ಒಳ್ಳೆಯ ಕೊಲೆಸ್ಟ್ರಾಲ್, ಕೆಟ್ಟ ಕೊಲೆಸ್ಟ್ರಾಲ್: ತಿಳಿದುಕೊಳ್ಳಬೇಕಾದ ವಿಷಯ!

ಕೊಲೆಸ್ಟ್ರಾಲ್   ಬಗ್ಗೆ ಅನೇಕ ಜನರು ತಪ್ಪು ತಿಳುವಳಿಕೆ ಹೊಂದಿದ್ದಾರೆ. ಇದರಿಂದಾಗಿ ಹೃದಯಕ್ಕೆ ಹಾನಿ ಉಂಟಾಗುತ್ತದೆ ಅಂದುಕೊಂಡಿದ್ದಾರೆ. ಈ ಕೊಲೆಸ್ಟ್ರಾಲ್ ಕುರಿತು ಆರೋಗ್ಯ ತಜ್ಞರು ಒಂದಿಷ್ಟು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದ್ರಾಬಾದ್ : ಕೊಲೆಸ್ಟ್ರಾಲ್   ಬಗ್ಗೆ ಅನೇಕ ಜನರು ತಪ್ಪು ತಿಳುವಳಿಕೆ ಹೊಂದಿದ್ದಾರೆ. ಇದರಿಂದಾಗಿ ಹೃದಯಕ್ಕೆ ಹಾನಿ ಉಂಟಾಗುತ್ತದೆ ಅಂದುಕೊಂಡಿದ್ದಾರೆ.  ಕೊಲೆಸ್ಟ್ರಾಲ್ ಅಂದ್ರೆ ಏನು? ಅದರ ವಿಧಗಳು ಹಾಗೂ ಸಮತೋಲನ ಹೇಗೆ ಸಾಧಿಸಬಹುದು ಎಂಬುದರ ಬಗ್ಗೆ  ಆರೋಗ್ಯ ತಜ್ಞರು ಒಂದಿಷ್ಟು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.

ಕೊಲೆಸ್ಟ್ರಾಲ್ ಅಂದ್ರೆ ಏನು?

ಕೊಲೆಸ್ಟ್ರಾಲ್  ಸ್ವಾಭಾವಿಕವಾಗಿ ನಮ್ಮ ಲೀವರ್ ನಿಂದ ಉತ್ಪತ್ತಿಯಾಗುತ್ತದೆ. ಟೆಸ್ಟೊಸ್ಟಿರೊನ್ , ಇಸ್ಟ್ರೋಜಿನ್ ಮತ್ತು ಅಡ್ರೆನಾಲ್ ನಂತಹ ಹಾರ್ಮೋನ್ ಗಳ ಅಭಿವೃದ್ದಿಯಲ್ಲಿ ಇದು  ಪ್ರಮುಖವಾಗಿದೆ. ಜೀವಕೋಶ ಪೊರೆಗಳ ಬೆಳವಣಿಗೆ ಹಾಗೂ ಡಿ ವಿಟಮಿನ್, ಪಿತ್ತರಸ  ಉತ್ಪತ್ತಿಯಲ್ಲೂ ಕೊಲೆಸ್ಟ್ರಾಲ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ.  ದೇಹ ದಪ್ಪು ಆಗುವುದರಲ್ಲಿ ವಿಟಮಿನ್ ಡಿ ಹಾಗೂ ಪಿತ್ತರಸ ಆಮ್ಲ ಅಗತ್ಯವಾಗಿದೆ.

ಕೊಲೆಸ್ಟ್ರಾಲ್  ವಿಧಗಳು

ಕಡಿಮೆ ಸಾಂದ್ರತೆಯ  ಲಿಪೊ ಪ್ರೊಟಿನ್ ಕೆಟ್ಟ ಕೊಲೆಸ್ಟ್ರಾಲ್ ಎಂದು ಹೆಸರಾಗಿದೆ. ಇದು ಹೆಚ್ಚಾದರೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಶಿಸ್ತುಬದ್ಧವಲ್ಲದ ಜೀವನ ಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ ಸೇವೆಯಿಂದ ಇದು ಹೆಚ್ಚಾಗುತ್ತದೆ. 

ಅತಿ ಕಡಿಮೆ ಸಾಂದ್ರತೆಯ ಲಿಪೊಪ್ರೊಟಿನ್ ಮತ್ತೊಂದು ಕೆಟ್ಟ ಕೊಲೆಸ್ಟ್ರಾಲ್ ಆಗಿದೆ. ಇವೆರಡು ದೇಹದ ತೂಕ ಹಾಗೂ ದೇಹದ ರಚನೆಯಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ.

ಹೆಚ್ಚಿನ ಸಾಂದ್ರತೆಯ ಲಿಪೊಪ್ರೊಟಿನ್ ಒಳ್ಳೆಯ ಕೊಲೆಸ್ಟ್ರಾಲ್ ಆಗಿದೆ. ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ. ರಕ್ತದ ಕಣಗಳಿಂದ ಕೆಟ್ಟ ಕೊಲೆಸ್ಟ್ರಾಲ್ ನ್ನು ಇದು ತೊಡೆದು ಹಾಕುತ್ತದೆ.  ಹೆಚ್ಚಿನ ಸಾಂದ್ರತೆಯ ಲಿಪೊಪ್ರೊಟಿನ್ ರಕ್ತಕಣಗಳಲ್ಲಿ  ಶೇ, 20 ರಿಂದ 30 ರಷ್ಟು ಕೊಲೆಸ್ಟ್ರಾಲ್ ಬಂದರೆ, ಕಡಿಮೆ ಸಾಂದ್ರತೆಯ ಲಿಪೊಪ್ರೊಟಿನ್ ನಿಂದ ಶೇ. 60 ರಿಂದ 70 ಹಾಗೂ ಅತಿ ಕಡಿಮೆ ಸಾಂದ್ರತೆಯ ಲಿಪೊಪ್ರೊಟಿನ್ ನಿಂದ ಶೇ. 10 ರಿಂದ 15 ರಷ್ಟು ಕೊಲೆಸ್ಟ್ರಾಲ್ ಉಂಟಾಗುತ್ತದೆ. 

ದೇಹಕ್ಕೆ ಅಗತ್ಯವಾದಷ್ಟು ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ನ್ನುಉತ್ಪಾದಿಸುವ ಸಾಮರ್ಥ್ಯವನ್ನು ಲೀವರ್ ಹೊಂದಿರುತ್ತದೆ. ಆದಾಗ್ಯೂ, ನಮ್ಮ ಆಹಾರ ಪದ್ಧತಿಯಲ್ಲಿ ಮಿತಿ ಮೀರಿದಾಗ ಅದರ ಸ್ವಾಭಾವಿಕ ಕಾರ್ಯ ನಿರ್ವಹಣ ಸಾಮರ್ಥ್ಯಕ್ಕೆ ಅಡ್ಡಿಯುಂಟಾಗುತ್ತದೆ.

ಸಮತೋಲನ ಸಾಧಿಸುವುದು ಹೇಗೆ ?
* ಎಲ್ಲಾ ಸಂಸ್ಕರಿಸಿದ, ಪ್ಯಾಕೇಜ್ ಮಾಡಿದ, ಹೆಚ್ಚು ಉರಿದ ಮತ್ತು ಸಂಸ್ಕರಿಸಿದ ಆಹಾರವನ್ನು ತಿನ್ನಬಾರದು
*  ಮೊಟ್ಟೆಯ ಒಳಭಾಗ, ಬೆಣ್ಣೆ, ತುಪ್ಪ, ಬೀಜಗಳು, ಬೀಜಗಳು, ಕೊಬ್ಬಿನಾಂಶದ ಮೀನುಗಳನ್ನು ಹೆಚ್ಟಾಗಿ ಸೇವಿಸಬಾರದು
* ನಿರಂತವಾಗಿ ವ್ಯಾಯಾಮ ಮಾಡಬೇಕು
* ಮದ್ಯ ಸೇವನೆ ಮಾಡಬಾರದು
* ತರಕಾರಿಗಳು, ಹಣ್ಣುಗಳು ಹಾಗೂ ಸಾಲಾಡನ್ನು ಹೆಚ್ಚಾಗಿ ಸೇವಿಸಬೇಕು

ಕೊಲೆಸ್ಟ್ರಾಲ್ ನಮ್ಮ ಶತ್ರು ಅಲ್ಲ.  ನಮ್ಮ ಹಾರ್ಮೋನುಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಇದು ಪ್ರಮುಖವಾಗಿದೆ. ಐದು ವರ್ಷಕ್ಕೊಮ್ಮೆ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಬೇಕು, ಉತ್ತಮ ಆರೋಗ್ಯಕ್ಕೆ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಒಳ್ಳೇಯದೆಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com