ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಂಡು ನಿದ್ದೆ ಮಾಡುವುದರಿಂದ ಕಣ್ಣಿಗೆ ಸೋಂಕಿನ ಅಪಾಯ ಹೆಚ್ಚು

: ಕಣ್ಣಿಗೆ ಹಾಕಿಕೊಂಡಿರುವ ಲೆನ್ಸ್ ತೆಗೆಯದೇ ಹಾಗೆ ಮಲಗಿ ನಿದ್ದೆ ಮಾಡಿದರೇ ಉಂಟಾಗುವ ಸೋಂಕಿನಿಂದ ಕಣ್ಣಿಗೆ ಅಪಾಯವಿದ್ದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಕಣ್ಣಿಗೆ ಹಾಕಿಕೊಂಡಿರುವ ಲೆನ್ಸ್ ತೆಗೆಯದೇ ಹಾಗೆ ಮಲಗಿ ನಿದ್ದೆ ಮಾಡಿದರೇ ಉಂಟಾಗುವ ಸೋಂಕಿನಿಂದ ಕಣ್ಣಿಗೆ ಅಪಾಯವಿದ್ದು ದೃಷ್ಟಿಹೀನ ವಾಗುವ ಸಾಧ್ಯತೆ ಇರುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ವೈದ್ಯಕೀಯ ಜರ್ನಲ್ ನಲ್ಲಿ ಈ ವಿಷಯ ಪ್ರಕಟವಾಗಿದ್ದು, ಲೆನ್ಸ್ ಗಳ ಸರಿಯಾದ ಬಳಕೆ ಮಾಡದಿದ್ದರೇ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. 
ಕಾಂಟ್ಯಾಕ್ಟ್ ಲೆನ್ಸ್ ಬಳಕೆಯಿಂದಾಗಿ ಸೋಂಕಿನ ಜೊತೆಗೆ  ಅಪಾಯಕಾರಿ, ಇದು ಶಾಶ್ವತ ಅಂಧತ್ವಕ್ಕೂ ಕಾರಣವಾಗಬಹುದು ಎಂದು ಅಮೆರಿಕಾದ ನ್ಯೂ ಮೆಕ್ಸಿಕೊ ವಿವಿಯ ಸಹ ಪ್ರಾದ್ಯಾಪಕರು ತಿಳಿಸಿದ್ದಾರೆ. 
ಕಾಂಟ್ಯಾಕ್ಟ್ ಲೆನ್ಸ್ ತೆಗೆಯದೇ ಹಗಲು ರಾತ್ರಿ ನಿದ್ದ ಮಾಡುವುದರಿದ.ಕಣ್ಣಿನ ಆರೋಗ್ಯದ ಜೊತೆಗೆ ಆರೋಗ್ಯದ ಸಮಸ್ಯೆ ಉಂಟಾಗಲಿದೆ.
ಮೊದಲಿಗೆ ಕಣ್ಣು ಕೆಂಪಗಾಗಿ ಉರಿ ಆರಂಭವಾಗುತ್ತದೆ,  ಕಾಂಟ್ಯಾಕ್ಟ್ ಲೆನ್ಸ್ ಹಾಕಿ 3 ಅಥವಾ ನಾಲ್ಕ ದಿನ ನಿದ್ದ ಮಾಡುವುದು ಹಾಗೂ ಸ್ವಿಮ್ಮಿಂಗ್ ಮಾಡುವುದು ಗಂಭೀರ ಆರೋಗ್ಯ ಸಮಸ್ಯ್ಗೆ ಕಾರಣವಾಗುತ್ತದ. ಸೋಂಕಿನಿಂದ  ಫಂಗಸ್ ಉಂಟಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com