಮತ್ತು 2030ರ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ ಪ್ರತಿದಿನ ಒಬ್ಬರು ಏಡ್ಸ್ ನಿಂದ ಸಾಯುವ ಸೂಚನೆಯಿದೆ ಎಂದು ಕೂಡ ಯುನಿಸೆಫ್ ವರದಿಯಲ್ಲಿ ತಿಳಿಸಿದೆ.

ಪಾಕಿಸ್ತಾನದಲ್ಲಿ ಈ ಸಂಖ್ಯೆ 5,800ರಷ್ಟಿದ್ದು, ನೇಪಾಳದಲ್ಲಿ 1,600, ಬಾಂಗ್ಲಾದೇಶದಲ್ಲಿ ಸಾವಿರಕ್ಕಿಂತ ಕಡಿಮೆಯಿದೆ ಎಂದು ಯುನಿಸೆಫ್ ವರದಿ ತಿಳಿಸಿದೆ. ಮಕ್ಕಳು, ಹೆಚ್ ಐವಿ ಮತ್ತು ಏಡ್ಸ್ ; ದ ವರ್ಲ್ಡ್ ಇನ್ 2030 ಎಂಬ ವರದಿಯನ್ನು ಯುನಿಸೆಫ್ ನಿನ್ನೆ ಬಿಡುಗಡೆ ಮಾಡಿದೆ.
ಏಡ್ಸ್ ಕುರಿತು ಮುನ್ನೆಚ್ಚರಿಕೆ ವಹಿಸಿ ತಡೆಯಲು ಯತ್ನಿಸದಿದ್ದರೆ 2030ರ ಹೊತ್ತಿಗೆ 100ರಲ್ಲಿ ಸುಮಾರು 80 ಹದಿಹರೆಯದವರು ಏಡ್ಸ್ ಗೆ ಬಲಿಯಾಗಲಿದ್ದಾರೆ ಎನ್ನುತ್ತಾರೆ ಯುನಿಸೆಫ್ ಮುಖ್ಯಸ್ಥ ಹೆನ್ರಿಟ್ಟ ಫೊರೆ.

ಪ್ರಸ್ತುತ ವಿಶ್ವಾದ್ಯಂತ 3 ಮಿಲಿಯನ್ ಜನರು 19 ವರ್ಷಕ್ಕಿಂತ ಕೆಳಗಿನವರು ಮತ್ತು ಯುವಕರು ಹೆಚ್ ಐವಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ವಿಶ್ವದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮಕ್ಕಳು 5 ವರ್ಷಕ್ಕಿಂತ ಮೊದಲೇ ಏಡ್ಸ್ ಗೆ ತುತ್ತಾಗುತ್ತಿದ್ದಾರೆ. 2030ರ ಹೊತ್ತಿಗೆ ವಿಶ್ವದಲ್ಲಿ ಹೆಚ್ ಐವಿ ಸೋಂಕಿತ ಮಕ್ಕಳು 1.4 ಮಿಲಿಯನ್ ನಷ್ಟಾಗಲಿದ್ದು ಪ್ರಸ್ತುತ 1.9 ಮಿಲಿಯನ್ ನಷ್ಟಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com