ಹದಿಹರೆಯದ ತಾಯಂದಿರಿಗೆ ಜನಿಸಿದ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ: ಅಧ್ಯಯನ

ಹದಿಹರೆಯದ ಹೆಣ್ಣುಮಕ್ಕಳಿಗೆ ಜನಿಸುವ ಮಕ್ಕಳು ವಯಸ್ಕ ಹೆಣ್ಣುಮಕ್ಕಳಿಗೆ ಹುಟ್ಟುವ ಮಕ್ಕಳಿಗಿಂತ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಹದಿಹರೆಯದ ಹೆಣ್ಣುಮಕ್ಕಳಿಗೆ ಜನಿಸುವ ಮಕ್ಕಳು ವಯಸ್ಕ ಹೆಣ್ಣುಮಕ್ಕಳಿಗೆ ಹುಟ್ಟುವ ಮಕ್ಕಳಿಗಿಂತ ಅಪೌಷ್ಠಿಕತೆಯಿಂದ ಬಳಲುತ್ತಿರುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಭಾರತದಲ್ಲಿ ಹದಿಹರೆಯದಲ್ಲಿ ತಾಯ್ತನ ಮತ್ತು ಮಕ್ಕಳ ಅಪೌಷ್ಠಿಕತೆ ಸಮಸ್ಯೆ ಬಗ್ಗೆ ನಡೆಸಿದ ಅಧ್ಯಯನ ಲಾನ್ಸೆಟ್ ಚೈಲ್ಡ್ ಅಂಡ್ ಅಡೊಲೆಸೆಂಟ್ ಹೆಲ್ತ್ ಎಂಬ ವೃತ್ತಪತ್ರಿಕೆಯಲ್ಲಿ ಪ್ರಕಟವಾಗಿದ್ದು ಸುಮಾರು 60 ಸಾವಿರದ 97 ತಾಯಂದಿರು ಮತ್ತು ಮಕ್ಕಳ ಜೋಡಿಯ ಮೇಲೆ ಅಧ್ಯಯನ ನಡೆಸಿ ದಾಖಲೆಗಳನ್ನು ವಿಶ್ಲೇಷಿಸಿದಾಗ ಈ ಅಂಶ ಕಂಡುಬಂದಿದೆ.
ಹದಿಹರೆಯದಲ್ಲಿ ತಾಯ್ತನದಿಂದ ಅಪೌಷ್ಠಿಕತೆಯ ಕೊರತೆಯಿರುವ ಮಕ್ಕಳು ಹುಟ್ಟುವುದಕ್ಕೆ ಸಾಕಷ್ಟು ಸಾಮಾಜಿಕ, ಜೈವಿಕ ಮತ್ತು ಆಯೋಜಿತ ಅಂಶಗಳು ಕಾರಣವಾಗಿರುತ್ತದೆ ಎಂಬ ವಿಷಯವನ್ನು ಅಧ್ಯಯನಕಾರರು ತಿಳಿದಿದ್ದಾರೆ.
ಭಾರತದ 2016ರ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯಲ್ಲಿ ಈ ಎಲ್ಲಾ ಅಂಶಗಳನ್ನು ವಿಶ್ಲೇಷಿಸಲಾಗಿತ್ತು. ಇದಕ್ಕೆ ಹಲವು ಸರ್ಕಾರೇತರ ಸಂಘಟನೆಗಳು ಕೂಡ ಕೈಜೋಡಿಸಿದ್ದವು, ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬೆಳವಣಿಗೆ ಕುಂಠಿತವಾಗಿರುವ ಮಕ್ಕಳು ಹುಟ್ಟುವುದು ಹೆಚ್ಚು ಮತ್ತು ಹದಿಹರೆಯದಲ್ಲಿ ತಾಯ್ತನ ಹೊಂದುವವರ ಸಂಖ್ಯೆಯಲ್ಲಿ ವಿಶ್ವದ ಹತ್ತು ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದೆ.
ಭಾರತದಲ್ಲಿ 18 ವರ್ಷದೊಳಗೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುವುದು ಅಕ್ರಮ ಎಂಬ ಕಾನೂನು ಜಾರಿಯಲ್ಲಿದ್ದರೂ ಕೂಡ 2016ರ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ ಪ್ರಕಾರ ಶೇಕಡಾ 27ರಷ್ಟು ಹೆಣ್ಣುಮಕ್ಕಳಿಗೆ 18 ವರ್ಷ ತುಂಬುವುದರ ಮುನ್ನವೇ ಮದುವೆ ಮಾಡಿಸಲಾಗುತ್ತಿದ್ದು 18 ವರ್ಷ ತುಂಬುವ ಹೊತ್ತಿಗೆ ಶೇಕಡಾ 31ರಷ್ಟು ಹೆಣ್ಣುಮಕ್ಕಳಿಗೆ ಮಗುವಾಗುತ್ತದೆ.
ಹದಿಹರೆಯದಲ್ಲಿ ತಾಯ್ತನವನ್ನು ತಡೆಯುವುದರಿಂದ ಬಡತನ, ಆನಾರೋಗ್ಯ, ಪೌಷ್ಠಿಕಾಂಶದ ಕೊರತೆ, ಸಮಾನತೆ, ಶಿಕ್ಷಣ ಮೊದಲಾದ ವಿಶ್ವಸಂಸ್ಥೆಯ ಸ್ಥಿರ ಅಭಿವೃದ್ಧಿಯ ಗುರಿಯನ್ನು ತಲುಪಬಹುದು ಎನ್ನುತ್ತಾರೆ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನೆ ಸಂಸ್ಥೆಯ ರಿಸರ್ಚ್ ಫೆಲೋ ನ್ಗುಯೇನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com