ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣ ಮನೆಯ ಒಳಗಿನ ಮಾಲಿನ್ಯಕಾರಕ ವಸ್ತುಗಳು!

ವಾಯುಮಾಲಿನ್ಯ ಎಂದಾಗ ಸಾಮಾನ್ಯವಾಗಿ ನಿಮ್ಮ ತಲೆಯಲ್ಲಿ ಥಟ್ಟನೆ ಹೊಳೆಯುವುದು ಏನು? ವಾಹನ ...

Published: 27th March 2019 12:00 PM  |   Last Updated: 27th March 2019 05:28 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ವಾಯುಮಾಲಿನ್ಯ ಎಂದಾಗ ಸಾಮಾನ್ಯವಾಗಿ ನಿಮ್ಮ ತಲೆಯಲ್ಲಿ ಥಟ್ಟನೆ ಹೊಳೆಯುವುದು ಏನು? ವಾಹನ, ಧೂಳು, ಹೊಗೆಯಿಂದ ಮಾಲಿನ್ಯವಾಗುವುದು, ಹೊರಗೆ ಓಡಾಡುವುದರಿಂದ ಉಂಟಾಗುತ್ತದೆ ಎಂಬ ಕಲ್ಪನೆ ಜನರಲ್ಲಿರುತ್ತದೆ. ಆದರೆ ಮನೆಯೊಳಗಿರುವ ಗಾಳಿ, ಧೂಳುನಿಂದಲೂ ಮಾಲಿನ್ಯ, ಅಲರ್ಜಿ ಉಂಟಾಗಬಹುದು ಎಂದರೆ ನಂಬುತ್ತೀರಾ?

ಮನೆಯೊಳಗೆ ಬಳಸುವ ಸೋಂಕು ನಿವಾರಕಗಳು, ಮೈಗೆ ಹಚ್ಚಿಕೊಳ್ಳುವ ಡಿಯೊಡ್ರೆಂಟ್, ಸ್ಪ್ರೇ ಇತ್ಯಾದಿಗಳಿಂದ ಕೂಡ ಆರೋಗ್ಯ ಸಮಸ್ಯೆಗಳು ಬರಬಹುದು. ಮನೆಯೊಳಗಿನ ಮಾಲಿನ್ಯದಿಂದ ಸಾಮಾನ್ಯವಾಗಿ ಬರುವ ಐದು ಆರೋಗ್ಯ ಸಮಸ್ಯೆಗಳು ಹೀಗಿವೆ.

ದೀರ್ಘಕಾಲದ ತಲೆನೋವು: ನಿಮಗೆ ಯಾವಾಗಲೂ ಸಣ್ಣ ತಲೆನೋವು ಕಾಣಿಸಿಕೊಂಡಿರುತ್ತದೆಯಾ, ಅದು ಹಲವು ಸಮಯಗಳಿಂದ ಕೂಡ ಇರಬಹುದು, ಅದಕ್ಕೆ ನೀವು ಮನೆಯೊಳಗೆ ಕಾರ್ಪೆಟ್ ನಲ್ಲಿರುವ ಫಾರ್ಮಾಲ್ಡಿಹೈಡ್ ನ್ನು ಉಸಿರಾಟದಲ್ಲಿ ಸೇವಿಸಿ ದೇಹದೊಳಗೆ ಹೋಗುವುದರಿಂದ ಉಂಟಾಗಬಹುದು. ಮನೆಯಲ್ಲಿ ಇಂಟೀರಿಯರ್ ಗೆ ಬಳಸಿದ ಉಪಕರಣಗಳು ಮತ್ತು ಸಾಧನಗಳಿಂದ ಸಹ ತಲೆನೋವು ಬರಬಹುದು.

ಅಲರ್ಜಿಗಳು: ಚರ್ಮದಲ್ಲಿ ನವೆ, ತುರಿಕೆ, ಕಣ್ಣಿನಲ್ಲಿ ನೀರು ಬರುವುದು, ನಿರಂತರವಾಗಿ ಕೆಮ್ಮು ಇತ್ಯಾದಿಗಳು ಅಲರ್ಜಿ. ಲಕ್ಷಣಗಳಾಗಿರುತ್ತದೆ. ಮನೆಯ ಹೊರಗೆ ಬಾಲ್ಕನಿಯ ಗಾರ್ಡನ್ ನಲ್ಲಿ ಬೆಳೆಸುವ ಗಿಡಗಳು, ಪಾಟ್ ಗಳಲ್ಲಿ ಫಂಗಸ್ ಬೆಳೆದು ಅಥವಾ ಸಾಕುಪ್ರಾಣಿಗಳ ಕೂದಲಿನಿಂದ ಸಹ ಅಲರ್ಜಿ ಉಂಟಾಗಬಹುದು. ಇದು ದೀರ್ಘಾವಧಿಯವರೆಗೆ ಮುಂದುವರಿದರೆ ಅಸ್ತಮಾ ಮತ್ತು ಜ್ವರ ಕೂಡ ಉಂಟಾಗಬಹುದು.

ಉಸಿರಾಟದ ತೊಂದರೆಗಳು: ಸಿಗರೇಟು ಸೇವನೆಯಿಂದ ಮನೆಯೊಳಗೆ ಮಾಲಿನ್ಯ ಉಂಟಾಗುತ್ತದೆ. ಅತಿಯಾದ ಸೇವನೆಯಿಂದ ಶ್ವಾಸಕೋಶದ ಉರಿಯೂತ, ಆಸ್ತಮಾ, ಮತ್ತು ಶ್ವಾಸಕೋಶದ ಕಾರ್ಯವನ್ನು ಅಡ್ಡಿಪಡಿಸುತ್ತದೆ. ಮನೆಯ ಹೊರಗೆ ಧೂಮಪಾನ ಸೇವನೆಗಿಂತ ಮನೆಯೊಳಗಿನ ಧೂಮಪಾನ ಸೇವನೆ ಅತ್ಯಂತ ಹೆಚ್ಚು ಅಪಾಯಕಾರಿ. ಯಾಕೆಂದರೆ ಸ್ವಚ್ಛ ಗಾಳಿ ಮನೆಯೊಳಗೆ ಸುಳಿಯುವುದಿಲ್ಲ. ಮನೆಯ ಕಿಟಕಿ-ಬಾಗಿಲುಗಳನ್ನು ದಿನದಲ್ಲಿ ಒಮ್ಮೆ ಕೂಡ ತೆರೆದು ಇಡದಿದ್ದರೆ ಮತ್ತು ಹವಾ ನಿಯಂತ್ರಿತ ಯಂತ್ರವನ್ನು ಯಾವಾಗಲೂ ತೆರೆದಿದ್ದರೆ ಅದಿನ್ನೂ ಅಪಾಯಕಾರಿ.

ಯಕೃತ್ತಿನ ಹಾನಿ: ಕೂದಲು ದ್ರವೌಷಧಗಳು, ಸುಗಂಧ ದ್ರವ್ಯಗಳು, ಪೀಠೋಪಕರಣ ಪಾಲಿಷ್, ಗ್ಲೂಸ್, ಏರ್ ಫ್ರೆಶ್ನ ರ್ ಗಳು, ನಿರೋಧಕಗಳು, ಮರದ ಸಂರಕ್ಷಕಗಳು ಇತ್ಯಾದಿಗಳ ಅತಿಯಾದ ಬಳಕೆ ಯಕೃತ್ತಿನ ಹಾನಿಗೆ ಕಾರಣವಾಗಬಹುದು.

ಕ್ಯಾನ್ಸರ್: ಮನೆಯೊಳಗೆ ಸರಿಯಾಗಿ ಗಾಳಿ, ಬೆಳಕು ಇಲ್ಲದಿದ್ದರೆ ಶ್ವಾಸಕೋಶ ಕ್ಯಾನ್ಸರ್ ಬರುವ ಸಾಧ್ಯತೆಯಿದೆ. ಧೂಮಪಾನ, ಮದ್ಯಪಾನಗಳ ನಂತರ ರ್ಯಾಡಾನ್ ಗಳ ಬಿಡುಗಡೆಯೇ ಶ್ವಾಸಕೋಶ ಕ್ಯಾನ್ಸರ್ ಗೆ ಎರಡನೆ ಅತಿಮುಖ್ಯ ಕಾರಣವಾಗಿದೆ.
Stay up to date on all the latest ಆರೋಗ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp