ಮನೆಯಲ್ಲೇ ಕೈಗೆಟಕುವ ಬಜೆಟ್‌ನಲ್ಲಿ ಸೌಂದರ್ಯ ಕಾಪಾಡಿಕೊಳ್ಳಲು ಟಿಪ್ಸ್!

ಪ್ರಸ್ತುತ ಯುವ ಜನತೆಯಲ್ಲಿ ಅಪಾರವಾದ ಸೌಂದರ್ಯ ಕಾಲಜಿಯನ್ನು ಹೊಂದಿದ್ದು ಎಲ್ಲರ ಮಧ್ಯೆ ತಾವು ಸುಂದರವಾಗಿ, ಆಕರ್ಷಕವಾಗಿ ಕಾಣಬೇಕೆಂಬ ಆಸೆ ಹೊಂದಿರುತ್ತಾರೆ...

Published: 25th September 2018 12:00 PM  |   Last Updated: 25th September 2018 05:06 AM   |  A+A-


ಸಂಗ್ರಹ ಚಿತ್ರ

Posted By : VS
Source : The New Indian Express
ಪ್ರಸ್ತುತ ಯುವ ಜನತೆಯಲ್ಲಿ ಅಪಾರವಾದ ಸೌಂದರ್ಯ ಕಾಲಜಿಯನ್ನು ಹೊಂದಿದ್ದು ಎಲ್ಲರ ಮಧ್ಯೆ ತಾವು ಸುಂದರವಾಗಿ, ಆಕರ್ಷಕವಾಗಿ ಕಾಣಬೇಕೆಂಬ ಆಸೆ ಹೊಂದಿರುತ್ತಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಸೌಂದರ್ಯವರ್ದಕ ಉತ್ಪನ್ನಗಳ ಕುರಿತ ಜಾಹೀರಾತುಗಳು ಹೆಚ್ಚಾಗುತ್ತಿವೆ. ಈ ಜಾಹೀರಾತುಗಳನ್ನು ನೋಡಿ ಸೌಂದರ್ಯವರ್ದಕಗಳನ್ನು ಖರೀದಿಸುವುದು ಕೆಲವೊಮ್ಮೆ ದುಸ್ತರ. ಹೀಗಾಗಿ ನಿಮ್ಮ ಕೈಗೆಟಕುವ ಬಜೆಟ್ ನಲ್ಲಿ ಸೌಂದರ್ಯವನ್ನು ಹೆಚ್ಚಿಕೊಳ್ಳುವ ಕೆಲ ಸಲಹೆಗಳು ಇಲ್ಲಿವೆ.

2017ರ ಜಾಗತಿಕ ಮಾರುಕಟ್ಟೆಯಲ್ಲಿ ಕಾಸ್ಮೆಟಿಕ್ ಉತ್ಪನ್ನಗಳ ಮೌಲ್ಯ 532.43 ಬಿಲಿಯನ್ ಡಾಲರ್ ಮತ್ತು ಭಾರತದಲ್ಲಿ 6 ಮಿಲಿಯನ್ ಡಾಲರ್ ಮೌಲ್ಯವಿದೆ. ಇದನ್ನು ಗಮನಿಸಿದರೇ ಜಗತ್ತಿನಲ್ಲಿ ಯುವ ಸಮೂಹಕ್ಕೆ ಸೌಂದರ್ಯ ಕಾಳಜಿ ಎಷ್ಟಿದೆ ಅಂತ ಗೊತ್ತಾಗುತ್ತದೆ. ಸೌಂದರ್ಯ ನಿರ್ವಹಣೆ ವೆಚ್ಚ ಹೆಚ್ಚಿರಬಹುದು ಅಥವಾ ಕಡಿಮೆ ಇರಬಹುದು. ಆದರೆ ಕೆಲ ಕಾರ್ಯತಂತ್ರ ಖರ್ಚುಗಳಿಂದ ಹೊಳೆಯುವ ಚರ್ಮವನ್ನು ಪಡೆಯಬಹುದು ಇದರಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುವುದಿಲ್ಲ. ಕ್ರೆಡಿಟ್ ಕಾರ್ಡ್ ಅನ್ನು ಹೆಚ್ಚಾಗಿ ಬಳಸದೆ ನಿಮ್ಮ ಚರ್ಮದ ರಕ್ಷಣೆಯನ್ನು ಮಾಡುವುದು ಹೇಗೆ ಎಂಬ ಕೆಲವು ಸಲಹೆಗಳು ಇಲ್ಲಿವೆ. 

