ನಿದ್ರೆಯಲ್ಲಿ ಅತಿಯಾಗಿ ಗೊರಕೆ ಬಂದರೆ ತಕ್ಷಣ ಹೀಗೆ ಮಾಡಿ

: ಜನರು ನಿದ್ರೆಯಲ್ಲಿದ್ದಾಗ ಗೊರಕೆ ಬರುವುದು ಸಾಮಾನ್ಯ. ಇದಕ್ಕೆ ಯಾರೂ ಹೆಚ್ಚು ತಕೆ ಕೆಡಿಸಿಕೊಳ್ಳುವುದಿಲ್ಲ. ಗೊರಕೆ ಬಂದರೇನು ಮಹಾ, ಇದರಿಂದ ಹೆಚ್ಚೆಂದರೆ ಸಮೀಪದಲ್ಲಿ ಮಲಗಿದವರ ನಿದ್ರೆ ಹಾಳಾಗಬಹುದಷ್ಟೇ ಹೊರತು....

Published: 23rd April 2019 12:00 PM  |   Last Updated: 23rd April 2019 04:17 AM   |  A+A-


File Image

ಸಂಗ್ರಹ ಚಿತ್ರ

Posted By : RHN RHN
Source : The New Indian Express
ನ್ಯೂಯಾರ್ಕ್: ಜನರು ನಿದ್ರೆಯಲ್ಲಿದ್ದಾಗ ಗೊರಕೆ ಬರುವುದು ಸಾಮಾನ್ಯ. ಇದಕ್ಕೆ ಯಾರೂ ಹೆಚ್ಚು ತಕೆ ಕೆಡಿಸಿಕೊಳ್ಳುವುದಿಲ್ಲ. ಗೊರಕೆ ಬಂದರೇನು ಮಹಾ, ಇದರಿಂದ ಹೆಚ್ಚೆಂದರೆ ಸಮೀಪದಲ್ಲಿ ಮಲಗಿದವರ ನಿದ್ರೆ ಹಾಳಾಗಬಹುದಷ್ಟೇ ಹೊರತು ಆರೋಗ್ಯಕ್ಕೇನೂ ಅಪಾಯವಿಲ್ಲ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಈಗ ಹೊಸದಾಗಿ ಬಿಡುಗಡೆಯಾಗಿರುವ ಸಂಶೊಧನಾ ವರದಿಯೊಂದು ಹೇಳಿದಂತೆ ಗೊರಕೆಯು ಭವಿಷ್ಯದ ಆರೋಗ್ಯ ಸಮಸ್ಯೆಯ ಸೂಚಕವಾಗಿದೆ.

ಅಧ್ಯಯನದ ಪ್ರಕಾರ ದಿನಕ್ಕೆ ಐದು ಗಂಟೆಗಳ ಕಾಲ ನಿದ್ರಿಸುವ ಜನರು ಈ ಗೊರಕೆ ಸಮಸ್ಯೆಗೆ ಒಳಗಾಗಲಿದ್ದಾರೆ ಎಂದು  ಸಂಶೋಧಕರು ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಕಂಡುಕೊಂಡಿದ್ದಾರೆ. ದೀರ್ಘಕಾಲದ ನಿದ್ರಾಹೀನತೆಗಳಿಂದ ಆರೋಗ್ಯಕ್ಕೆ ಅತಿ ಹೆಚ್ಚಿನ ಅಪಾಯವಿದೆ ಎಂದೂ ಈ ವರದಿ ಹೇಳಿದೆ.ಮಂಗಳವಾರ ಸ್ಲೀಪ್ ಹೆಲ್ತ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನ ವರದಿ ಇದಾಗಿದೆ.

ನಿದ್ರೆಯು ನಮ್ಮ ಕೆಲಸದ ಶಕ್ತಿ, ಮಾನಸಿಕ ಸಾಮರ್ಥ್ಯ, ಸಾಮಾನ್ಯ ಆರೋಗ್ಯದ ಮೇಲೆ ಪ್ರಭಾವ ಬೀರುವ ಜೀವನದ ಪ್ರಮುಖ ಭಾಗವಾಗಿದೆ ಎಂದು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಲ್ಯಾಂಗೊನ್ ಹೆಲ್ತ್ ನ ಪ್ರಮುಖ ಸಂಶೋಧಕಿ ರೆಬೆಕಾ ರಾಬಿನ್ಸ್  ಹೇಳಿದ್ದಾರೆ."ನಿದ್ರೆಯು ಆರೋಗ್ಯಕರ, ಆರೋಗ್ಯಕರವಾದ ನಿದ್ರೆಯ ಅಭ್ಯಾಸ ಒಟ್ಟಾರೆ ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ" ಎಂದು ಅವರು ಹೇಳಿದರು.

ಈ ಸಂಶೋಧನೆ ವರದಿಯ ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ನಿದ್ರೆಯ ಬಗ್ಗೆ ಹೆಚ್ಚು ಸಾಮಾನ್ಯವಾದ 20 ಊಹೆಗಳನ್ನು ಗುರುತಿಸಲು ಸಂಶೋಧಕರು 8,000 ಕ್ಕಿಂತ ಹೆಚ್ಚು ಜಾಲತಾಣ(ವೆಬ್ ಸೈಟ್) ಪರಿಶೀಲಿಸಿದ್ದಾರೆ.

ಸ್ಲೀಪ್ ಮೆಡಿಸಿನ್ ತಜ್ಞರ ತಂಡದೊಂದಿಗೆ, ಗೊರಕೆಯಿಂದಾಗುವ ಉಪಯೋಗ ಹಾಗೂ ಅಪಾಯದ ಬಗೆಗೆ ಸತ್ಯ ಹಾಗೂ ಮಿಥ್ಯೆಗಳ ನಡುವೆ  ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ಈ ವರದಿ ತಯಾರಾಗಿದೆ.

ಗೊರಕೆಯು ನಿರುಪದ್ರವವಾಗಿದ್ದರೂ, ಇದು ಗಂಭೀರವಾದ ನಿದ್ರಾಹೀನತೆಗೆ ಕಾರಣವಾಗಲಿದೆ ಎಂದು ಅದ್ಯಯನ ಹೇಳಿದೆ.ಈ ನಿದ್ರೆ ವರ್ತನೆಯು ಹೃದಯಾಘಾತ ಅಥವಾ ಇತರ ಅಸ್ವಸ್ಥತೆಗಳಿಗೆ ಕಾರಣವಾಗಬಹುದು ಎಂದು ಅವರು ಹೇಳುತ್ತಾರೆ.ಅತಿಯಾದ ಗೊರಕೆ ಸಮಸ್ಯೆಯಿದ್ದರೆ ಅಂತಹಾ ವ್ಯಕ್ತಿಗಳು ವೈದ್ಯರ ಸಲಹೆ ಪಡೆಯಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ.

ಇನ್ನು ನಂಬಿಕೆಯ ಹೊರತಾಗಿಯೂ ಮಲಗುವ ಮುನ್ನ ಆಲ್ಕೋಹಾಲ್ ಯುಕ್ತ ಪಾನೀಯಗಳನ್ನು ಸೇವಿಸುವುದರಿಂದ ನಿದ್ರೆಗೆಭಂಗಬರುವ ಸಾಧ್ಯತೆ ಇದೆ. ರಾಬಿನ್ಸ್ ಮತ್ತು ಅವರ ಸಹೋದ್ಯೋಗಿಗಳು ಸ್ಥಿರವಾದ ನಿದ್ರೆ ವೇಳಾಪಟ್ಟಿಯನ್ನು ರಚಿಸುವುದು ಅತ್ಯಂತ ಮುಖ್ಯವೆಂದು ಭಾವಿಸುತ್ತಾರೆ. ಕನಿಷ್ಟ ಏಳು ಗಂಟೆಗಳ ಕಾಲ ನಿದ್ರೆ ಮಾನವ ದೇಹಕ್ಕ್ವೆ ಅಗತ್ಯವಾಗಿದೆ ಎಂದು ಅವರು ಹೇಳುತ್ತಾರೆ.
Stay up to date on all the latest ಆರೋಗ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp