ಕಾಲು ಬಾಯಿ ರೋಗದ ಲಕ್ಷಣ, ಮುಂಜಾಗ್ರತಾ ಕ್ರಮಗಳು ಮತ್ತು ಚಿಕಿತ್ಸೆ

ಕೈ, ಕಾಲು, ಬಾಯಿ ರೋಗ ವೈರಸ್ ನಿಂದ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದೆ. ಕಾಕ್ಸ್ ಸಾಕಿ ವೈರಸ್ ಗಳಿಂದ ಈ ರೋಗ ಬರುತ್ತದೆ.ಈ ರೋಗದ ಲಕ್ಷಣ, ಮುಂಜಾಗ್ರತಾ ಕ್ರಮಗಳು, ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

Published: 25th July 2019 12:00 PM  |   Last Updated: 25th July 2019 04:38 AM   |  A+A-


Collection photo

ಸಂಗ್ರಹ ಚಿತ್ರ

Posted By : ABN ABN
Source : The New Indian Express
ಬೆಂಗಳೂರು: ಕೈ, ಕಾಲು, ಬಾಯಿ ರೋಗ ವೈರಸ್ ನಿಂದ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದೆ. ಕಾಕ್ಸ್ ಸಾಕಿ ವೈರಸ್  ಗಳಿಂದ ಈ ರೋಗ ಬರುತ್ತದೆ. 

ರೋಗ ಲಕ್ಷಣಗಳು
*  ಒಂದು ಅಥವಾ ಎರಡು ದಿನದ  ಜ್ವರದಿಂದ ಈ ಕಾಯಿಲೆ  ಪ್ರಾರಂಭವಾಗುತ್ತದೆ  ನಂತರ ದದ್ದುಗಳು ಮತ್ತು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

* ಕೈ, ಬಾಯಿ ಹಾಗೂ ಕಾಲುಗಳಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತವೆ.  ಇವುಗಳು ಕುಂಡಿಯವರೆಗೂ ತಲುಪುತ್ತವೆ.

* ಬಾಯಿಗಳಲ್ಲಿ ಹುಣ್ಣಾಗಿ ಮಕ್ಕಳು ಊಟ ಮಾಡಲು ಕಷ್ಟವಾಗುತ್ತದೆ ಆದರೆ, ಕೈ ಹಾಗೂ ಕಾಲುಗಳಲ್ಲಿನ ಗುಳ್ಳೇಗಳಿಂದಾಗಿ ಸ್ವಲ್ಪ ಪ್ರಮಾಣದ ನೋವು ಉಂಟಾಗಿ ಕಿರಿಕಿರಿ ಉಂಟಾಗುತ್ತದೆ. 

ಯಾವ ವಯಸ್ಸಿನವರಲ್ಲಿ ಈ ರೋಗ ಕಂಡುಬರುತ್ತದೆ:  ಸಾಮಾನ್ಯವಾಗಿ 10ಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೋಗ ಹೆಚ್ಚಾಗಿ ಕಂಡುಬರುತ್ತದೆ.  ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಪ್ರೌಢ ವಯಸ್ಸಿನ ಮಕ್ಕಳಲ್ಲಿಯೂ ಈ ರೋಗ  ಬರುತ್ತದೆ. ಆದಾಗ್ಯೂ, ಅಪರೂಪಕ್ಕೊಬ್ಬರಿಗೆ ವಯಸ್ಕರಲ್ಲಿಯೂ ಈ ರೋಗ ಬರುತ್ತದೆ.

ಗುಣಪಡಿಸಲು ಬೇಕಾಗುವ ಅವಧಿ:  ಕೈ, ಕಾಲು, ಹಾಗೂ ಬಾಯಿ ರೋಗಗಳು ಸಾಮಾನ್ಯವಾಗಿ 5 ರಿಂದ 7 ದಿನಗಳೊಳಗೆ ಗುಣವಾಗುತ್ತವೆ. ಅಂದರೆ, ಅದರಷ್ಟಕ್ಕೆ ಅದೇ ಈ ರೋಗಗಳು ಹೋಗುತ್ತವೆ. ಚಿಕಿತ್ಸೆ ಇಲ್ಲದೆಯೂ ಕೂಡಾ ಒಂದು ವಾರದೊಳಗೆ ಈ ರೋಗದಿಂದ ಮುಕ್ತಿಯಾಗಬಹುದು.ಯಾವುದೇ ಕಲೆ ಇಲ್ಲದೆ ಎರಡು ವಾರಗಳ ನಂತರವೂ ಗುಳ್ಳೆಗಳು ಮಾಯವಾಗುತ್ತವೆ.

ಮುಂಜಾಗ್ರತಾ ಕ್ರಮಗಳು:  ಮೂಗಿನ ಸ್ರವಿಸುವಿಕೆ, ಮಲ ಅಥವಾ ಗುಳ್ಳೆಗಳಿಂದ ದ್ರವದಂತಹ ದೈಹಿಕ ವಿಸರ್ಜನೆಯೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದ ಮೂಲಕ ವೈರಸ್ ಹರಡುತ್ತದೆ. 
* ಈ ಸೋಂಕು ಕಾಣಿಸಿಕೊಂಡಂತಹ ಮಕ್ಕಳನ್ನು ಒಂದು ವಾರಗಳ ಕಾಲ ಮನೆಯಲ್ಲಿಯೇ ಇಡುವುದರಿಂದ ಮತ್ತೊಬ್ಬರಿಗೆ ಈ ಸೋಂಕು ಹರಡದಂತೆ ತಡೆಗಟ್ಟಬಹುದು. ಕೆಲ ಪ್ರಕರಣಗಳಲ್ಲಿ 11 ವಾರಗಳ ಕಾಲ ಈ ಸೋಂಕು ಮುಂದುವರೆಯಬಹುದು ಅಂತಹ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಬಾರದು.
* ಪ್ರತಿನಿತ್ಯ ಸಾಬೂನಿನಿಂದ ಕೈ ತೊಳೆಯುವಂತೆ ಹಾಗೂ ಕೈಗಳ್ಳನ್ನು ಶುದ್ಧವಾಗಿಟ್ಟುಕೊಳ್ಳುವಂತೆ ಮಕ್ಕಳಲ್ಲಿ ಅರಿವು ಮೂಡಿಸಬೇಕು
* ಸೂಪರ್ ಮಾರ್ಕೆಟ್ ಗಳಲ್ಲಿ ಟ್ರಾಲಿ, ಟಾಯ್ಸ್ ಗಳನ್ನು ಮುಟ್ಟಿದ್ದ ಸೋಂಕಿತ ಮಕ್ಕಳಿಂದಲೂ ಈ ರೋಗ ಹರಡಿರುವ ಬಗ್ಗೆ ವರದಿಯಾಗಿದೆ. ಆದ್ದರಿಂದ ಇಂತಹ ಸಂದರ್ಭಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದು ಅಸ್ಟರ್ ಸಿಎಂಐ ಆಸ್ಪತ್ರೆಯ ಸಮಾಲೋಚಕರು ತಿಳಿಸಿದ್ದಾರೆ.

ಚಿಕಿತ್ಸೆ:  ಸಾಮಾನ್ಯವಾಗಿ ಇಂತಹ ರೋಗಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದಿಲ್ಲ. ಜ್ವರ ಹಾಗೂ ನೋವಿಗಾಗಿ ಪ್ಯಾರಾಸಿಟಮೊಲಾ ಮಾತ್ರೆ ಸೇವಿಸಬೇಕು. ಗುಳ್ಳೆಗಳ ನಿವಾರಣೆಗಾಗಿ ಕಾಲಮೈನ್ ಲೋಷನ್ ಬಳಸಬೇಕು. ಬಾಯಿಯಲ್ಲಿ ಉಣ್ಣಿನಿಂದ ಆಹಾರ ಸೇವನೆ ಕಷ್ಟಕರವಾಗುವುದರಿಂದ ದ್ರವ ಪದಾರ್ಥಗಳ ಸೇವನೆ ಮಾಡಬೇಕು, ಹೆಚ್ಚಾಗಿ ಎಳನೀರು ಕುಡಿಯಬೇಕು. ಉಪ್ಪು ನೀರಿನಲ್ಲಿ ಸ್ನಾನ ಮಾಡಬೇಕು. ಲ್ಯಾವೆಂಡರ್ ಎಣ್ಣೆ ಬಳಸುವುದರಿಂದಲೂ ಹೆಚ್ಚು ಅನುಕೂಲವಾಗುತ್ತದೆ.
Stay up to date on all the latest ಆರೋಗ್ಯ news with The Kannadaprabha App. Download now
facebook twitter whatsapp