ಗ್ಯಾಸ್ಟ್ರಿಕ್ ನಿಂದ ನೋವು ಅಥವಾ ಹೃದಯದ ಬೇನೆಯೊ? ಎರಡನ್ನೂ ಎಚ್ಚರಿಕೆಯಿಂದ ಗುರುತಿಸಿ

ಕೆಲ ಸಂದರ್ಭಗಳಲ್ಲಿ ಎದೆಉರಿ ಬಂದಾಗ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಬಂದೇ ಬಿಟ್ಟಿತೇನೂ ಎಂಬಂತೆ ಚಿಂತಿಸುತ್ತೇವೆ. ಇದು ತಪ್ಪು ಕಲ್ಪನೆ. ಇದಕ್ಕೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಗ್ಯಾಸ್ಟ್ರಿಕ್ ನಿಂದ ನೋವು ಅಥವಾ ಹೃದಯದ ಬೇನೆಯೊ? ಎರಡನ್ನೂ ಎಚ್ಚರಿಕೆಯಿಂದ ಗುರುತಿಸಬೇಕು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಮ್ಮ ಜೀವನ ಶೈಲಿ ಹಾಗೂ ಆಹಾರದ ಪದ್ಧತಿಯಿಂದಾಗಿ ಚಿಕ್ಕ ಅಥವಾ ದೊಡ್ಡ ರೀತಿಯ ಕಾಯಿಲೆಗಳು ಯಾವಾಗಲೂ ನಮ್ಮ ಸುತ್ತಲೇ ಸುತ್ತುತಿರುತ್ತವೆ.  

ಸೂಕ್ತ ರೀತಿಯಲ್ಲದ ಆಹಾರ ಪದ್ದತಿಯಿಂದಾಗಿ ಅಸಿಡಿಟಿಯಂತಹ ಸಮಸ್ಯೆಗಳು ಎಲ್ಲಾ ವಯೋಮಾನದ ಜನರನ್ನು ಕಾಡುವುದನ್ನು ನೋಡುತ್ತಿದ್ದೇವೆ. ಇಂದಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಎಂಬುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಕೆಲವೊಮ್ಮೆ ಗ್ಯಾಸ್ಟ್ರೀಕ್ ಹೆಚ್ಚಾದಾಗ ಲಘು ಹೃದಯಾಘಾತ ಎಂಬುದಾಗಿ ತಪ್ಪಾಗಿ ಭಾವಿಸುಬಿಡುತ್ತೇವೆ.

 ಕೆಲ ಸಂದರ್ಭಗಳಲ್ಲಿ ಎದೆಉರಿ ಬಂದಾಗ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಬಂದೇ ಬಿಟ್ಟಿತೇನೂ ಎಂಬಂತೆ ಚಿಂತಿಸುತ್ತೇವೆ. ಇದು ತಪ್ಪು ಕಲ್ಪನೆ. ಇದಕ್ಕೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಜೀರ್ಣಾಂಗ ಪ್ರಕ್ರಿಯೆಗೆ ಅಗತ್ಯವಾದ ಪ್ರಮಾಣಕ್ಕಿಂತ ಗ್ಯಾಸ್ಟ್ರಿಕ್ ಗ್ರಂಥಿಗಳು ಹೆಚ್ಚಿನ ಪ್ರಮಾಣದ ಆಮ್ಲವನ್ನು ಉತ್ಪಾದಿಸಿದಾಗಲೂ ಎದೆಉರಿ ಬರುತ್ತದೆ. 

ಅಂತೆಯೇ ಸ್ವಲ್ಪ ಭಾಗಿದಾಗ, ಮಲಗಿದಾಗ, ಅಥವಾ ತಿನ್ನುವಾಗಲೂ ಎದೆನೋವು ಕಾಣಿಸಿಕೊಳ್ಳುತ್ತದೆ. ಧೀರ್ಘಕಾಲದ ಕೆಮ್ಮು ಬಂದಾಗ,  ಗಂಟಲು ಕೆರೆತ  ಅಥವಾ ಜೋರು ಧ್ವನಿಯಲ್ಲಿ ಕೂಗಿದಾಗ  ಗಂಟಲಿನ ಹಿಂಬಾಗದಲ್ಲಿನ ದ್ರವವು ಬಿಸಿ, ಹುಳಿ ಆಮ್ಲೀಯ ಅಥವಾ ಉಪ್ಪಿನಾಂಶವನ್ನು ಉತ್ಪತ್ತಿ ಮಾಡಿ ಗ್ಯಾಸ್ ನೊಂದಿಗೆ ಎದೆನೋವು ಕಾಣಿಸಿಕೊಳ್ಳಬಹುದು.

ಇವೆರಡಕ್ಕೂ ಸಂಬಂಧವಿಲ್ಲದಿದ್ದರೂ ಕೆಲ ಸಂದರ್ಭದಲ್ಲಿ ಪರಸ್ಪರ ವ್ಯತಿರಕ್ತ ಪರಿಣಾಮ ಬೀರಬಹುದು. ಎದೆನೋವು , ಗ್ಯಾಸ್ಟ್ರಿಕ್ ಎರಡು ಕೂಡಾ ಜೀರ್ಣಕ್ರಿಯೆಗೆ ಸಂಬಂಧಿಸಿದ್ದರೂ, ಬೇರೆ ರೀತಿಯ ಹಾನಿಯನ್ನುಂಟುಮಾಡಬಹುದು. ಕೆಲವೊಮ್ಮೆ, ಇದು ಅನ್ನನಾಳದ ಉರಿಯೂತ, ಹುಣ್ಣುಗಳು, ನುಂಗುವಾಗ ತೊಂದರೆ ಅಥವಾ ನೋವಿನ ರೂಪದಲ್ಲಿ ಅನ್ನನಾಳಕ್ಕೆ ಹಾನಿಯನ್ನುಂಟು ಮಾಡುತ್ತದೆ. 

ಸೂಕ್ತ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಅನುಸರಿಸುವುದರಿಂದ ಗ್ಯಾಸ್ಟ್ರಿಕ್ ಅಥವಾ ಯಾವುದೇ ರೀತಿಯ ಎದೆನೋವು ಕಾಣಿಸಿಕೊಳ್ಳದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದಾರೆ.

ಸಾಮಾನ್ಯವಾಗಿ ಎದೆಉರಿ ಬರುವ ಸಂದರ್ಭಗಳು: ಭಾರವಾದ, ಕೊಬ್ಬಿನ ಆಹಾರ ತಿನ್ನುವುದು, ಮಸಾಲೆಯುಕ್ತ ಆಹಾರಗಳ ಸೇವನೆ, ಕಾಫಿ, ಅಲ್ಕೋಹಾಲ್,  ಟೊಮ್ಯಾಟೋ ರೀತಿಯ ಅಸಿಡಿಕ್ ಆಹಾರ ಸೇವನೆ , ಧೂಮಪಾನ, ಬೊಜ್ಜು, ಗರ್ಭಧಾರಣೆ ,ಈರುಳ್ಳಿಗಳು, ಕೊಬ್ಬಿನ ಅಥವಾ ಉರಿದ ಆಹಾರದ ಸೇವನೆ, ಕಾರ್ಬೋನೇಟೆಡ್ ಪಾನಿಯಗಳ ಸೇವನೆ ಸಂದರ್ಭದಲ್ಲೂ ಎದೆ ಉರಿ ಕಾಣಿಸಿಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com