ಟೈಮ್ ಪಾಸ್, ವಿಶ್ರಾಂತಿಗಾಗಿ ಸ್ಮಾರ್ಟ್ ಫೋನ್ ನೋಡುತ್ತೀರಾ?: ಆರೋಗ್ಯಕ್ಕೆ ಅದು ಒಳ್ಳೆಯದಲ್ಲ!

ಟೈಮ್ ಪಾಸ್ ಮಾಡುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೂ ನೀವು ಸ್ಮಾರ್ಟ್ ಫೋನ್ ಮೊರೆ ಹೋಗುತ್ತೀರಿ ಎಂದಾದರೆ ಖಂಡಿತವಾಗಿಯೂ ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಅರ್ಥ!
ಟೈಮ್ ಪಾಸ್, ವಿಶ್ರಾಂತಿಗಾಗಿ ಸ್ಮಾರ್ಟ್ ಫೋನ್ ನೋಡುತ್ತೀರಾ?: ಹಾಗಾದರೆ ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದರ್ಥ!
ಟೈಮ್ ಪಾಸ್, ವಿಶ್ರಾಂತಿಗಾಗಿ ಸ್ಮಾರ್ಟ್ ಫೋನ್ ನೋಡುತ್ತೀರಾ?: ಹಾಗಾದರೆ ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದರ್ಥ!
ಮೆಲ್ಬೋರ್ನ್: ಟೈಮ್ ಪಾಸ್ ಮಾಡುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೂ ನೀವು ಸ್ಮಾರ್ಟ್ ಫೋನ್ ಮೊರೆ ಹೋಗುತ್ತೀರಿ ಎಂದಾದರೆ ಖಂಡಿತವಾಗಿಯೂ ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಅರ್ಥ! 
ಹೀಗೆಂದು  ಮಾನವ ವರ್ತನೆಗಳಲ್ಲಿ ಕಂಪ್ಯೂಟರ್ ಗಳು (Computers in Human Behavior) ಎಂಬ ನಿಯತಕಾಲಿಕೆಯ ಸಂಶೋಧನಾ ವರದಿ ಹೇಳುತ್ತಿದೆ. ಆಸ್ಟ್ರೇಲಿಯಾದ ಡೀಕಿನ್ ವಿಶ್ವವಿದ್ಯಾಲಯದ ಸಂಶೋಧಕರು ಸ್ಮಾರ್ಟ್ಫೋನ್ ನ ನಿರಂತರ ಬಳಕೆ ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಅಧ್ಯಯನ ನಡೆಸಿದ್ದಾರೆ. 
ಮಾನಸಿಕ ಆರೋಗ್ಯದ ಮಟ್ಟ ಅತ್ಯುತ್ತಮವಾಗಿಲ್ಲದವರು, ನಕಾರಾತ್ಮಕ ಭಾವನೆಯುಳ್ಳವರು, ಸಂಯಮ ಕಡಿಮೆಯುಳ್ಳವರು, ಜೀವನದ ಉದ್ದೇಶವೇ ಕಳೆದುಕೊಂಡಿರುವಂತಾಗಿರುವವರು, ಸಾಮಾಜಿಕ ಒತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ ಕುಗ್ಗಿದವರು ಟೈಮ್ ಪಾಸ್, ವಿಶ್ರಾಂತಿಗಾಗಿ ಸ್ಮಾರ್ಟ್ ಫೋನ್ ನೋಡುತ್ತಿರುತ್ತಾರೆ ಎಂಬುದನ್ನು ಸಂಶೋಧಕರು ಮನಗಂಡಿದ್ದಾರೆ. 
ಹಾಗಂತ ಸ್ಮಾರ್ಟ್ ಫೋನ್ ಸಂಪೂರ್ಣ ಕೆಟ್ಟದ್ದೂ ಅಲ್ಲ ಸಂವಹನದ ಮಟ್ಟ ಅಂದರೆ ಕರೆ, ಸಂದೇಶ ರವಾನೆ ಮಾಡುವುದಕ್ಕೆ ಸಂಬಂಧಪಟ್ಟಂತೆ ಸ್ಮಾರ್ಟ್ ಫೋನ್ ಗಳು ಮಾನಸಿಕ ಆರೋಗ್ಯಕ್ಕೆ ಸಕಾರಾತ್ಮಕವಾಗಿರಲಿದೆ ಎಂದು ಸಂಶೋಧಕರು ಹೇಳಿದ್ದಾರೆ. 
ನೇರ ಸಂಪರ್ಕ ಹೊಂದುವುದಕ್ಕೆ ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡುವುದು ಒಳ್ಳೆಯದು ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಏನು ಮಾಡುತ್ತಿದ್ದಾರೆ ಎಂಬುದನ್ನು ನಿಷ್ಕ್ರಿಯವಾಗಿ ಗಮನಿಸುತ್ತಾ ಕೂರುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೇಯದಲ್ಲ ಎಂಬುದು ಸಂಶೋಧಕರು ಕಂಡುಕೊಂಡಿರುವ ಅಂಶ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com