ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಲರ್ಜಿಗೆ ಕಾರಣ ಏನು? ಕಂಡುಕೊಳ್ಳುವುದು ಹೇಗೆ?

ಸಾಮಾನ್ಯವಾಗಿ ಬಾಲ್ಯದಲ್ಲಿ ಅಲರ್ಜಿ ಕಂಡುಬರುತ್ತದೆ. ಕೆಲವೊಮ್ಮೆ ಆರಂಭದಲ್ಲಿ ಕಾಣಿಸಿಕೊಂಡು ಪ್ರೌಢ ಹಂತದಲ್ಲಿ ಕಂಡುಬರುವುದಿಲ್ಲ. ಆದಾಗ್ಯೂ, ಅಲರ್ಜಿ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ.
ಬಾಯಲ್ಲಿ ಏನಾದರೂ ಇಟ್ಟರೆ ಜುಮ್ಮೆನಿಸುವಿಕೆ ಅಥವಾ ಮುಖದಲ್ಲಿ ಗುಳ್ಳೆ ಕಾಣಿಸಿಕೊಂಡರೆ,  ಆಹಾರದಿಂದ ಅಲರ್ಜಿ ಎನ್ನಲಾಗುತ್ತಿದೆ. ಇದು ಯಾವುದಾದರೊಂದು  ನಿರ್ದಿಷ್ಟ ಆಹಾರ  ಸೇವನೆ ನಂತರ ಅಹಿತಕರ ರೋಗನಿರೋಧಕ ವ್ಯವಸ್ಥೆಯ ಪ್ರತಿಕ್ರಿಯೆಯಾಗಿದೆ.
ಸಾಮಾನ್ಯವಾಗಿ ಬಾಲ್ಯದಲ್ಲಿ ಅಲರ್ಜಿ ಕಂಡುಬರುತ್ತದೆ. ಕೆಲವೊಮ್ಮೆ ಆರಂಭದಲ್ಲಿ ಕಾಣಿಸಿಕೊಂಡು ಪ್ರೌಢ ಹಂತದಲ್ಲಿ  ಕಂಡುಬರುವುದಿಲ್ಲ. ಆದಾಗ್ಯೂ,  ಅಲರ್ಜಿ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ.
ನಮ್ಮ ದೇಹ ದಕ್ಷ ರೋಗ ನಿರೋಧಕ ವ್ಯವಸ್ಥೆಯನ್ನು ಹೊಂದಿದೆ. ಸಾಮಾನ್ಯ ವ್ಯಕ್ತಿಗಳು ತಾವು ಸೇವಿಸುವ ಆಹಾರಕ್ಕೆ ಪ್ರತಿಕ್ರಿಯಿಸುವುದಿಲ್ಲ. ಆದಾಗ್ಯೂ,  ಕೆಲವೊಂದು ಆಹಾರದಲ್ಲಿನ ಪ್ರೋಟಿನ್ ಗಳು  ದೇಹಕ್ಕೆ ಹೊಂದಿಕೊಳ್ಳುವುದಿಲ್ಲ. ಇದರಿಂದಾಗಿ ಆಹಾರದ ಅಲರ್ಜಿ ಉಂಟಾಗುತ್ತದೆ. ಇದಕ್ಕೆ  ಚಿಕಿತ್ಸೆ ಇಲ್ಲ. ಆದರೆ,  ನಿರ್ದಿಷ್ಟ ಅಲರ್ಜಿಯನ್ನು ತಪ್ಪಿಸಬಹುದು ಎಂದು ರೈನ್ ಬೊ ಮಕ್ಕಳ ಆಸ್ಪತ್ರೆಯ ಮಕ್ಕಳ ಅಲರ್ಜಿಸ್ಟ್ ಡಾ. ಸುರೇಶ್ ನಟರಾಜನ್ ಹೇಳಿದ್ದಾರೆ.
ಅಲರ್ಜಿ  ಕಂಡುಕೊಳ್ಳುವುದು ಹೇಗೆ?
*  ಆಹಾರದ ಅಲರ್ಜಿಯ ಅನುಮಾನಗಳಿದ್ದರೆ ಡಾಕ್ಟರ್ ಜೊತೆಗೆ ಮುಕ್ತವಾಗಿ ಮಾತನಾಡಬೇಕು
*  ಚರ್ಮದ ಮೇಲಿನ ಗುಳ್ಳೆಗೆ ಸಂಬಂಧಿಸಿದ ಪರೀಕ್ಷೆಯನ್ನು ಪ್ರಯೋಗಾಲಯಿಂದ ದೃಢಪಡಿಸಿಕೊಳ್ಳಬೇಕು
 * ಆಹಾರದ ಅಲರ್ಜಿಗಳಲ್ಲಿ ಬೇರೆ ಬೇರೆ ವಿಧಗಳಿವೆ
 * ಸಿದ್ಧ ಆಹಾರವನ್ನು ಖರೀದಿಸಿದಾಗ  ಆಹಾರದ ಪೊಟ್ಟಣಗಳ ಮೇಲಿನ ಬಿಲ್ಲೆಗಳನ್ನು  ಓದಬೇಕು
 *.  ಗುಣಪಡಿಸಬಹುದಾದಂತಹ ಅಲರ್ಜಿಗಳನ್ನು ಮಾತ್ರ ತಡೆಗಟ್ಟಬಹುದು.
ಸಮುದ್ರದ ಆಹಾರದಿಂದ ಬರುವ ಅಲರ್ಜಿ
ಮೀನಿನಂತಹ  ಸಮುದ್ರ ಆಹಾರ ಸೇವನೆಯಿಂದ ಅಲರ್ಜಿ ಬರುತ್ತದೆ.  ವಯಸ್ಕರಲ್ಲಿ ಇದು ಸಾಮಾನ್ಯ ಎಂಬಂತಾಗಿದೆ. ಇದು ಧೀರ್ಘಾವಧಿಯ ಅಲರ್ಜಿಯಾಗಿದ್ದು, ಗುಣಪಡಿಸಲು ಕಷ್ಟವಾಗಬಹುದು. ಬಾಯಲ್ಲಿ ಹುಣ್ಣು, ಹೊಟ್ಟೆನೋವು ಮತ್ತಿತರ ಬಾದೆಗಳು ಕಾಣಿಸಿಕೊಳ್ಳಬಹುದು.
ಗೋಧಿಯಿಂದ ಬರುವ ಅಲರ್ಜಿ 
ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಉಂಟಾಗುತ್ತವೆ. ಗೋಧಿಯಿಂದ ತಯಾರಿಸಿದ ಆಹಾರ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು. 
ಮೊಟ್ಟೆ ಸೇವನೆಯಿಂದಾಗುವ ಅಲರ್ಜಿ
ಈ ರೀತಿಯ ಅಲರ್ಜಿ ಒಂದು ವರ್ಷ ನಂತರದ ಮಕ್ಕಳಲ್ಲಿ ಕಂಡುಬರುತ್ತದೆ. ಮೊಟ್ಟೆಗಳು ಹೆಚ್ಚಾಗಿ ಮಕ್ಕಳಲ್ಲಿ ಅಲರ್ಜಿ ಉಂಟುಮಾಡುತ್ತವೆ. ಇದರಿಂದಾಗಿ ಜೀರ್ಣಕ್ರಿಯೆ ಹಾಗೂ ಚರ್ಮದ ತೊಂದರೆಗಳು ಕಂಡುಬರುತ್ತವೆ.
ಹಾಲಿನಿಂದಾಗುವ ಅಲರ್ಜಿ
ಬಾಲ್ಯವಸ್ಥೆಯಲ್ಲಿನ ಮೊದಲ ಮೂರು ವರ್ಷದ ಮಕ್ಕಳಲ್ಲಿ ಹಾಲು ಸೇವನೆಯಿಂದಲೂ ಅಲರ್ಜಿ ಬರುತ್ತದೆ. ಇಂತಹ ಅಲರ್ಜಿಗಳನ್ನು ಗುರುತಿಸಿ ನಿಗಾ ವಹಿಸಿದರೆ ಮಕ್ಕಳು ಉತ್ತಮ ರೀತಿಯಲ್ಲಿ ಬೆಳೆಯುತ್ತಾರೆ.  ವಾಂತಿ, ಅತಿಸಾರ ಬೇದಿ ಮತ್ತಿತರ ಬಾದೆಗಳು ಇದರ ಲಕ್ಷಣಗಳಾಗಿವೆ. ಇದು ಕೆಲವು ಸಂದರ್ಭಗಳಲ್ಲಿ ಮಾರಣಾಂತಿಕವಾಗಬಹುದು. ಇದನ್ನು ಕ್ಲಾಸಿಕಲ್ ಮಿಲ್ಕ್ ಅಲರ್ಜಿ ಎಂದು ಸಹ ಕರೆಯುತ್ತಾರೆ. ಇದರಿಂದಾಗಿ ಇನಾಪಿಲಕ್ಸಿಸ್  ಎಂಬ ಮಾರಣಾಂತಿಕ ಕಾಯಿಲೆ ಬರಬಹುದು.
ಕಡಲೇ ಕಾಯಿ ಸೇವನೆ
ಕಡಲೆಕಾಯಿಯಿಂದ ಬರುವ  ಅಲರ್ಜಿ ಸಾಮಾನ್ಯ ಅಲರ್ಜಿಗಳಲ್ಲಿ ಒಂದಾಗಿದೆ. ಭಾರತಕ್ಕಿಂಲೂ ವಿದೇಶದಲ್ಲಿ ಇದು ಹೆಚ್ಚಾಗಿದೆ. ಈ ರೀತಿಯ ಅಲರ್ಜಿ ಅಪಾಯಕಾರಿಯಾಗಿದೆ.  ಈ ಬೀಜಗಳನ್ನು ಹೊಂದಿರುವ ಆಹಾರ ಸೇವನೆಯನ್ನು ಕಡಿಮೆ ಮಾಡಬೇಕು. ಇದರಿಂದಾಗಿ ಅಸ್ತಮಾ, ಚರ್ಮದ ತೊಂದರೆಯಂತಹ ಕಾಯಿಲೆಗಳು ಬರಬಹುದು.
ಸೋಯಾ:  ಈ ರೀತಿಯ ಅಲರ್ಜಿಯನ್ನು ಮಕ್ಕಳಲ್ಲಿ ಗುರುತಿಸಬಹುದು. ಹಣ್ಣುಗಳು ಮತ್ತು ತರಕಾರಿಗಳು ಸಹ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ ಎಂಬ ಸಾಮಾನ್ಯ ತಪ್ಪು ಕಲ್ಪನೆ ಇದೆ. ಆದರೆ, ಇದು ಸತ್ಯವಾದ ಮಾತಲ್ಲ. 
ಹಾಲಿನ ಉತ್ಪನ್ನಗಳಿಂದಲೂ ವಾಂತಿ, ಹೊಟ್ಟೆ ನೋವು ಮತ್ತಿತರ ಬಾಧೆಗಳು ಕಂಡುಬರುತ್ತವೆ. ಆದ್ದರಿಂದ ಅಲರ್ಜಿಯಾಗದಂತಹ ಆಯ್ದ ಪದಾರ್ಥಗಳನ್ನು ಮಕ್ಕಳಿಗೆ ಕೊಡುವುದು ಉತ್ತಮ.

Related Stories

No stories found.

Advertisement

X
Kannada Prabha
www.kannadaprabha.com