ಹಸಿರು ಸೊಪ್ಪುಗಳ ರಾಜ ಪಾಲಾಕ್ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರತೀನಿತ್ಯ ಅಡುಗೆ ಮನೆಯಲ್ಲಿ ಬಳಸಲಾಗುವ ಪಾಲಾಕ್ ಸೊಪ್ಪು ಅನೇಕ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಸಬಲ್ಲ ಗುಣಗಳನ್ನು ಹೊಂದಿದೆ. ಇದರ ಬಗ್ಗೆ ಬಹುತೇಕ ಮಂದಿಗೆ ಮಾಹಿತಿಯೇ ತಿಳಿದಿರುವುದಿಲ್ಲ. ಪಾಲಾಕ್ ಸೊಪ್ಪಿನ ಮಹತ್ವದ ಕುರಿತು ಹಾಗೂ ಅದರಲ್ಲಿರುವ ಔಷಧೀಯ ಗುಣಗಳನ್ನು ಇಲ್ಲಿ ವಿವರಿಸಲಾಗಿದೆ...

Published: 01st October 2019 01:37 PM  |   Last Updated: 01st October 2019 01:45 PM   |  A+A-


spinach

ಪಾಲಾಕ್ ಸೊಪ್ಪು (ಸಂಗ್ರಹ ಚಿತ್ರ)

Posted By : Manjula VN
Source : The New Indian Express

ಆರೋಗ್ಯ, ಸೌಂದರ್ಯ ವೃದ್ಧಿಸಬಲ್ಲ ಹಸಿರು ಸೊಪ್ಪುಗಳ ರಾಜ ಪಾಲಾಕ್ ಸೊಪ್ಪಿನ ಬಗ್ಗೆ ಇಲ್ಲಿದೆ ಮಾಹಿತಿ


ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಆಹಾರಗಳಿಂದ ಮಕ್ಕಳು ದೂರವಿರುವುದು ಸಾಮಾನ್ಯವಾಗಿ ಹೋಗಿದೆ. ನಗರದ ಬಿಝಿ ಲೈಫ್ ನಲ್ಲಿ ತೊಡಗಿಕೊಳ್ಳುತ್ತಿರುವ ಪೋಷಕರು ಮಕ್ಕಳಿಗೆ ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರ ಕೊಡುತ್ತಿರುವುದೇ ವಿರಳವಾಗಿ ಹೋಗಿದೆ. ಆರೋಗ್ಯದ ಕಡೆ ಗಮನ ಕೊಡುವ ಜನರ ಸಂಖ್ಯೆಯಂತೂ ವಿರಳವಾಗಿ ಹೋಗುತ್ತಿದೆ. ತರಕಾರಿ, ಹಸಿರುವ ಸೊಪ್ಪುಗಳ ಮಹತ್ವವನ್ನೇ ಜನರು ಮರೆತು ಹೋಗುತ್ತಿದ್ದಾರೆ. 

ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಜನರು ಜೀವನ ಸಾಗಿಸಲು ಆರಂಭಿಸಿದ್ದಾರೆ. ಪ್ರತೀ ಕಾಯಿಲೆ, ಸಮಸ್ಯೆಗಳಿಗೂ ವೈದ್ಯರ ಮೊರೆ ಹೋಗುವುದು ಸಾಮಾನ್ಯವಾಗಿ ಹೋಗಿದೆ. ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆ ಬಹು ಮುಖ್ಯವಾಗಿದ್ದು, ಇವುಗಳ ಪ್ರಾಮುಖ್ಯತೆಗಳನ್ನು ಪೋಷಕರು ತಿಳಿದುಕೊಂಡು, ಅದನ್ನು ಮಕ್ಕಳಿಗೂ ಹೇಳಿಕೊಡುವ ಮನೋಭಾನೆಯನ್ನು ಬೆಳೆಸಿಕೊಳ್ಳಬೇಕು. 

ಪ್ರತೀನಿತ್ಯ ಅಡುಗೆ ಮನೆಯಲ್ಲಿ ಬಳಸಲಾಗುವ ಪಾಲಾಕ್ ಸೊಪ್ಪು ಅನೇಕ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಸಬಲ್ಲ ಗುಣಗಳನ್ನು ಹೊಂದಿದೆ. ಇದರ ಬಗ್ಗೆ ಬಹುತೇಕ ಮಂದಿಗೆ ಮಾಹಿತಿಯೇ ತಿಳಿದಿರುವುದಿಲ್ಲ. ಪಾಲಾಕ್ ಸೊಪ್ಪಿನ ಮಹತ್ವದ ಕುರಿತು ಹಾಗೂ ಅದರಲ್ಲಿರುವ ಔಷಧೀಯ ಗುಣಗಳನ್ನು ಇಲ್ಲಿ ವಿವರಿಸಲಾಗಿದೆ...

  • ದಿನನಿತ್ಯ ನಾವು ಸೇವನೆ ಮಾಡುವ ನಾನಾ ಬಗೆಯ ಸೊಪ್ಪುಗಳಲ್ಲಿ ಪಾಲಕ್ ಅಗ್ರಸ್ಥಾನವನ್ನು ಪಡೆದಿದೆ. ಮನುಷ್ಯನ ದೇಹದಲ್ಲಿ ಉಂಟಾಗುವ ನಾನಾ ರೋಗಗಳನ್ನು ಗುಣಪಡಿಸಬಲ್ಲ ಸಾಮರ್ಥ್ಯವನ್ನು ಇದು ಹೊಂದಿದೆ. ಪಾಲಾಕ್ ನಲ್ಲಿರುವ ಆರೋಗ್ಯಕರ ಅಂಶಗಳು ಮನುಷ್ಯನ ವೃದ್ಧಾಪ್ಯವನ್ನು ತಡೆಗಟ್ಟುತ್ತದೆ. 
  • ಪಾಲಾಕ್ ಸೊಪ್ಪಿನಲ್ಲಿ ನಾರಿನಾಂಶ, ಪ್ರೋಟೀನ್ ಹೇರಳವಾಗಿದ್ದು, ಮನುಷ್ಯನ ದೇಹಕ್ಕೆ ಬಹುಮುಖ್ಯವಾದ ಕಬ್ಬಿಣಾಂಶ ಈ ಸೊಪ್ಪಿನಲ್ಲಿದೆ. ಪಾಲಾಕ್ ಸೊಪ್ಪನ್ನು ವಾರಕ್ಕೆ 3 ಬಾರಿ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಕೇವಲ ಆರೋಗ್ಯವಷ್ಟೇ ಅಲ್ಲದೆ, ಸೌಂದರ್ಯವನ್ನೂ ಇದು ವೃದ್ಧಿಸುತ್ತದೆ. ಪಾಲಾಕ್ ಸೊಪ್ಪಿನಲ್ಲಿರುವ ಆರೋಗ್ಯಕರ ಅಂಶಗಳು ಸೋರಿಯಾಸಿಸ್, ತುರಿಕೆ ಮತ್ತು ಒಣಚರ್ಮವನ್ನು ತಡೆಯುತ್ತದೆ. ಅಲ್ಲದೆ, ಕೂದಲ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪಾಲಾಕ್ ಸೊಪ್ಪಿನಲ್ಲಿರುವ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶ ಕೆಂಪು ರಕ್ತಕಣಗಳ ಶಕ್ತಿ ವೃದ್ಧಿಸಿ, ಪ್ರತೀ ಕೂದಲಿಗೂ ಆಮ್ಲಜನಕವನ್ನು ತಲುಪಿಸಲು ಸಹಕಾರಿಯಾಗಿದೆ. ಇದರಿಂದ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟಬಹುದು. 
  • ಈ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಎ ಹೇಱಲವಾಗಿದ್ದು, ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿಯಿಂದ ಹೊಸ ಜೀವಕೋಶಗಳು ಹುಟ್ಟುತ್ತವೆ. ಮುಖದ ಮೇಲಿನ ಕಪ್ಪುಕಲೆಗಳನ್ನೂ ಇದು ಮಾಯವಾಗಿಸುತ್ತದೆ. 
  • ಸೊಪ್ಪಿನಲ್ಲಿ ವಿಟಮಿನ್ ಕೆ ಇದ್ದು, ಇದು ಬಿಸಿಲಿನಿಂದ ಕಪ್ಪಗಾಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರುವಲ್ಲಿ ನೆರವಾಗುತ್ತದೆ. ಸಾರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ. ಸೊಪ್ಪಿನಲ್ಲಿರುವ ವಿಟಮಿನ್ ಬಿ ಸೂರ್ಯನ ಕಿರಣಗಳಲ್ಲಿರುವ ಹಾನಿಕಾರಕ ಅನಿನೇರಳೆ ಕಿರಣಗಳ ಪ್ರಭಾವದಿಂದ ರಕ್ಷಣೆ ನೀಡುತ್ತದೆ. 
  • ಅತಿ ನೇರಳೆ ಕಿರಣಗಳು ತ್ವಚೆಯನ್ನು ಸುಟ್ಟಂತೆ ಮಾಡುವ ಕ್ಯಾನ್ಸರ್ ಹಾಗೂ ವೃದ್ಧಾಪ್ಯ ಕುರುಹುಗಳು ಬೇಗನೆ ಬರುವಂತೆ ಮಾಡುತ್ತದೆ. ಆದರೆ, ಪಾಲಕ್ ಸೊಪ್ಪು ಸೇವನೆ ಅವುಗಳನ್ನು ತಡೆಹಿಡಿಯಲು ರಾಮಬಾಣವಾಗಿ ಕೆಲಸ ಮಾಡುತ್ತದೆ. ಸೊಪ್ಪಿನಲ್ಲಿ ನಾರಿನಾಂಶ ದೇಹದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಲಬದ್ಧತೆಯನ್ನೂ ದೂರಾಗಿಸುತ್ತದೆ. 

ಹಸಿರು ತರಕಾರಿ ಹಾಗೂ ಸೊಪ್ಪುಗಳ ಮಾರಾಟಕ್ಕೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಪ್ ಗಳಿದ್ದು, ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಸೊಪ್ಪು ಹಾಗೂ ತರಕಾರಿಗಳನ್ನು ಆರ್ಡರ್ ಮಾಡಿ ಮನೆಗಳ ಬಾಗಿಲಿಗೆ ಬರುವಂತೆ ಮಾಡಿಕೊಳ್ಳಬಹುದು.

ಕೀರೈಕಡೈ ಎಂಬ ಕೊಯಿಮತ್ತೂರು ಮೂಲದ ಆ್ಯಪ್ ಹಸಿರು ಸೊಪ್ಪುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಕೇವಲ ಮಾರಾಟ ಮಾಡುವುದಷ್ಟೇ ಅಲ್ಲದೆ, ಅಡುಗೆ ಮಾಡುವ ಕ್ರಮಗಳ ಕುರಿತೂ ಆ್ಯಪ್ ನಲ್ಲಿ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. 

ಕೀರೈಕಡೈ ಸ್ಥಾಪಕ ಶ್ರೀರಾಮ್ ಈ ಬಗ್ಗೆ ಮಾತನಾಡಿದ್ದು, ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದತ್ತ ಹೆಚ್ಚು ಗಮನಕೊಡಲು ಆರಂಭಿಸಿದ್ದಾರೆ. ಪಾಲಾಕ್ ಸೊಪ್ಪಿನ ಮಹತ್ವ ಅರಿತುಕೊಂಡು ಪ್ರತೀನಿತ್ಯದ ತಮ್ಮ ಆಹಾರ ಕ್ರಮದಲ್ಲಿ ಪಾಲಾಕ್ ಸೊಪ್ಪನ್ನು ಸೇರ್ಪಡೆಗೊಳಿಸಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ. 

ಕೊಯಿಮತ್ತೂರಿನಲ್ಲಿ ಒಟ್ಟು 35 ಕೃಷಿ ಭೂಮಿಯಿದ್ದು, ಅಲ್ಲಿ ಹಸಿರು ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಪ್ರತೀನಿತ್ಯ 10,000 ಹೆಚ್ಚು ಸೊಪ್ಪು ಕಟ್ಟುಗಳನ್ನು ಮಾರಾಟ ಮಾಡಲಾಗುತ್ತಿದೆ. ಅಂಗಡಿ ಬೆಳಿಗ್ಗೆ 6.30ರಿಂದ 11ರವರೆಗೂ ಹಾಗೂ ಸಂಜೆ 4ರಿಂದ 9ರವರೆಗೂ ತೆರೆಯಲಾಗಿರುತ್ತೆದ. ತರಕಾರಿ ಹಾಗೂ ಸೊಪ್ಪಿನಿಂದ ತಯಾರಿಸಿದ ಕುರುಕಲು ತಿಂಡಿಗಳನ್ನೂ ಇಲ್ಲಿ ಮಾರಾಟ ಮಾಡಲಾಗುತ್ತದೆ. ಆ್ಯಪ್ ಮೂಲಕ ಬಂದ ಆರ್ಡರ್ ಗಳನ್ನು ಸ್ವೀಕರಿಸಿ, ಗ್ರಾಹಕರಿಗೆ ತರಕಾರಿ, ಸೊಪ್ಪು ತಲುಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

Stay up to date on all the latest ಆರೋಗ್ಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp