ವಿಶ್ವ ಆಸ್ತಮಾ ದಿನ: ರೋಗ ಲಕ್ಷಣ, ಮುಂಜಾಗ್ರತೆ, ಚಿಕಿತ್ಸೆ ಮತ್ತು ತಪ್ಪು ತಿಳುವಳಿಕೆ!

ನಾಳೆ ವಿಶ್ವ ಅಸ್ತಮಾ ದಿನದ ಸಂದರ್ಭದಲ್ಲಿ ಈ ಕಾಯಿಲೆ ಬಗೆಗೆ ಇರುವ ತಪ್ಪು ತಿಳುವಳಿಕೆಗಳು, ಗುಣಲಕ್ಷಣಗಳು, ಮುಂಜಾಗ್ರತಾ ಕ್ರಮಗಳು, ಚಿಕಿತ್ಸೆ ಮೊದಲಾದವುಗಳ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದ್ರಾಬಾದ್ : ಅಸ್ತಮಾ, ಇದೊಂದು  ಉಸಿರಾಟಕ್ಕೆ ಸಂಬಂಧಿಸಿದ ಧೀರ್ಘಾವದಿಯ ಕಾಯಿಲೆಯಾಗಿದ್ದು, ಪ್ರತಿದಿನ ನೂರಾರು ಮಂದಿ ಈ ಕಾಯಿಲೆಯಿಂದ  ನರಳುತ್ತಿದ್ದಾರೆ.
ನಾಳೆ ವಿಶ್ವ ಅಸ್ತಮಾ ದಿನದ ಸಂದರ್ಭದಲ್ಲಿ  ಈ ಕಾಯಿಲೆ ಬಗೆಗೆ ಇರುವ ತಪ್ಪು ತಿಳುವಳಿಕೆಗಳು,  ಗುಣಲಕ್ಷಣಗಳು, ಮುಂಜಾಗ್ರತಾ ಕ್ರಮಗಳು, ಚಿಕಿತ್ಸೆ  ಮೊದಲಾದವುಗಳ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ
ಅಸ್ತಮಾ ಅಂದರೆ  ಏನು ?
ಅಸ್ತಮಾ ಇದೊಂದು ಅಪಾಯಕಾರಿ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಗಾಳಿಯಿಂದ ಬರಬಹುದಾದಂತಹ ಒಂದು ಕಾಯಿಲೆಯಾಗಿದ್ದು, ಪ್ರತಿದಿನ ಸುಮಾರು 40 ರೋಗಿಗಲು ಅಸ್ತಮಾ, ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಾರೆ. ಶೇ, 60 ರಷ್ಟು ಪುರುಷರಲ್ಲಿಯೇ ಹೆಚ್ಚಾಗಿ ಇದು ಕಂಡುಬರುತ್ತದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೆ ಇದೆ. (ಪ್ರತಿ ತಿಂಗಳು 25 ರಿಂದ 30 ಮಕ್ಕಳಲ್ಲೂ ಕೂಡಾ ಅಸ್ತಮಾ ಬರುತ್ತಿರುವುದನ್ನು ವೈದ್ಯರು ನೋಡಿದ್ದಾರೆ )  ಕಳೆದ ವರ್ಷಕ್ಕೆ ಹೋಲಿಸಿದ್ದರೆ ಈ ಬಾರಿ ಶೇ 5 ರಷ್ಟು ಹೆಚ್ಚಿನ ಜನರು ಅಸ್ತಮಾದಿಂದ ನರಳುತ್ತಿದ್ದಾರೆ.
ಅಸ್ತಮಾದ ರೋಗ ಲಕ್ಷಣ ಹಾಗೂ ಮುಂಜಾಗ್ರತೆ
ಇತ್ತೀಚಿನ ಕೆಲ ವರ್ಷಗಳಲ್ಲಿ ಇನ್ಹಲೇಷನ್  ಥೆರಪಿ ಬಳಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಅಂದಾಜು ಶೇ. 20 ರಷ್ಟು ಅಸ್ತಮಾ ರೋಗಿಗಳು ಪ್ರಾಪ್ತ ವಯಸ್ಸಿನ ಸಂದರ್ಭದಲ್ಲಿ ಇನ್ ಹೆಲರ್ ಬಳಕೆಯನ್ನು ನಿಲ್ಲಿಸುತ್ತಿದ್ದಾರೆ. ವಾಯುಮಾಲಿನ್ಯ, ಧೂಮಪಾನ, ಮಕ್ಕಳಲ್ಲಿ ಸರಿಯಾದ ಚಿಕಿತ್ಸೆ ನೀಡದಿರುವುದು, ಹವಾಮಾನ ವೈಫರೀತ್ಯದಿಂದ ಹರಡುವ ಜ್ವರ ಮತ್ತಿತರ ಕಾರಣಗಳಿಂದ ಅಸ್ತಮಾ ಬರುತ್ತದೆ.
ಅಸ್ತಮಾ ನಿಯಂತ್ರಿಸುವಲ್ಲಿ ಇನ್ಹಲೇಷನ್  ಚಿಕಿತ್ಸೆ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ಯಶೋಧ ಆಸ್ಪತ್ರೆಯ ವೈದ್ಯ ಡಾ. ಪಿಎನ್ ಎಸ್ ರೆಡ್ಡಿ ಹೇಳುತ್ತಾರೆ. ಶ್ವಾಸಕೋಶಕ್ಕೆ ನೇರವಾಗಿ ಔಷಧ ಪೂರೈಸುವಲ್ಲಿ ಇನ್ಹಲೇಷನ್  ಚಿಕಿತ್ಸೆ ನೆರವಾಗುತ್ತದೆ. ಆದರೆ, ರೋಗಿಗಳು ನಿಯಮಿತವಾಗಿ ಔಷಧ ತೆಗೆದುಕೊಳ್ಳಬೇಕಾಗುತ್ತದೆ.  ಇದರಿಂದ ಅಸ್ತಮಾವನ್ನು ತಡೆಗಟ್ಟಹುದು ಎಂದು ಅವರು ಹೇಳಿದ್ದಾರೆ.
ಅಸ್ತಮಾ ಚಿಕಿತ್ಸೆ ಹಾಗೂ ತಪ್ಪು ತಿಳುವಳಿಕೆಗಳು
ಅಸ್ತಮಾ ಲಕ್ಷಣ ಇಲ್ಲ ಅಂದ ಮಾತ್ರಕ್ಕೆ ಅಸ್ತಮಾದಿಂದ ಮುಕ್ತಿ ಹೊಂದಿದ್ದೇವೆ ಎಂಬರ್ಥವಲ್ಲ,  ಇದರ ಗುಣಲಕ್ಷಣಗಳು ಕಡಿಮೆಯಾಗಿದೆ ಎಂದು ಔಷಧಿ ತೆಗೆದುಕೊಳ್ಳುವುದು ಕಡಿಮೆ ಮಾಡಿದರೆ ಮತ್ತೆ ಅಸ್ತಮಾ ನಿಯಂತ್ರಿಸಲು ಭಾರೀ ತ್ರಾಸದಾಯಕವಾಗುತ್ತದೆ. ಇದಕ್ಕೆ ಎರಡುಪಟ್ಟು ಪರಿಣಾಮ ಬೀರುತ್ತದೆ. ಇಂತಹ ಕ್ರಮ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ. ಅಸ್ತಮಾ ಕಾಯಿಲೆಗೆ ಧೀರ್ಘಾವಧಿಯ ಚಿಕಿತ್ಸೆ ಅಗತ್ಯವಾಗಿದೆ. ಅನೇಕ ರೋಗಿಗಳು ಚೆನ್ನಾಗಿದ್ದೇವೆ ಎಂದು ಅನ್ನಿಸಿದರೆ ಇನ್ ಹೆಲರ್  ನಿಲ್ಲಿಸಿಬಿಡುತ್ತಾರೆ ಇದು ತುಂಬಾ ಅಪಾಯಕಾರಿಯಾದದ್ದು, ಇಂತಹ ರೋಗಿಗಳು ಎಲ್ಲಾದಕ್ಕೂ ವೈದ್ಯರ ಬಳಿ ಸಲಹೆ ಪಡೆದು ನಂತರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಚಿಕಿತ್ಸೆ ಬಗ್ಗೆ ಏನು  ಮಾಡಬೇಕು
ಆಸ್ಪತ್ರೆ ವೈದ್ಯರ ಬಗ್ಗೆ ಅತೃಪ್ತಿ,  ಬೇರೆ ರೀತಿಯ ನಿರೀಕ್ಷೆ ಮತ್ತಿತರ ಅನೇಕ ಕಾರಣಗಳಿಂದ ಕೆಲ  ಅಸ್ತಮಾ ರೋಗಿಗಳು ಇನ್ ಹೆಲರ್ ನಿಲ್ಲಿಸಿಬಿಡುತ್ತಾರೆ. ಇದರಿಂದ  ಅಡ್ಡ ಪರಿಮಾಣಗಳು ಹೆಚ್ಚಾಗಬಹುದು. ಅಸ್ತಮಾ ನಿಯಂತ್ರಿಸುವಲ್ಲಿ ಇನ್ ಹೆಲೇಷಿಯನ್ ಥೆರಪಿ ಅತ್ಯಂತ ಪ್ರಮುಖವಾದದ್ದು, ನಮ್ಮ ದೇಶದಲ್ಲಿ ದಿನವೊಂದಕ್ಕೆ 4 ರೂಪಾಯಿಯಿಂದ 6 ರೂ.ನಂತೆ ಕಡಿಮೆ ಬೆಲೆಯಲ್ಲಿ ಈ ಚಿಕಿತ್ಸೆ  ದೊರೆಯುತ್ತದೆ. ಅಸ್ತಮಾ ನಿರ್ವಹಣೆಯಲ್ಲಿ ಐಸಿಟಿ ಚಿಕಿತ್ಸೆ ಅತ್ಯಂತ ಪ್ರಮುಖವಾದದ್ದು ಆಗಿದೆ. ಈ ಔಷಧ ಮೂಲಕ ಅಡ್ಡ ಪರಿಮಾಣವಾಗದಂತೆ ತಡೆಗಟ್ಟಬಹುದೆಂದು ಅಂಕುರಾ ಆಸ್ಪತ್ರೆಯ ವೈದ್ಯ ಡಾ. ಸುಮಾನ್ ಕುಮಾರ್  ಸಲಹೆ ನೀಡಿದ್ದಾರೆ.
ಆದಾಗ್ಯೂ, ತಿಳುವಳಿಕೆ ಕೊರತೆ ಹಿನ್ನೆಲೆಯಲ್ಲಿ ಅನೇಕ ರೋಗಿಗಳು ಇನ್ ಹೆಲರ್ ಥೆರಪಿ ಬಗ್ಗೆ ಉದಾಸೀನ ತೋರುತ್ತಿದ್ದಾರೆ.ಅಸ್ತಮಾ ರೋಗಿಗಳಿಗೆ ಆರೋಗ್ಯ ಹಾಗೂ ಹಣಕಾಸು ಹೊಂದಿಸುವುದೇ ಬಹಳ ಸವಾಲಿನ ಕೆಲಸ ಆಗಿರುತ್ತದೆ. ಅಸ್ತಮಾ  ಔಷಧಿಗಳ ಬಗ್ಗೆಯೂ  ಕಳಪೆಯ ಮಾತುಗಳು ಕೇಳಿಬರುತ್ತಿವೆ. ಅಗತ್ಯಕ್ಕೆ ತಕ್ಕಂತೆ ಔಷಧ ಪೂರೈಸುವವರ ಬಗ್ಗೆ ಅನೇಕ ರೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com