ಹೆಚ್ಚೆಚ್ಚು ವಾಲ್ನಟ್ ಸೇವಿಸಿ ಹೃದ್ರೋಗದಿಂದ ದೂರವಿರಿ

ದೇಹದ ಆರೋಗ್ಯ ಕಾಪಾಡಿಕೊಳ್ಳಲು, ಫಿಟ್ ನೆಸ್ ಕಾಪಾಡಲು ಡಯಟ್ ಮಾಡುತ್ತಿದ್ದೀರಾ?ಹಾಗಾದರೆ ನಿಮ್ಮ ಡಯಟ್...
ವಾಲ್ನಟ್
ವಾಲ್ನಟ್
ದೇಹದ ಆರೋಗ್ಯ ಕಾಪಾಡಿಕೊಳ್ಳಲು, ಫಿಟ್ ನೆಸ್ ಕಾಪಾಡಲು ಡಯಟ್ ಮಾಡುತ್ತಿದ್ದೀರಾ? ಹಾಗಾದರೆ ನಿಮ್ಮ ಡಯಟ್ ಆಹಾರದಲ್ಲಿ ವಾಲ್ನಟ್ ನ್ನು ಇನ್ನು ಮುಂದೆ ಸೇರಿಸಿಕೊಳ್ಳಿ.
ಕಡಿಮೆ ಸ್ಯಾಚುರೇಟೆಡ್ ಫ್ಯಾಟ್ (ಪರಿಷ್ಕರಿಸಿದ ಕೊಬ್ಬು) ಹೊಂದಿರುವ ಊಟದ ಜೊತೆ ವಾಲ್ನಟ್ ಸೇರಿಸಿಕೊಂಡು ತಿಂದರೆ ರಕ್ತದೊತ್ತಡ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹೃದ್ರೋಗ ಸಮಸ್ಯೆ ಇರುವವರಿಗೆ ವಾಲ್ನಟ್ ಸೇವನೆ ಉತ್ತಮ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಮನುಷ್ಯನ ದೇಹದಲ್ಲಿನ ರಕ್ತದೊತ್ತಡ ಪ್ರಮಾಣ ನೇರವಾಗಿ ಹೃದ್ರೋಗಗಳ ಜೊತೆ ಸಂಬಂಧ ಹೊಂದಿದೆ. ವಾಲ್ನಟ್ ಸೇವನೆಯಿಂದ ಮಧ್ಯಮ ರಕ್ತದೊತ್ತಡ ಪ್ರಮಾಣವನ್ನು ತಗ್ಗಿಸಬಹುದು ಎನ್ನುತ್ತಾರೆ ಸಂಶೋಧಕ ಪೆನ್ನಿ ಕ್ರಿಸ್-ಎಥೆರ್ಟಾನ್.
ವಾಲ್ನಟ್ ನಲ್ಲಿ ಆಲ್ಫಾ-ಲಿನೋಲೆನಿಕ್ ಆಮ್ಲ (ಎಎಲ್ಎ) ಇದ್ದು ಸಸ್ಯ ಆಧಾರಿತ ಒಮೆಗಾ-3 ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಮನುಷ್ಯನ ಹೃದಯ ಆರೋಗ್ಯದ ಮೇಲೆ ಎಎಲ್ಎ ಮುಖ್ಯ ಕೊಡುಗೆ ನೀಡುತ್ತದೆಯೇ ಅಥವಾ ವಾಲ್ನಟ್ ನಲ್ಲಿರುವ ಪಾಲಿಫಿನಾಲ್ಗಳು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆಯೇ ಅಥವಾ ದುಷ್ಪರಿಣಾಮ ಬೀರುತ್ತದೆಯೇ ಎಂದು ಸಂಶೋಧಕರು ಪರೀಕ್ಷಿಸಿದರು. ಈ ಅಧ್ಯಯನ ಜರ್ನಲ್ ಆಫ್ ದ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ನಲ್ಲಿ ಪ್ರಕಟವಾಗಿದೆ.
ಅಧ್ಯಯನಕ್ಕಾಗಿ ಅಧಿಕ ತೂಕವನ್ನು ಹೊಂದಿರುವ, ಕೊಬ್ಬಿನ ಸಮಸ್ಯೆಯಿರುವ 30ರಿಂದ 65 ವರ್ಷದೊಳಗಿನ 45 ಮಂದಿಯನ್ನು ಒಳಪಡಿಸಲಾಯಿತು. ಅಧ್ಯಯನಕ್ಕೆ ಮುನ್ನ 2 ವಾರಗಳ ಡಯಟ್ ಮಾಡುವಂತೆ ಸೂಚಿಸಲಾಯಿತು. ಎರಡು ವಾರಗಳ ಕಾಲ ಎಲ್ಲರಿಗೂ ಒಂದೇ ರೀತಿಯ ಡಯಟ್ ನ್ನು ನೀಡಲಾಗಿತ್ತು. ಅಧ್ಯಯನದಲ್ಲಿ ಶೇಕಡಾ 12ರಷ್ಟು ಸ್ಯಾಚುರೇಟೆಡ್ ಫ್ಯಾಟ್ ನಿಂದ ಕ್ಯಾಲೊರಿ ಗಳಿಸಿದ್ದರು. ಪರಿಷ್ಕರಿಸಿದ ಕೊಬ್ಬಿನ ಜಾಗದಲ್ಲಿ ವಾಲ್ನಟ್ ಅಥವಾ ಬೇರೆ ತೈಲಗಳನ್ನು ತರಲಾಗಿತ್ತು ಎಂದು ಮುಖ್ಯ ಅಧ್ಯಯನಕಾರ ಅಲಿಸ್ಸ ಟಿಂಡಲ್ ಹೇಳುತ್ತಾರೆ.
ಎರಡು ವಾರಗಳ ಡಯಟ್ ನಂತರ ಭಾಗವಹಿಸಿದವರ ಮೇಲೆ ಆಹಾರದಲ್ಲಿ ಇಡೀ ವಾಲ್ನಟ್, ಮತ್ತೊಂದು ಒಲೆರಿಕ್ ಆಮ್ಲದ ಪದಾರ್ಥ ಮತ್ತೊಂದು ವಾಲ್ನಟ್ ನಲ್ಲಿರುವ ಅಷ್ಟೇ ಮೊತ್ತದ ಎಎಲ್ಎ ಇರುವ ಪದಾರ್ಥವನ್ನು ನೀಡಲಾಗಿತ್ತು. ಮಧ್ಯ ಮಧ್ಯದಲ್ಲಿ ವಿರಾಮ ನೀಡಿ ಈ ರೀತಿ ಮೂರು ವಿಧದಲ್ಲಿ ಡಯಟ್ ಆಹಾರವನ್ನು ಆರು ವಾರಗಳ ಕಾಲ ನೀಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com