ಕಿಡ್ನಿ ಸಂಬಂಧಿತ ರೋಗಗಳನ್ನು ತಡೆಯುವುದು ಹೇಗೆ?

ಕಿಡ್ನಿ ಅಥವಾ ಮೂತ್ರಕೋಶದ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ. ...

Published: 18th March 2019 12:00 PM  |   Last Updated: 18th March 2019 01:53 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಕಿಡ್ನಿ ಅಥವಾ ಮೂತ್ರಕೋಶದ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ. ಮನುಷ್ಯನ ದೇಹದಲ್ಲಿ ಮೂತ್ರಕೋಶ ಅತ್ಯಂತ ಮುಖ್ಯವಾದ ಭಾಗ, ಅದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಆರೋಗ್ಯದಿಂದಿರಲು ಸಾಧ್ಯವಿಲ್ಲ.

ಮನುಷ್ಯನಲ್ಲಿ ಎರಡು ಮೂತ್ರಕೋಶವಿದೆ, ಒಂದು ಹಾಳಾದರೆ ಇನ್ನೊಂದಿದೆ ಎಂದು ಸುಲಭವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಕ್ರಾನಿಕ್ ಕಿಡ್ನಿ ಕಾಯಿಲೆ(ಸಿಕೆಡಿ-ದೀರ್ಘಕಾಲದ ಕಿಡ್ನಿರೋಗ) ಎಂಬುದು ಮನುಷ್ಯನಿಗೆ ಅತ್ಯಂತ ಯಾತನಾಮಯವಾದದ್ದು.

ಇದರ ಲಕ್ಷಣ ಕೂಡ ತಡವಾಗಿ ಗೊತ್ತಾಗುತ್ತದೆ. ಹೀಗಾಗಿ ದೀರ್ಘಕಾಲದ ಕಿಡ್ನಿ ರೋಗದಿಂದ ಬಳಲುತ್ತಿರುವವರು ತಡವಾಗಿ ವೈದ್ಯರನ್ನು ಕಾಣಲು ಬರುತ್ತಾರೆ. ಇದು 5ನೇ ಹಂತ ತಲುಪಿದ ನಂತರ ಡಯಾಲಿಸಿಸ್ ಅಥವಾ ಕಿಡ್ನಿ ಕಸಿ ಚಿಕಿತ್ಸೆಗೆ ಇರುವ ಏಕೈಕ ಮಾರ್ಗ. ಕಿಡ್ನಿ ಸಮಸ್ಯೆಯಿಂದ ಹೇಗೆ ದೂರವಿರಬಹುದು ಎಂಬುದಕ್ಕೆ ಇಲ್ಲಿದೆ ಕೆಲವು ಮಾಹಿತಿಗಳು:

1. ಅಧಿಕ ದೇಹತೂಕ ಒಳ್ಳೆಯದಲ್ಲ: ದೇಹದ ತೂಕ ಜಾಸ್ತಿಯಾದರೆ ಕಿಡ್ನಿ ಮೇಲೆ ಒತ್ತಡ ಹೇರುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ಕೂಡ ಉಂಟಾಗಬಹುದು. ಕಡಿಮೆ ಅವಧಿಯಲ್ಲಿ ದೇಹದಲ್ಲಿ ತೂಕ ಹೆಚ್ಚಾದರೆ ಕಿಡ್ನಿ ಸಮಸ್ಯೆ ಏನಾದರೂ ಇದೆಯೇ ಎಂದು ಪರೀಕ್ಷಿಸುವುದು ಉತ್ತಮ.

2. ನೋವು ನಿವಾರಕಗಳನ್ನು ಹೆಚ್ಚು ಸೇವಿಸಬೇಡಿ: ತಲೆನೋವು, ಸೊಂಟನೋವು, ಬೆನ್ನುನೋವು ಹೀಗೆ ಏನಾದರೂ ಸಮಸ್ಯೆಗಳು ತಲೆದೋರಿದಾಗ ನೋವು ನಿವಾರಕ ಮಾತ್ರೆಗಳನ್ನು ಅತಿಯಾಗಿ ಬಳಸುವುದು ಒಳ್ಳೆಯದಲ್ಲ. ಅದು ಕಿಡ್ನಿಗೆ ಹಾನಿಯುಂಟುಮಾಡಬಹುದು.

3. ಮೂಲಿಕೆ ಔಷಧಿಗಳನ್ನು ಬಳಸಬೇಡಿ; ಚೀನಾ ಮತ್ತು ಭಾರತೀಯ ಮೂಲಿಕೆಗಳಿಂದ ತಯಾರಿಸಿದ ಔಷಧಗಳನ್ನು ಹೆಚ್ಚೆಚ್ಚು ಬಳಸಿದರೆ ಕಿಡ್ನಿಗೆ ಹಾನಿಯುಂಟುಮಾಡಬಹುದು.
4. ರಕ್ತದೊತ್ತಡ ನಿಯಂತ್ರಣದಲ್ಲಿರಲಿ; ತೀವ್ರ ರಕ್ತದೊತ್ತಡವಿದ್ದರೆ ಕಿಡ್ನಿಗೆ ತೊಂದರೆಯಾಗಿ ಅದು ಹೆಚ್ಚಿನ ಒತ್ತಡ ಹಾಕಿ ಕಾರ್ಯವೈಖರಿಗೆ ತೊಂದರೆಯನ್ನುಂಟುಮಾಡಬಹುದು.
5. ಸಕ್ಕರೆ ಮಟ್ಟ ನಿಯಂತ್ರಣದಲ್ಲಿರಲಿ: ಡಯಾಬಿಟಿಸ್ ಸಮಸ್ಯೆಯಿರುವವರಿಗೆ ಕಿಡ್ನಿ ಸಮಸ್ಯೆಯಿರುವುದು ಸಾಮಾನ್ಯ. ದೀರ್ಘಕಾಲಿನ ಕಿಡ್ನಿ ಸಮಸ್ಯೆಗಳಿಗೆ ಡಯಾಬಿಟಿಸ್ ಕಾರಣವಾಗಿರುತ್ತದೆ.

6. ಜಂಕ್ ಪದಾರ್ಥಗಳಿಂದ ದೂರವಿರಿ: ಅಧಿಕ ಮಸಾಲೆಯ, ಉಪ್ಪಿನ ಅಂಶವಿರುವ ಪದಾರ್ಥಗಳನ್ನು ಸೇವಿಸುವುದು ಉತ್ತಮವಲ್ಲ. ಸಂಸ್ಕರಿತ, ಅಧಿಕ ಆಸಿಡ್ ಪದಾರ್ಥಗಳ ಸೇವನೆಯಿಂದ ತೂಕ ಹೆಚ್ಚಾಗುತ್ತದೆ. ಹೆಚ್ಚೆಚ್ಚು ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಕಡಿಮೆ ಕೊಬ್ಬು ಇರುವ ಡೈರಿ ಉತ್ಪನ್ನಗಳು ಉತ್ತಮ.

7. ಅಧಿಕ ನೀರು ಕುಡಿಯಿರಿ: ಕಡಿಮೆ ನೀರು ಕುಡಿದಷ್ಟು ಕಿಡ್ನಿಯಲ್ಲಿ ಕಲ್ಲುಗಳು ಬೆಳೆಯುವುದು ಹೆಚ್ಚು. ಪ್ರತಿದಿನ 10ರಿಂದ 12 ಗ್ಲಾಸ್ ನೀರು ಕುಡಿಯುತ್ತಿರಿ.

8. ಶಾರೀರಿಕ ಚಟುವಟಿಕೆಯಿರಲಿ: ದಿನನಿತ್ಯದ ಜೀವನಶೈಲಿ ಉತ್ತಮವಾಗಿರಬೇಕು. ಉತ್ತಮ ಜೀವನಶೈಲಿಯಿಂದ ಶರೀರ ಹೆಚ್ಚು ಚಟುವಟಿಕೆಯಿಂದ ಇದ್ದು ಕಿಡ್ನಿ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ.

9. ಕಾಲಕಾಲಕ್ಕೆ ಆರೋಗ್ಯ ತಪಾಸಣೆ: 35-40 ವರ್ಷ ಕಳೆದ ನಂತರ ಕಾಲಕಾಲಕ್ಕೆ ಬಿ.ಪಿ. ಸಕ್ಕರೆ ಕಾಯಿಲೆ ಬಗ್ಗೆ ತಪಾಸಣೆ ಮಾಡುತ್ತಿರಬೇಕು. ಕುಟುಂಬದಲ್ಲಿ ಯಾರಿಗಾದರೂ ಕಿಡ್ನಿ ಸಮಸ್ಯೆ ಇದ್ದರೆ ಪ್ರತಿವರ್ಷ ಇಡೀ ಶರೀರದ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು.

10, ಮದ್ಯಪಾನ, ಧೂಮಪಾನದಿಂದ ದೂರವಿರಿ: ಮದ್ಯಪಾನ ಮತ್ತು ಧೂಮಪಾನಗಳ ಸೇವನೆಯಿಂದ ಕಿಡ್ನಿಗೆ ಸಮಸ್ಯೆಯಾಗುತ್ತದೆ. ದುರಭ್ಯಾಸಗಳಿಂದ ದೂರವಿರುವುದು ಒಳಿತು.
Stay up to date on all the latest ಆರೋಗ್ಯ news with The Kannadaprabha App. Download now
facebook twitter whatsapp