ಹಣ್ಣು ಮತ್ತು ತರಕಾರಿ ಸೇವನೆ
ಸುಂದರ ಚರ್ಮ ನಿಮ್ಮ ದೇಹದ ಒಳಗಿನಿಂದಲೇ ವೃದ್ಧಿಯಾಗುತ್ತದೆ. ನೀವು ಆರೋಗ್ಯವಾಗಿಲ್ಲದಿದ್ದರೆ ಸೌಂದರ್ಯ, ಹೊಳೆಯುವ ಚರ್ಮವನ್ನು ಪಡೆಯಲು ಸಾಧ್ಯವಿಲ್ಲ. ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ನಿಮ್ಮ ದೇಹದ ಒಳಗೆ ಗಾಸಿಕೊಂಡಿರುವ ಕಣಗಳನ್ನು ಕೂಡಿಸುತ್ತದೆ. ಪೌಷ್ಟಿಕಾಂಶಯುಕ್ತ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಉಪಯುಕ್ತ. ದಿನಂಪ್ರತಿ ಆರು ಅಥವಾ ಎಂಟು ಗ್ಲಾಸ್ ನೀರು ಕುಡಿದರೇ ಒಳ್ಳೆಯದ್ದು. 

ಅಲೋವೆರಾ ಉಪಯೋಗ
ಇನ್ನು ಮನೆಯಲ್ಲೇ ಕೆಲ ಉಪಯುಕ್ತ ಬಳ್ಳಿಗಳನ್ನು ಬೆಳೆಸುವುದು ಒಳ್ಳೆಯದ್ದು ಉದಾಹರಣೆಗೆ ಅಲೋವೆರಾ. ಇದು ನಿಮ್ಮ ಚರ್ಮ ಮತ್ತು ದೇಹಕ್ಕೆ ಪರಿಪೂರ್ಣವಾದ ಅದ್ಭುತಗಳನ್ನು ನೀಡುತ್ತದೆ. ಪ್ರತಿದಿನ ಆಲೋವೆರಾ ಜ್ಯೂಸ್ ಕುಡಿಯಿರಿ ಜೊತೆಗೆ ಅಲೋವೆರಾ ರಸದಿಂದ ಮುಖಕ್ಕೆ ಹಾಗೂ ದೇಹಕ್ಕೆ ಮಸಾಜ್ ಮಾಡಿಕೊಳ್ಳುವುದು ಸೂಕ್ತ. 

ಉಪಯುಕ್ತ ಉತ್ಪನ್ನಗಳನ್ನು ಖರೀದಿಸಿ
ಉಪಯುಕ್ತ ಉತ್ಪನ್ನಗಳನ್ನು ಖರೀದಿಸಿ ಬಳಸುವುದು ಪ್ರಯೋಜನಕಾರಿಯಾಗಿರುತ್ತದೆ. ಕಡಿಮೆ ಬಜೆಟ್ ನ ಕಾಸ್ಮೆಟಿಕ್ ಉತ್ಪನ್ನಗಳು ನಮ್ಮ ಸೌಂದರ್ಯವನ್ನು ವೃದ್ಧಿಸಲು ಸಹಾಯಕವಾಗುತ್ತದೆ. 

ಸ್ನಾನದ ನೀರಿಗೆ ಹೂವು, ಗಿಡ ಮೂಲಿಕೆ
ನಿಮಗೆ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಮಯದ ಅಭಾವವಿದ್ದರೆ ನೀವು ಸ್ನಾನ ಮಾಡುವ ನೀರಿಗೆ ಕೆಲ ಹೂವುಗಳು ಹಾಗೂ ಮೂಲಿಕೆಗಳನ್ನು ಬಳಸಿ ಸ್ನಾನ ಮಾಡುವುದರಿಂದ ನಿಮ್ಮ ಚರ್ಮದ ಹೊಳಪು ಹೆಚ್ಚುತ್ತದೆ.
Stay up to date on all the latest ಆರೋಗ್ಯ news with The Kannadaprabha App. Download now
facebook twitter whatsapp