ಪುರುಷರಿಗೂ ಸ್ತನ ಕ್ಯಾನ್ಸರ್ ಬರಬಹುದು, ಜಾಗ್ರತೆ ಅತ್ಯಗತ್ಯ!

ಪುರುಷರಿಗೂ ಸ್ತನ ಕ್ಯಾನ್ಸರ್ ಬರುತ್ತದೆ. ರಾಜ್ಯದಲ್ಲಿ ವಾರ್ಷಿಕವಾಗಿ ಒಟ್ಟಾರೆಯಾಗಿ ಶೇ. 2 ರಷ್ಟು ಪುರುಷರಲ್ಲಿ ಸ್ತನ ಕ್ಸಾನ್ಯರ್ ಕಾಣಿಸಿಕೊಳ್ಳುತ್ತಿದೆ ಎಂದು ಗಂಥಿಶಾಸ್ತ್ರಜ್ಞರು ಹೇಳುತ್ತಾರೆ.

Published: 04th February 2019 12:00 PM  |   Last Updated: 04th February 2019 02:44 AM   |  A+A-


Casual photo

ಸಾಂದರ್ಭಿಕ ಚಿತ್ರ

Posted By : ABN ABN
Source : The New Indian Express
ಬೆಂಗಳೂರು: ಆಂಧ್ರಪ್ರದೇಶದಿಂದ ಬಂದು ಬೆಂಗಳೂರಿನಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ 34 ವರ್ಷದ ಪ್ರಮಂತನ್ (ಹೆಸರು ಬದಲಾಯಿಸಲಾಗಿದೆ) ಅವರಿಗೆ ಇತ್ತೀಚಿಗೆ ಎದೆಯ ಎಡಭಾಗದಲ್ಲಿ ಊತ ಕಾಣಿಸಿಕೊಂಡಿದ್ದು, ವೈದ್ಯರ ಬಳಿಗೆ ಹೋದಾಗ ಅಚ್ಚರಿ ಕಾದಿತ್ತು.

ತಪಾಸಣೆ ನಡೆಸಿದ ವೈದ್ಯರು ಮುಂದುವರಿದ ಹಂತದಲ್ಲಿ ಸ್ತನ ಕ್ಯಾನ್ಸರ್ ಇರುವ ಬಗ್ಗೆ ತಿಳಿಸಿದ್ದು, ಕ್ಯಾನ್ಸರ್ ವೈದ್ಯರ ಬಳಿ ತೋರಿಸಲು ಹೇಳಿದ್ದಾರೆ. ಹೌದು. ಪುರುಷರಿಗೂ ಸ್ತನ ಕ್ಯಾನ್ಸರ್ ಬರುತ್ತದೆ. ರಾಜ್ಯದಲ್ಲಿ ವಾರ್ಷಿಕವಾಗಿ ಒಟ್ಟಾರೆಯಾಗಿ  ಶೇ. 2 ರಷ್ಟು ಪುರುಷರಲ್ಲಿ ಸ್ತನ ಕ್ಸಾನ್ಯರ್ ಕಾಣಿಸಿಕೊಳ್ಳುತ್ತಿದೆ ಎಂದು ಗಂಥಿಶಾಸ್ತ್ರಜ್ಞರು ಹೇಳುತ್ತಾರೆ.

ಆದರೆ, ಬಹುತೇಕ ಪುರುಷ ರೋಗಿಗಳು 3 ಹಾಗೂ 4 ನೇ ಹಂತದಲ್ಲಿ ವೈದ್ಯರ ಬಳಿಗೆ ಹೋಗುತ್ತಾರೆ. ಮಹಿಳೆಯರಲ್ಲಿ ಮಾತ್ರ ಸ್ತನ ಕ್ಯಾನ್ಸರ್ ಬರುತ್ತದೆ, ಪುರುಷರಲ್ಲಿ ಬರುವುದಿಲ್ಲ ಎಂಬ ತಪ್ಪು ಕಲ್ಪನೆಯೇ ಇದಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ.

ಈಗಲೂ ಕೂಡಾ ಮಹಿಳೆಯರಲ್ಲಿ ಮಾತ್ರ ಸ್ತನ್ಯ ಕ್ಯಾನ್ಸರ್ ಬರುತ್ತದೆ ಎಂಬ ತಪ್ಪು ಕಲ್ಪನೆ ಚಾಲ್ತಿಯಲ್ಲಿದೆ. ಪುರುಷರಲ್ಲೂ ಕೂಡಾ ಸ್ತನ  ಕ್ಯಾನ್ಸರ್ ಬರುತ್ತದೆ. ಇದು ಮುಂದವರೆದ ಹಂತದಲ್ಲಿ ತಪಾಸಣೆಗೆ ಬರುವ ಪುರುಷರನ್ನು ನೋಡಿದ್ದೇವೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ. ರಾಮಚಂದ್ರ  ತಿಳಿಸಿದ್ದಾರೆ.

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅಂಕಿಸಂಖ್ಯೆಗಳ ಪ್ರಕಾರ ಒಟ್ಟಾರೆಯಾಗಿ 1200 ಹೊಸ ಸ್ತನ್ಯ ಕ್ಯಾನ್ಸರ್ ಪ್ರಕರಣಗಳಲ್ಲಿ ಕನಿಷ್ಠ ಪಕ್ಷ 30 ರಿಂದ 35 ಪುರುಷರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆ ಕಂಡುಬರುತ್ತಿದೆ. ರಾಜ್ಯದಾದ್ಯಂತ ಪಡೆದ ಪ್ರಕರಣಗಳಿಗಿಂತಲೂ ನಮ್ಮ ಸಂಸ್ಥೆಯಲ್ಲಿ ಕಂಡುಬಂದ ಪ್ರಕರಣಗಳ ಸಂಖ್ಯೆಯಲ್ಲಿ ಬದಲಾವಣೆ ತೋರುತ್ತಿದೆ. 2018ರ ವರ್ಷದ ಮಾಹಿತಿ ಪ್ರಕಾರ 1200 ಹೊಸ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಕನಿಷ್ಠ 30 ರಿಂದ 35 ಮಂದಿಯಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಡಾ. ರಾಮಚಂದ್ರ ವಿವರಿಸಿದ್ದಾರೆ.

ಇದನ್ನು ಹೊರತುಪಡಿಸಿದರೆ ಪ್ರತಿವರ್ಷ ಸುಮಾರು 10 ಸಾವಿರವರೆಗೂ ಸ್ತನ ಕ್ಯಾನ್ಸರ್  ಸಂಬಂಧಿತ ಪ್ರಕರಣಗಳು ಕಂಡುಬರುವ ಸಾಧ್ಯತೆ ಇದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲೂ ಪುರುಷ ಸ್ತನ ಕ್ಯಾನ್ಸರ್ ಪ್ರಕರಣಗಳು ಕಂಡುಬರುತ್ತಿವೆ. ಪ್ರತಿ ವರ್ಷ ಐವರು ಪುರುಷರಲ್ಲಿ ಇಂತಹ ಸಮಸ್ಯೆ ಗೋಚರಿಸುತ್ತಿದೆ.

ಪ್ರತಿವರ್ಷ ಐವರಲ್ಲಿ ಪುರುಷ ಸ್ತನ ಕ್ಯಾನ್ಸರ್ ಸಮಸ್ಯೆ ಇರುವುದನ್ನು ನೋಡುತ್ತಿದ್ದೇವೆ ಎಂದು ಅಪೊಲೊ ಆಸ್ಪತ್ರೆಯ ವೈದ್ಯ ಡಾ. ಎಂ. ಚಂದ್ರಶೇಖರ್ ಹೇಳಿದ್ದಾರೆ. ಕಳೆದ ವರ್ಷ ಇಬ್ಬರು ಪುರುಷರು ಸ್ತನ ಕ್ಯಾನ್ಸರ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗಿ ಸಿಎಂಐ ಆಸ್ಪತ್ರೆಯ ವೈದ್ಯ ಡಾ. ಜಿ. ಗಿರೀಶ್ ತಿಳಿಸಿದ್ದಾರೆ.

ಸ್ತನ ಕ್ಯಾನ್ಸರ್ ಗೆ ಕಾರಣಗಳು?
* ಕುಟುಂಬದ ಹಿನ್ನೆಲೆ ಇದಕ್ಕೆ ಕಾರಣಗಳೊಂದಾಗಿದೆ. ವೈದ್ಯರು ಅದನ್ನು ಜೀವನಶೈಲಿಯ ಕಾಯಿಲೆ ಎಂದು ಕರೆಯುತ್ತಾರೆ.

* ಸ್ತನ್ಯ ಕ್ಯಾನ್ಸರ್ ಜೀನ್ಸ್ ಜೆನೆಟಿಕ್ ಇನ್ ಹೆರಿಟೆನ್ಸ್

* ಕಡಿಮೆ ಪೀಳಿಗೆಯ ಪುರುಷ ಹಾರ್ಮೋನ್ ಗಳ ಮಟ್ಟಗಳು

* ಸ್ಥೂಲಕಾಯತೆ

*  ಹೆಪಾಟಿಕ್ ಸಾಂಕ್ರಾಮಿಕ ಕಾಯಿಲೆಯು ಸ್ತ್ರೀ ಹಾರ್ಮೋನ್  ಹೈಪರ್ ಪೀಳಿಗೆಗೆ ಕಾರಣವಾಗುತ್ತದೆ

* ಬೆಂಜೀನ್, ಟ್ರೈ, ಟೆಟ್ರಾಕ್ಲೋರೆಥೈಲಿನ್ ರಂತಹ ವಿಕಿರಣತೆ, ಶಾಖದ  ರಾಸಾಯನಿಕಗಳು

* ಸ್ತನ ಕ್ಯಾನ್ಸರ್ ಸಂಬಂಧಿತ ಅರಿವಿನ ಕೊರತೆ

ಹೇಗೆ ಚಿಕಿತ್ಸೆ ಪಡೆಯಬಹುದು?
ಬಹುತೇಕ ಪುರುಷರಲ್ಲಿನ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಮುಂದುವರೆದ ಹಂತದಲ್ಲಿ ವೈದ್ಯರ ಬಳಿಗೆ ಹೋಗುವರು. ಆದಾಗ್ಯೂ, ಮಹಿಳೆಯರಿಗೆ ಇರುವಂತೆ ಪುರುಷ ಸ್ತನ್ಯ ಕ್ಯಾನ್ಸರ್ ಗೂ ಚಿಕಿತ್ಸೆ ಇದೆ. ಆದರೆ, ಪುರುಷರಿಗೆ ಶಸ್ತ್ರ ಚಿಕಿತ್ಸೆಯ ನಂತರ ಬದಲಿಸುವ ಅಗತ್ಯ ಇರುವುದಿಲ್ಲ.

* ಸರ್ಜರಿ
* ಕೀಮೋಥೆರಪಿ
* ನಿರಂತರವಾಗಿ ಅನುಸರಣೆ,  ವಿಕಿರಣತೆ.
* ನಿರಂತರವಾಗಿ ಹಾರ್ಮೋನ್ ಗಳ ತಪಾಸಣೆ
* ಆರಂಭಿಕ ಹಂತದಲ್ಲಿ ರೋಗ ನಿರ್ಣಯ ಪತ್ತೆ ಮಾಡುವುದು
* ಕುಟುಂಬದಲ್ಲಿ ಈ ಹಿಂದೆ ಯಾರಿಗಾದರೂ ಸ್ತನ ಕ್ಯಾನ್ಸರ್ ಇತ್ತೆ ಎಂಬುದರ ಬಗ್ಗೆ ಗಮನ ಹರಿಸುವುದು
* ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದು
*ಎದೆಯ ಸುತ್ತ, ಅಕ್ಕಪಕ್ಕದಲ್ಲಿ ಊತ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು

 ಸ್ತನ ಕ್ಯಾನ್ಸರ್ ಲಕ್ಷಣಗಳು
*  ಸ್ತನದಲ್ಲಿ ಉಂಡೆ
*  ಎದೆಯ ಭಾಗದಲ್ಲಿ ಊತ ಕಾಣಿಸಿಕೊಳ್ಳುವುದು
* ಸ್ತನದಲ್ಲಿ ಮೃದುತ್ವ
* ತೊಟ್ಟುಗಳಿಂದ ಸ್ರವಿಕೆ
Stay up to date on all the latest ಆರೋಗ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp