ನೀರಿನ ಬಾಟಲಿ ಕ್ಯಾನ್ಸರ್ ಗೆ ಕಾರಣವಾಗಲಿದೆಯೇ?

 ನಮ್ಮ ಇಂದಿನ  ದೈನಂದಿನ ಬದುಕಿನಲ್ಲಿ ಪ್ಲಾಸ್ಟಿಕ್  ಒಂದು ಭಾಗವಾಗಿದೆ. ಪ್ಲಾಸ್ಟಿಕ್ ನಿಷೇಧ ಒತ್ತಾಯಿಸಿ ವಿಶ್ವದಾದ್ಯಂತ ಅರಿವು ಮೂಡಿಸಲಾಗುತ್ತಿದ್ದು, ಪರಿಸರ   ಕಾಳಜಿಯೂ ಅತಿಯಾಗಿದೆ. ಈ ಮಧ್ಯೆ ಪ್ಲಾಸ್ಟಿಕ್ ನಿಂದ ಕ್ಯಾನ್ಸರ್ ಉಂಟಾಗಲಿದೆಯೇ? ಎಂಬ ಪ್ರಶ್ನೆ ಕೂಡಾ ಮುಂದುವರೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ನಮ್ಮ ಇಂದಿನ  ದೈನಂದಿನ ಬದುಕಿನಲ್ಲಿ ಪ್ಲಾಸ್ಟಿಕ್  ಒಂದು ಭಾಗವಾಗಿದೆ. ಪ್ಲಾಸ್ಟಿಕ್ ನಿಷೇಧ ಒತ್ತಾಯಿಸಿ ವಿಶ್ವದಾದ್ಯಂತ ಅರಿವು ಮೂಡಿಸಲಾಗುತ್ತಿದ್ದು, ಪರಿಸರ  ಕಾಳಜಿಯೂ ಅತಿಯಾಗಿದೆ. ಈ ಮಧ್ಯೆ ಪ್ಲಾಸ್ಟಿಕ್ ನಿಂದ ಕ್ಯಾನ್ಸರ್ ಉಂಟಾಗಲಿದೆಯೇ? ಎಂಬ ಪ್ರಶ್ನೆ ಕೂಡಾ ಮುಂದುವರೆದಿದೆ. 

ಅಧ್ಯಯನ ಏನು ಹೇಳುತ್ತದೆ 

ಇತ್ತೀಚಿನ ದಿನಗಳಲ್ಲಿ ಸಂಶೋಧನೆಯು ಆರೋಗ್ಯದ ಬಗ್ಗೆ ಕೇಂದ್ರೀಕರಿಸಿದೆ, ಮುಖ್ಯವಾಗಿ ಬಿಸ್ಫೆನಾಲ್ ಎ (ಬಿಪಿಎ) ಮೇಲಿನ ಅಧ್ಯಯನ ಕೂಡಾ ಆರೋಗ್ಯದ ಸುತ್ತ  ಸುತ್ತುತ್ತಿದೆ. ಪ್ಲಾಸ್ಟಿಕ್ ಅನ್ನು ಗಟ್ಟಿಯಾಗಿಸಲು ಬಳಸುವ ಸಂಶ್ಲೇಷಿತ ರಾಸಾಯನಿಕವಾದ ಬಿಪಿಎಯನ್ನು  ಆಹಾರದ ಪಾತ್ರೆಗಳು, ಬಾಟಲಿಗಳು, ಫಲಕಗಳು ಮತ್ತು ಮಗ್‌ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪ್ಲಾಸ್ಟಿಕ್ ಪಾತ್ರೆಗಳು, ಕ್ಯಾನುಗಳು ಮತ್ತು ಬಾಟಲಿಗಳಿಗೆ ಲೈನಿಂಗ್ ತಯಾರಿಸಲು ಕೂಡಾ ಬಿಪಿಎಯನ್ನು ಬಳಸಲಾಗುತ್ತದೆ.

ಕಳೆದ ವರ್ಷಗಳಲ್ಲಿ ಮಾಡಿದಂತಹ ಅಧ್ಯಯನದ ಪ್ರಕಾರ ಬಿಪಿಎ ಮೇಲೆ ಹೆಚ್ಚಾಗಿ ಅವಲಂಬನೆಯಿಂದ ಅರೋಗ್ಯಕ್ಕೆ ಅಪಾಯ ಉಂಟಾಗಲಿದೆ. 2016 ಹಾಗೂ 2018ರಲ್ಲಿ ಪ್ರಕಟವಾದ ಕ್ರಮವಾಗಿ ಅಮೆರಿಕಾ ಹಾಗೂ ಈಜಿಪ್ಟ್ ಅಧ್ಯಯನ ವರದಿಯೊಂದರ ಪ್ರಕಾರ, ಬಿಪಿಎ ಬಳಕೆ ಸ್ತನ ಕ್ಯಾನ್ಸರ್ ಗೆ ಕಾರಣವಾಗಲಿದೆ ಎನ್ನಲಾಗಿದೆ. 

ಯುರೋಪಿಯನ್ ಆಹಾರ ಸುರಕ್ಷತಾ ಪ್ರಾಧಿಕಾರದ ಪ್ರಕಾರ , ವ್ಯಕ್ತಿಯ ದೇಹದ ತೂಕದ ಪ್ರತಿ ಕಿಲೋಗ್ರಾಂಗೆ ನಾಲ್ಕು ಮೈಕ್ರೊಗ್ರಾಂ ಬಿಪಿಎ ದೈನಂದಿನ ಸೇವನೆ ಉತ್ತಮ. ಆದಾಗ್ಯೂ, 2015ರಲ್ಲಿ ಇದೇ  ಪ್ರಾಧಿಕಾರದ ಮಾಡಿದ  ವೈಜ್ಞಾನಿಕ ಪರಿಶೀಲನೆಯ ನಂತರ, ಪ್ರಸ್ತುತದಲ್ಲಿನ  ಬಿಪಿಎ ಮಟ್ಟ ಯಾವುದೇ ವಯಸ್ಸಿನ ಜನರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎಂದು ತೀರ್ಮಾನಿಸಿತು. 

ಭಾರತದಲ್ಲಿ ಶಿಶುಗಳಿಗೆ ಬಳಸುವ ಬಾಟಲಿಗಳಿಗೆ ಬಿಪಿಎ ಬಳಕೆಯನ್ನು  ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್ ) 2015ರಲ್ಲಿ ನಿಷೇಧಿಸಿತ್ತು. ಈ ವರ್ಷ ನಡೆಸಿದ ಅಧ್ಯಯನವೊಂದರ ಪ್ರಕಾರ ಭಾರತದ ಮಾರುಕಟೆಯಲ್ಲಿ ಕೆಲ ಬಾಟಲಿ ಹಾಗೂ ಕಪ್ ಗಳಲ್ಲಿಯೂ ಬಿಪಿಎ ಬಳಕೆ ಕಂಡುಬಂದಿತ್ತು. ಬಿಪಿಎ ಹಾಗೂ ಬಿಪಿಎಫ್ ಬಳಕೆಯ ವಸ್ತುಗಳ ಅನಾರೋಗ್ಯಕ್ಕೆ ಕಾರಣವಾಗುವಂತಹ ಅಂಶ ಕಂಡುಬಂದಿತ್ತು. 

ಸುರಕ್ಷಿತವಾಗಿ ಜೀವಿಸಿ

ಬಿಪಿಎ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ, ಪ್ಲಾಸ್ಟಿಕ್ ನಿಷೇಧಿಸಿ, ಇದಕ್ಕಾಗಿ ಕೆಲವೊಂದು ಸುಲಭ ಪರಿಹಾರವನ್ನು ಇಲ್ಲಿ ನೀಡಲಾಗಿದೆ. 
* ನೀರನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಬಾಟಲಿಗಳ ಬದಲು ಸ್ಟೀಲ್ ಅಥವಾ ಗಾಜಿನ ಪಾತ್ರೆಗಳನ್ನು ಬಳಸಿ
* ಬಿಸಿ ಆಹಾರವನ್ನು  ಸಂಗ್ರಹಿಸಲು ಪಾಲಿಕಾರ್ಬೋರೇಟ್ ಪ್ಲಾಸ್ಟಿಕ್ ಪಾತ್ರೆಗಳ ಬಳಕೆಯನ್ನು ತಡೆಗಟ್ಟಿ. ಇದರ ಬದಲು ಗಾಜು ಮತ್ತಿತರ ಸೂಕ್ಷ್ಮ ರೀತಿಯ ಸುರಕ್ಷಿತ ಆಹಾರ ಕಂಟೈನರ್ ಬಳಕೆ ಹೆಚ್ಚು ಉಪಯುಕ್ತ 
* ಟಿನ್ ಮಾಡಿದ ಅಥವಾ ಪೂರ್ವಸಿದ್ಧ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ.
* ಆಹಾರವನ್ನು ಸುತ್ತಲು ಪ್ಲಾಸ್ಟಿಕ್ ಬದಲಿಗೆ ಮೇಣದ ಕಾಗದವನ್ನು ಬಳಸಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com