ಹೆರಿಗೆ ನಂತರ ದೇಹದ ತೂಕ ಇಳಿಸಿಕೊಳ್ಳುವುದು ಹೇಗೆ; ಇಲ್ಲಿದೆ ಆರೋಗ್ಯಕರ ವಿಧಾನ

ಮಗುವಿಗೆ ಜನ್ಮ ನೀಡುವುದು ಮಹಿಳೆಯ ಜೀವನದಲ್ಲಿ ಮಹತ್ವದ ಘಟ್ಟ. ಮರುಹುಟ್ಟು ಸಿಕ್ಕಿದ ಹಾಗೆ. ಹೆರಿಗೆ...

Published: 22nd February 2019 12:00 PM  |   Last Updated: 22nd February 2019 01:43 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಮಗುವಿಗೆ ಜನ್ಮ ನೀಡುವುದು ಮಹಿಳೆಯ ಜೀವನದಲ್ಲಿ ಮಹತ್ವದ ಘಟ್ಟ. ಮರುಹುಟ್ಟು ಸಿಕ್ಕಿದ ಹಾಗೆ. ಹೆರಿಗೆಯಾದ ನಂತರ ಮಹಿಳೆಯ ದಿನನಿತ್ಯದ ಜೀವನ ಬದಲಾಗುತ್ತದೆ.

ಹಲವು ರಾತ್ರಿಗಳು ನಿದ್ದೆಗೆಡಬೇಕಾಗುತ್ತದೆ. ಮಗುವಿನ ಆರೈಕೆಯಲ್ಲಿ ಒತ್ತಡ, ಹೊಟ್ಟೆಯಲ್ಲಿ ನೆರಿಗೆ, ದೇಹದ ತೂಕ ಹೆಚ್ಚಾಗುವುದು ಇತ್ಯಾದಿ ಕಾಣಿಸಿಕೊಳ್ಳುತ್ತದೆ. ತೂಕ ಹೆಚ್ಚಾಗುವಿಕೆಯಿಂದ ಮಾನಸಿಕ ಖಿನ್ನತೆ ಮತ್ತು ಶಾರೀರಿಕ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.

ಹೆರಿಗೆ ನಂತರ ತೂಕ ಹೆಚ್ಚಾಗುವಿಕೆ ಸಾಮಾನ್ಯ ಸಮಸ್ಯೆ. ಹೆರಿಗೆಯಾಗಿ ಮೂರು ತಿಂಗಳ ನಂತರವಷ್ಟೇ ತೂಕ ಇಳಿಸಲು ಮಹಿಳೆಯರು ವ್ಯಾಯಾಮ, ಯೋಗ ಅಭ್ಯಾಸಗಳನ್ನು ನಡೆಸಲು ವೈದ್ಯರು ಹೇಳುತ್ತಾರೆ. ಈ ಸಮಯದಲ್ಲಿ ಆರೋಗ್ಯಕರ ಜೀವನಶೈಲಿ,ಡಯಟ್ ಸಹಾಯಮಾಡುತ್ತದೆ.

ಮಗುವಿಗೆ ಹಾಲುಣಿಸುವ ಸಮಯದಲ್ಲಿ ಅಧಿಕ ಡಯಟ್ ಮಾಡಿದರೆ ಎದೆಹಾಲು ಕಡಿಮೆಯಾಗಬಹುದು. ಹೀಗಾಗಿ ಆಹಾರ ತೆಗೆದುಕೊಳ್ಳುವ ವಿಷಯದಲ್ಲಿ ಯೋಜನೆ ಮಾಡಬೇಕು. ಇಷ್ಟೆಲ್ಲಾ ವಿಷಯವನ್ನು ಗಮನದಲ್ಲಿಟ್ಟುಕೊಂಡು ಹೆರಿಗೆ ನಂತರ ತೂಕ ಇಳಿಸಲು ಆರೋಗ್ಯ ಮಾರ್ಗದರ್ಶಿ ಪ್ರೀತಿ ತ್ಯಾಗಿ ಕೆಲವು ಟಿಪ್ಸ್ ನೀಡಿದ್ದಾರೆ.

ಕಡಿಮೆ ಆಹಾರ, ಆದರೆ ಪದೇ ಪದೇ ತಿನ್ನಿ: ಹೆರಿಗೆ ನಂತರ ತೂಕ ಇಳಿಸಲು ಪ್ರಯತ್ನಿಸುವ ಮಹಿಳೆಯರು ಒಂದು ಅಂಶ ಗಮನದಲ್ಲಿಟ್ಟುಕೊಳ್ಳಬೇಕು. ಅದೆಂದರೆ ಮಗುವಿಗೆ ಉಣಿಸುವ ಎದೆಹಾಲು ಕಡಿಮೆಯಾಗಬಾರದು. ಒಂದೇ ಸಾರಿಗೆ ಹೆಚ್ಚು ತಿಂದು ರಕ್ತದಲ್ಲಿ ಕಾರ್ಬನ್ ಅಂಶ ಹೆಚ್ಚಾಗಿ ದೇಹದಲ್ಲಿ ಕೊಬ್ಬು ಸಂಗ್ರಹವಾಗಬಹುದು. ಅದಕ್ಕೆ ಬದಲಾಗಿ ಕಡಿಮೆ ಪ್ರಮಾಣದಲ್ಲಿ ಎರಡು ಗಂಟೆಗೊಮ್ಮೆ ತಿನ್ನುತ್ತಿರಿ. ಇದರಿಂದ ದೇಹಕ್ಕೆ ಉತ್ತಮ ಶಕ್ತಿ ಸಿಕ್ಕು ಜೀರ್ಣಕ್ರಿಯೆ ಉತ್ತಮವಾಗಿ ದೇಹದಲ್ಲಿ ಕೊಬ್ಬಿನ ಅಂಶ ಕೂಡ ಕಡಿಮೆಯಾಗುತ್ತದೆ.

ಪ್ರೊಟೀನ್ ಭರಿತ ಆಹಾರ ಸೇವಿಸಿ: ತೂಕ ಕಳೆದುಕೊಳ್ಳಬೇಕೆಂದು ಏನೂ ತಿನ್ನದೆ ಹೋದರೆ ಮಹಿಳೆಯರಲ್ಲಿ ಶಕ್ತಿ ಕುಂದಬಹುದು. ಎದೆಹಾಲು ಕೂಡ ಕಡಿಮೆಯಾಗುತ್ತದೆ. ಅದಕ್ಕಾಗಿ ಪ್ರೊಟೀನ್ ಹೇರಳವಾಗಿರುವ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು.

ಸಾಕಷ್ಟು ನೀರು ಕುಡಿಯಿರಿ: ನೀರು ದೇಹದಲ್ಲಿರುವ ಬೇಡವಾದ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಬೇಡದಿರುವ ಕೊಬ್ಬು ಕೂಡ ದೇಹದಿಂದ ಹೊರಹೋಗುತ್ತದೆ.

ನಾರು ಪದಾರ್ಥಗಳ ಹೆಚ್ಚು ಸೇವನೆ: ಹೆಚ್ಚು ನಾರಿನ ಅಂಶವಿರುವ ಆಹಾರಗಳನ್ನು ಸೇವಿಸಿದರೆ ತೂಕ ಕಳೆದುಕೊಳ್ಳಬಹುದು. ಊಟ-ತಿಂಡಿಯಲ್ಲಿ ಧವಸ ಧಾನ್ಯಗಳು, ಹಣ್ಣು, ತರಕಾರಿಗಳು ಹೇರಳವಾಗಿದ್ದರೆ ತೂಕ ಕಳೆದುಕೊಳ್ಳಲು ಒಳ್ಳೆಯದು.

ಬೆಳಗಿನ ಉಪಹಾರ ಸೇವನೆ ಬಿಡಬೇಡಿ: ನಿಮ್ಮ ದೇಹದಲ್ಲಿ ಶಕ್ತಿ ತುಂಬಲು ಬೆಳಗಿನ ಉಪಾಹಾರ ಅತ್ಯಂತ ಮುಖ್ಯ. ಬೆಳಗಿನ ಉಪಹಾರ ಸೇವಿಸದಿದ್ದರೆ ಸುಸ್ತಾಗಬಹುದು.
ಅನಾರೋಗ್ಯಕರ ಜಂಕ್ ಪದಾರ್ಥಗಳು, ಮಸಾಲೆ ಆಹಾರ ಬಿಟ್ಟುಬಿಡಿ: ಮಗುವಿಗೆ ಹಾಲುಣಿಸುವಾಗ ತಾಯಿಯಾದವಳು ಆರೋಗ್ಯಕರ ಆಹಾರ ಸೇವಿಸುವುದು ಮುಖ್ಯ. ಏಕೆಂದರೆ ತಾಯಿ ಸೇವಿಸಿದ ಆಹಾರದಿಂದಲೇ ಎದೆಹಾಲು ಉತ್ಪತ್ತಿಯಾಗುವುದು. ಜಂಕ್ ಪದಾರ್ಥಗಳು, ಎಣ್ಣೆ ತಿಂಡಿಗಳು, ಕೊಬ್ಬಿನ ಅಂಶ ಹೆಚ್ಚಾಗಿರುವ ಆಹಾರಗಳಿಂದ ತೂಕ ಹೆಚ್ಚಾಗುವುದಲ್ಲದೆ ಮಗುವಿನ ಆರೋಗ್ಯದ ಮೇಲೆ ಕೂಡ ದುಷ್ಪರಿಣಾಮ ಉಂಟಾಗಬಹುದು.

ಡಯಟ್ ಆಹಾರದಲ್ಲಿ ವೈವಿಧ್ಯತೆಯಿರಲಿ: ಡಯಟ್ ಮಾಡುವುದೆಂದು ಕೆಲವು ಆಹಾರಗಳನ್ನು ತಿನ್ನದೇ ಇದ್ದರೆ ನಿಮ್ಮ ಶಕ್ತಿ ಕಡಿಮೆಯಾಗಿ ಸುಸ್ತು ಕಾಣಿಸಿಕೊಳ್ಳಬಹುದು. ಅಲ್ಲದೆ ಆಹಾರ ರುಚಿಸಲಿಕ್ಕಿಲ್ಲ. ಆಹಾರದಲ್ಲಿ ತರಕಾರಿ, ಹಣ್ಣು, ಬೀಜಗಳು ಇರಲಿ. ಇವುಗಳಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿರುತ್ತದೆ.

ಕುಟುಂಬದವರ ಜೊತೆ ಕುಳಿತು ಊಟ ಮಾಡಿ: ಒಬ್ಬರೇ ಕುಳಿತು ತಿನ್ನುವ ಬದಲು ಕುಟುಂಬದವರ ಜೊತೆ ಕುಳಿತು ಮಾತನಾಡುತ್ತಾ, ನಗುತ್ತಾ ತಿಂದರೆ ನಿಮ್ಮ ಮನಸ್ಸಿಗೆ ಕೂಡ ಖುಷಿಯಾಗುತ್ತದೆ.
Stay up to date on all the latest ಆರೋಗ್ಯ news with The Kannadaprabha App. Download now
facebook twitter whatsapp