ಕಲುಷಿತ, ವಿಷಯುಕ್ತ ಗಾಳಿಯಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ?

ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಮಕ್ಕಳಿರುವ ಪೋಷಕರಿಗಂತೂ ಈಗಲೇ ಆತಂಕ ಶುರುವಾಗಿದೆ. ಶಬ್ಧ ಮಾಲಿನ್ಯ ಒಂದೆಡೆಯಾದರೆ, ಮತ್ತೊಂದೆಡೆ ಕಲುಷಿತ ಹಾಗೂ ವಿಷಯುಕ್ತ ಗಾಳಿ ಮಕ್ಕಳನ್ನು ಕಾಡಲು ಆರಂಭಿಸುತ್ತದೆ. ವಿಷಯುಕ್ತ ಗಾಳಿಗೆ ಬಲಿಯಾಗುವವರ ಸಂಖ್ಯೆಯಲ್ಲಿ ಮಕ್ಕಳೇ ಹೆಚ್ಚು. ದೀಪಾವಳಿ ವೇಳೆ ಮಕ್ಕಳನ್ನು ರಕ್ಷಣೆ ಮಾಡುವುದೇ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಮಕ್ಕಳಿರುವ ಪೋಷಕರಿಗಂತೂ ಈಗಲೇ ಆತಂಕ ಶುರುವಾಗಿದೆ. ಶಬ್ಧ ಮಾಲಿನ್ಯ ಒಂದೆಡೆಯಾದರೆ, ಮತ್ತೊಂದೆಡೆ ಕಲುಷಿತ ಹಾಗೂ ವಿಷಯುಕ್ತ ಗಾಳಿ ಮಕ್ಕಳನ್ನು ಕಾಡಲು ಆರಂಭಿಸುತ್ತದೆ. ವಿಷಯುಕ್ತ ಗಾಳಿಗೆ ಬಲಿಯಾಗುವವರ ಸಂಖ್ಯೆಯಲ್ಲಿ ಮಕ್ಕಳೇ ಹೆಚ್ಚು. ದೀಪಾವಳಿ ವೇಳೆ ಮಕ್ಕಳನ್ನು ರಕ್ಷಣೆ ಮಾಡುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿ ಹೋಗುತ್ತದೆ. ಹಾಗಾದರೆ, ವಿಷಯುಕ್ತ ಗಾಳಿಯಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ...

ವಿಷಯುಕ್ತ ಗಾಳಿಯಿಂದ ಮಕ್ಕಳನ್ನು ರಕ್ಷಣೆ ಮಾಡುವ ಸಲುವಾಗಿಯೇ ಪ್ಯೂರ್ಲಾಜಿಕ್ ಲ್ಯಾಬ್ಸ್ ಇಂಡಿಯಾ ಮಕ್ಕಳಿಗಾಗಿಯೇ ಮಾಲಿನ್ಯ ವಿರೋಧಿ ಮಾಸ್ಕ್ ಗಳನ್ನು ಬಿಡುಗಡೆ ಮಾಡಿದೆ. ಈ ಮಾಸ್ಕ್ ಗಳನ್ನು ಪ್ರಾಣ ಏರ್ ಜೂನಿಯರ್ ಮಾಸ್ಕ್ ಎಂದು ಕರೆಯಲಾಗುತ್ತದೆ. 

ಪ್ಯೂರ್ಲಾಜಿಕ್ ಲ್ಯಾಬ್ಸ್ ಇಂಡಿಯಾ ಸಂಸ್ಥಾಪಕ ರೋಹಿತ್ ಬನ್ಸಾಲ್ ಮಾತನಾಡಿ, ಆ್ಯಂಟಿ ಪೊಲ್ಯುಷನ್ ಮಾಸ್ಕ್ ಗಳು ಮೈಕ್ರೋ ವೆಂಟಿಲೇಟರ್ ಗಳನ್ನು ಹೊಂದಿದ್ದು, ಇದರಲ್ಲಿರುವ ವ್ಯವಸ್ಥೆ ಮಕ್ಕಳು ಒಂದ ಕಡೆಯಿಂದ ಶುದ್ಧ ಗಾಳಿ ಉಸಿರಾಡಲು ಹಾಗೂ ಮತ್ತೊಂದು ಭಾಗದಿಂದ ಇಂಗಾಲದ ಡೈ ಆಕ್ಸೈಡ್'ನ್ನು ಹೊರಹಾಕಲು ಸಹಾಯ ಮಾಡುತ್ತದೆ. 

ಮಾಸ್ಕ್ ಗಳು 5 ಪದರಗಳ ರಕ್ಷಣೆಯ ಫಿಲ್ಟರ್ ಗಳನ್ನು ಹೊಂದಿದ್ದು, ಹೊಗೆಯಂತಹ ಗಾಳಿಯಿಂದ ದೂರ ಇರುವಂತೆ ನೋಡಿಕೊಳ್ಳುತ್ತದೆ. ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಕ್ಕಳಿಗೂ ಇದು ಸಹಾಯವಾಗಿದೆ. 

ವಿಷಯುಕ್ತ ಗಾಳಿ ಮಕ್ಕಳನ್ನು ಹೆಚ್ಚು ಕಾಡುತ್ತದೆ. ಅದರಲ್ಲೂ ನವಜಾತ ಶಿಶುಗಳಲ್ಲಿ ಇನ್ನೂ ಶ್ವಾಸಕೋಶ ಅಷ್ಟಾಗಿ ಬೆಳವಣಿಗೆಯಾಗಿರುವುದಿಲ್ಲ. ವಿಷಯುಕ್ತ ಗಾಳಿಯಿಂದ ನವಜಾತ ಶಿಶುಗಳು ಹೆಚ್ಚೆಚ್ಚು ನರಳುತ್ತವೆ ಎಂದು ಸ್ತ್ರೀರೋಗ ತಜ್ಞ, ಐವಿಎಫ್ ತಜ್ಞ ಡಾ. ರಿಟಾ ಬಕ್ಷಿ ಹೇಳಿದ್ದಾರೆ. 

ವಿಷಯುಕ್ತ ಗಾಳಿಗೆ ಮಕ್ಕಳು ಬಲಿಯಾಗುವುದಕ್ಕೂ ಮುನ್ನ ತಡ ಮಾಡದೇ ಈಗಲೇ ಪೋಷಕರು ಆ್ಯಂಟಿ ಪೊಲ್ಯುಷನ್ ಮಾಸ್ಕ್ ಹಾಕಿ ಕೊಳ್ಳಬೇಕು. ಈ ಮಾಸ್ಕ್ ಗಳಲ್ಲೂ ಎರಡು ರೀತಿಯ ವಿಧಾನಗಳಿವೆ. ಲೈಫ್ ಸ್ಟೈಲ್ ಮಾಸ್ಕ್ ಗಳನ್ನು ಪ್ರತಿನತ್ಯ ಬಳಕೆ ಮಾಡುವಂತಹದ್ದಾಗಿದ್ದು, ಸ್ಪೋರ್ಟ್ಸ್ ಪೊಲ್ಯುಷನ್ ಮಾಸ್ಕ್ ಗಳು ಚಟುವಟಿಕೆಗಳ ಸಂದರ್ಭದಲ್ಲಿ ಹಾಕಿಕೊಲ್ಳಲಾಗುತ್ತದೆ. ಪ್ರತೀ ವಯಸ್ಸಿನ ಮಕ್ಕಳಿಗೂ ಈ ಮಾಸ್ಕ್ ಗಳು ವಿಭಿನ್ನ ಅಳತೆಯಲ್ಲಿ ಬರುತ್ತವೆ. ಕಡಿಮೆ ಉಸಿರಾಟದ ಪ್ರತಿರೋಧಕ್ಕಾಗಿ ಎನ್90 ಅಥವಾ ಕಡಿಮೆ ದರದ ಫಿಲ್ಟರ್ ಗಳನ್ನು ಹೊಂದಿರುವ ಸ್ಪೆಷನ್ ಪೊಲ್ಯುಷನ್ ಮಾರ್ಕ್ ಮತ್ತು ಸಿಲಿಕಾನ್ ಸೀಲ್ ಇರುವ ಮಾಸ್ಕ್ ಗಳನ್ನು ಧರಿಸಬಹುದು. ಇದು ಮಕ್ಕಳಿಗೆ ಹಿತ ಹಾಗೂ ಆರಾಮದಾಯಕವಾಗಿರುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. 

ರೋಗ ನಿರೋಧಕ ಶಕ್ತಿ ಇರುವಂತ ಮಕ್ಕಳಿಗೆ ವಿಷಯುಕ್ತ ಗಾಳಿ ಸಾಕಷ್ಟು ಸಮಸ್ಯೆಗಳನ್ನು ಎದುರು ಮಾಡುತ್ತದೆ. ಇಂತಹ ಮಕ್ಕಳು ಮಾಸ್ಕ್ ಗಳನ್ನು ಧರಿಸಲೇಬೇಕಾಗುತ್ತದೆ. ಇರದರಿಂದ ಉಚ್ಛ್ವಾಸ ಹಾಗೂ ನಿಶ್ವಾಸ ಸುಲಭವಾಗುತ್ತದೆ. 

ಹೊರಗಿನ ಗಾಳಿಯಷ್ಟೇ ಅಲ್ಲ, ಮನೆಯಲ್ಲಿರುವ ಗಾಳಿಯನ್ನು ಶುದ್ಧೀಕರಿಸಿ
ಹೊರಾಂಗಣದ ಗಾಳಿಯಷ್ಟೇ ಕಲುಷಿತವಾಗಿರುವುದಿಲ್ಲ. ಮನೆಯಲ್ಲಿರುವ ಗಾಳಿ ಕೂಡ ಕಲುಷಿತವಾಗಿರುತ್ತದೆ. ಹೀಗಾಗಿ ಮನೆಯಲ್ಲಿನ ಗಾಳಿಯನ್ನು ಶುದ್ಧೀಕರಿಸಲು ಎಚ್ಚರ ವಹಿಸಬೇಕಾಗುತ್ತದೆ. ಮನೆಯಲ್ಲಿ ಏರ್ ಪ್ಯೂರಿಫೈರ್ಸ್ ಗಳನ್ನು ಬಳಕೆ ಮಾಡಬೇಕಾಗುತ್ತದೆ. ಎಲ್ಲಾ ಏರ್ ಪ್ಯೂರಿಫೈರ್ ಗಳೂ ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ. ದೀಪಾವಳಿ ವೇಳೆ ಗಾಳಿ ಅತ್ಯಂತ ವಿಷಯುಕ್ತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಹಾಕುವಂತರ ಏರ್ ಪ್ಯೂರಿಫೈರ್ಸ್ ಗಳು ಸೂಕ್ತ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ಹೀಗಾಗಿ ಭಾರತದಲ್ಲಿಯೇ ತಯಾರಿಸಲಾಗಿರುವಂತಹ ಏರ್ ಪ್ಯೂರಿಫೈರ್ಸ್ ಗಳನ್ನು ಖರೀದಿ ಮಾಡಬೇಕು. ಏಕೆಂದರೆ, ತಯಾರಕರು ಇಲ್ಲಿನ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ತಯಾರು ಮಾಡಿರುತ್ತಾರೆ. ವಾಯು ಕಲುಷಿತವಾಗುವುದಕ್ಕೂ ಮುನ್ನವೇ ಎಚ್ಚರ ವಹಿಸಿ ಕ್ರಮ ಕೈಗೊಳ್ಳುವುದು ಉತ್ತಮ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com