ಫ್ರೀಜ್ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದೇ?

ಫ್ರೀಜ್ ಆಹಾರಗಳು ಪೌಷ್ಠಿಕಾಂಶವುಳ್ಳ ಆಹಾರಗಳೇ? ಈ ಆಹಾರಗಳಲ್ಲಿನ ರಾಸಾಯನಿಕದಿಂದ ಹಾರ್ಮೋನು ಅಸಮತೋಲನ ಉಂಟಾಗುತ್ತದೆಯೇ ಎಂಬ ವಿಷಯದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.
ಫ್ರೀಜ್ ಆಹಾರ
ಫ್ರೀಜ್ ಆಹಾರ

ಫ್ರೀಜ್  ಆಹಾರಗಳು ಪೌಷ್ಠಿಕಾಂಶವುಳ್ಳ ಆಹಾರಗಳೇ? ಈ ಆಹಾರಗಳಲ್ಲಿನ ರಾಸಾಯನಿಕದಿಂದ ಹಾರ್ಮೋನು ಅಸಮತೋಲನ ಉಂಟಾಗುತ್ತದೆಯೇ ಎಂಬ ವಿಷಯದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ  ಇನ್ನೋವೆಟಿವ್ ಪುಡ್ ಲಿಮಿಟೆಡ್ ನ ಮಿಥುನ್ ಅಪ್ಪಯ್ಯ,  ತಮ್ಮ ಬ್ರಾಂಡ್ ಸುಮೇರು  ಫ್ರೀಜ್ ಆಹಾರಗಳು ಅರೋಗ್ಯಕರವಲ್ಲ ಎಂಬ ತಪ್ಪು ಕಲ್ಪನೆಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.

ಬಿಸಿ ಮಾಡಿ ತಿನ್ನುವ ಅನೇಕ ಆಹಾರಗಳಿವೆ. ಆದರೆ, ಆರೋಗ್ಯ ಪರಿಣತರು ಅವುಗಳ ಬಳಕೆ ವಿರುದ್ಧವಾಗಿ ಸಲಹೆ ನೀಡುತ್ತಿರುತ್ತಾರೆ.

ನೀವು ಏನನ್ನು  ತೆಗೆದುಕೊಳ್ಳಬೇಕು?

ಫ್ರೀಜ್ ಆಹಾರದ ಸುತ್ತ ಇರುವ ತಪ್ಪು ಕಲ್ಪನೆಗಳನ್ನು ನಂಬುವುದನ್ನು ಮೊದಲು ತಪ್ಪಿಸಬೇಕು. ಫ್ರೀಜ್ ಆಹಾರಗಳನ್ನು ಸಂರಕ್ಷಿಸಿ ಇಟ್ಟಿರುವುದರಿಂದ ಅವುಗಳಲ್ಲಿ ಪೌಷ್ಠಿಕಾಂಶ ಕಡಿಮೆ ಇರುತ್ತದೆ ಎಂದು ಆರೋಗ್ಯ ಪರಿಣತರು ಸಲಹೆ ನೀಡುತ್ತಾರೆ. ಆದರೆ, ಅದು ಯಾವಾಗಲೂ ಸತ್ಯವಲ್ಲ, ಫ್ರೀಜಿಂಗ್ ಒಂದು ಮಹತ್ವದ ವಿಧಾನ. ಹೆಚ್ಚುವರಿ ಆಹಾರಗಳನ್ನು ಇಡದೆ ಸುರಕ್ಷಿತ ರೀತಿಯಲ್ಲಿ ಆಹಾರಗಳನ್ನು ಸಂರಕ್ಷಿಸಿರುವುದರಿಂದ ಇದೊಂದು ಉತ್ತಮ ವಿಧಾನವನ್ನಾಗಿ ಮಾಡಬಹುದು.

ಜನರು ಮಾರುಕಟ್ಟೆಯಿಂದ ತರುವ ತಾಜಾ ಆಹಾರ ಸೇವಿಸುವುದು ಉತ್ತಮ, ಆದರೆ, ಇದು ಯಾವಾಗಲೂ ಸತ್ಯವಲ್ಲ, ತಾಜಾ ಆಹಾರಗಳು ನೋಡುವುದಕ್ಕೆ  ಉತ್ತಮವಾಗಿರುತ್ತವೆ. ಆದರೆ, ಇವುಗಳನ್ನು ಬೆಳೆದ 15-20 ದಿನಗಳ ನಂತರ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಮಾಲಿನ್ಯ, ಅಸಮರ್ಪಕ ಸಂಗ್ರಹ ಪರಿಸ್ಥಿತಿಯಿಂದಾಗಿ ಇವುಗಳ  ಪೌಷ್ಠಿಕಾಂಶ ಹಾಳಾಗಿರುತ್ತದೆ.

ಫ್ರೀಜ್ ಆಹಾರಗಳಲ್ಲಿ ಪೌಷ್ಠಿಕಾಂಶವನ್ನು ಯಾವ ರೀತಿಯಲ್ಲಿ ಪರಿಶೀಲಿಸಬಹುದು?

 ಪ್ರತ್ಯೇಕ  ಕ್ಷಿಪ್ರಗತಿಯ ಫ್ರಿಜಿಂಗ್ ತಂತ್ರಜ್ಞಾನ ಫ್ರೀಜ್ ಆಹಾರಗಳ ಪರಿಶೀಲನೆಗೆ ಇರುವ ಒಂದು ಉತ್ತಮವಾದ ವಿಧಾನವಾಗಿದೆ. ಫ್ರೀಜಿಂಗ್ ನಂತರ ಆಹಾರ ಪದಾರ್ಥಗಳನ್ನು ಇದು ಪ್ರತ್ಯೇಕಿಸುತ್ತದೆ.

ಬಿಸಿ ಮಾಡಿ ತಿನ್ನುವ ಆಹಾರಗಳನ್ನು ಭಾರತದಲ್ಲಿ ಯಾವ ರೀತಿ ಸ್ವೀಕರಿಸಲಾಗುತ್ತಿದೆ ?

ಬಿಸಿ ಮಾಡಿ ಆಹಾರಗಳನ್ನು ತಿನ್ನುವ ಪ್ರಕ್ರಿಯೆ ವಿಶ್ವದಾದ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಅದರಲ್ಲೂ ಅಭಿವೃದ್ದಿಶೀಲ ಏಷ್ಯಾದ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿದೆ. 2017ರಲ್ಲಿ ಭಾರತದಲ್ಲಿ ಫ್ರೀಜನ್ ಆಹಾರ ಮಾರುಕಟ್ಟೆ 310 ಡಾಲರ್ ಮಿಲಿಯನ್ ನಷ್ಟಿತ್ತು.  2023ರ ವೇಳಗೆ ಇದು 754 ಮಿಲಿಯನ್ ಡಾಲರ್ ನಷ್ಟು ಬೆಳವಣಿಗೆಯಾಗುವ ಸಾಧ್ಯತೆ ಇದೆ. ಭಾರತದಲ್ಲಿ ಕೊಚ್ಚಿ ಹಾಗೂ ಹೈದ್ರಾಬಾದಿನಲ್ಲಿ  ಇಂತಹ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇದೆ.

ಬಿಡುವಿಲ್ಲದ ಜೀವಶೈಲಿಯಲ್ಲಿ , ಆದಾಯ ದುಪ್ಪಟ್ಟು ಮನೆಗಳು ಹಾಗೂ ಕೆಲಸದಲ್ಲಿರುವ ಮಹಿಳೆಯರು ಹಾಗೂ ಏಕಾಂಗಿಯಾಗಿ ಜೀವಿಸುತ್ತಿರುವ ಯುವ ವೃತ್ತಿಪರರು  ಹೆಚ್ಚಿನ ರೀತಿಯಲ್ಲಿ ಬಿಸಿ ಮಾಡಿ ತಿನ್ನುವ ಆಹಾರಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com