ಆರೋಗ್ಯಕರ ಕಣ್ಣುಗಳಿಗೆ ಪೌಷ್ಟಿಕಯುಕ್ತ ಆಹಾರಗಳು!

ಧೀರ್ಘ ಕಾಲದ ವರೆಗೂ ಮೊಬೈಲ್, ಲ್ಯಾಪ್ ಟಾಪ್ ಮತ್ತು ಟಿವಿ ಪರದೆಗಳನ್ನು ವೀಕ್ಷಿಸುವುದು ಕಣ್ಣುಗಳಿಗೆ ಹಾನಿಕಾರಕ. ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಆರೋಗ್ಯಕರ ಕಣ್ಣುಗಳಿಗೆ  ಸಮಾನ ಮಹತ್ವ ನೀಡಬೇಕಾಗಿದೆ. ಆರೋಗ್ಯಕರ ಕಣ್ಣುಗಳಿಗಾಗಿ ಕೆಲವೊಂದು ಪೌಷ್ಟಿಕಯುಕ್ತ ಆಹಾರಗಳ ಸೇವನೆಗೆ  ಇಬ್ಬರು ಆಹಾರ ತಜ್ಞರು ಸಲಹೆ ನೀಡಿದ್ದಾರೆ.

Published: 26th September 2019 04:20 PM  |   Last Updated: 26th September 2019 04:20 PM   |  A+A-


casual_photo

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ನವದೆಹಲಿ:ಧೀರ್ಘ ಕಾಲದ ವರೆಗೂ ಮೊಬೈಲ್, ಲ್ಯಾಪ್ ಟಾಪ್ ಮತ್ತು ಟಿವಿ ಪರದೆಗಳನ್ನು ವೀಕ್ಷಿಸುವುದು ಕಣ್ಣುಗಳಿಗೆ ಹಾನಿಕಾರಕ. ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಆರೋಗ್ಯಕರ ಕಣ್ಣುಗಳಿಗೆ  ಸಮಾನ ಮಹತ್ವ ನೀಡಬೇಕಾಗಿದೆ. ಆರೋಗ್ಯಕರ ಕಣ್ಣುಗಳಿಗಾಗಿ ಕೆಲವೊಂದು ಪೌಷ್ಟಿಕಯುಕ್ತ ಆಹಾರಗಳ ಸೇವನೆಗೆ  ಇಬ್ಬರು ಆಹಾರ ತಜ್ಞರು ಸಲಹೆ ನೀಡಿದ್ದಾರೆ.

ವಿಟಮಿನ್  ಆಹಾರಗಳು:  ನಮ್ಮ ಕಣ್ಣುಗಳು ಆರೋಗ್ಯದಿಂದ ಇರಲು ವಿಟಮಿನ್ ಎ, ಸಿ ಮತ್ತು ಇ ಹೆಚ್ಚಾಗಿರುವ ಆಹಾರವನ್ನು ಸೇವಿಸಬೇಕು. ಇದು ಆರೆಂಜ್, ದ್ರಾಕ್ಷಿ, ನಿಂಬೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಿಂದ ನಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿ ಇಡಬಹುದಾಗಿದೆ. ಸ್ಟ್ರಾಬೇರಿ, ಮೆಣಸು, ಪೀಚಸ್ ರೀತಿಯ ಹಣ್ಣುಗಳನ್ನು ಸೇವಿಸುವುದರಿಂದಲೂ ವಿಟಮಿನ್ ದೊರೆಯುತ್ತದೆ ಎಂದು ಆಹಾರ ತಜ್ಞ ದೀಪ್ತಿ ಜಿ. ದುಹಾ ಹೇಳಿದ್ದಾರೆ.

ಕಣ್ಣುಗಳು  ಉತ್ತಮವಾಗಿ ಕಾರ್ಯನಿರ್ವಹಿಸಲು ವಿಟಮಿನ್ ಸಿ ಹೆಚ್ಚಾಗಿ ಬೇಕಾಗಿರುತ್ತದೆ. ಇದರಿಂದಾಗಿ ಕ್ಯಾಟರಾಕ್ಟ್ ನಂತರ ಕಣ್ಣಿನ ಸಮಸ್ಯೆಗಳು ಉಂಟಾಗದಂತೆ ತಡೆಯಬಹುದು ಎಂದು ಹೆಸರಾಂತ ಆಹಾರ ತಜ್ಞ ಹರ್ಷಿತ್ ದಿಲ್ವಾರಿ ಸಲಹೆ ನೀಡಿದ್ದಾರೆ.

*  ಹಸಿ ಸೊಪ್ಪು ಹಾಗೂ ಹಸಿರು ತರಕಾರಿಗಳು: ಮೂಲಂಗಿ, ದಂಟು, ಸಪ್ಪಸಿಗೆ  ಸೊಪ್ಪು, ಹೂ ಕೋಸು ಹಾಗೂ ಮೊಟ್ಟೆಗಳು ಆರೋಗ್ಯಕರ ಕಣ್ಣಿಗೆ ಉತ್ತಮ ಆಹಾರವಾಗಿವೆ. 

* ಒಮೇಗಾ-3 ಸಮೃದ್ಧ ಆಹಾರಗಳು:  ಸಲ್ಮಾನ್ , ತುನಾ, ಸಾರ್ಡಿನೆಸ್ ಮೀನಿನಂತಹ ಓಮೇಗಾ 3 ಸಮೃದ್ಧತೆ ಹೆಚ್ಚಾಗಿರುವ ಆಹಾರಗಳಲ್ಲಿ ವಿಟಮಿನ್ ಡಿ ಹೆಚ್ಚಾಗಿರುತ್ತದೆ.ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಣ್ಣುಗಳ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಒಂದು ವೇಳೆ ಮೀನನ್ನು ತಿನ್ನದಿದ್ದರೆ ಕಡ್ಲೆಕಾಯಿ, ಅಗಸೆ ರೀತಿಯ ಬೀಜಗಳನ್ನು ಸೇವಿಸಬೇಕು. 

*ದ್ವಿದಳ ಧಾನ್ಯಗಳು ಮತ್ತು ಬೀನ್ಸ್ ಗಳು: ದ್ವಿದಳ ಧಾನ್ಯಗಳು ಹಾಗೂ ಬೀನ್ಸ್ ಗಳಲ್ಲಿ ಸತುವಿನ ಪ್ರಮಾಣ ಹೆಚ್ಚಾಗಿದ್ದು, ಇಂತಹ ಆಹಾರಗಳನ್ನು ಸೇವಿಸುವುದರಿಂದ ಕಣ್ಣಿಗೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. 

ಕಡಿಮೆ ಕೊಬ್ಬಿನಾಂಶವಿರುವ ಹಾಲು,ಮೊಟ್ಟೆಯೊಂದಿಗೆ ಉತ್ತಮ ರೀತಿಯ ಉಪಹಾರ ಸೇವನೆ  ಹಾಗೂ ಕುಡಿಯುವ ನೀರಿನಿಂದಲೂ ಕಣ್ಣುಗಳನ್ನು ಆರೋಗ್ಯಕರ ರೀತಿಯಲ್ಲಿ ಸಂರಕ್ಷಿಸಿಕೊಳ್ಳಬಹುದಾಗಿದೆ. ಟೊಮ್ಯಾಟೋ, ಬೆಳುಳ್ಳಿ ಮತ್ತಿತರ ಪೌಷ್ಟಿಕ ಆಹಾರ ಹೆಚ್ಚಾಗಿರುವ ಆಹಾರ ಸೇವಿಸುವುದರಿಂದ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಆಹಾರ ತಜ್ಞರು ಸಲಹೆ ನೀಡಿದ್ದಾರೆ.

Stay up to date on all the latest ಆರೋಗ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp