ಪ್ಲಾಸ್ಮಾ ಥೆರೆಪಿ: ಕೊರೋನಾ ವೈರಸ್ ರೋಗಕ್ಕೆ ಕೊನೆಗೂ ಸಿಕ್ಕಿತಾ ಮದ್ದು!?

ಮಾರಣಾಂತಿಕ ಕೊರೋನಾ ವೈರಸ್ ಗೆ 2 ಮಿಲಿಯನ್ ಗೂ ಅಧಿಕ ಜನರು ವಿಶ್ವಾದ್ಯಂತ ಬಲಿಯಾಗಿದ್ದು, ನಿಖರವಾದ ಚಿಕಿತ್ಸೆ ಇನ್ನೂ ಲಭ್ಯವಾಗಿಲ್ಲ. ವೈದ್ಯರು ಇನ್ನೂ ಔಷಧಗಳ ಶೋಧದಲ್ಲಿ ಮುಳುಗಿದ್ದಾರೆ. 
ಪ್ಲಾಸ್ಮಾ ಥೆರೆಪಿ: ಕೊರೋನಾ ವೈರಸ್ ರೋಗಕ್ಕೆ ಕೊನೆಗೂ ಸಿಕ್ಕಿತಾ ಮದ್ದು!?
ಪ್ಲಾಸ್ಮಾ ಥೆರೆಪಿ: ಕೊರೋನಾ ವೈರಸ್ ರೋಗಕ್ಕೆ ಕೊನೆಗೂ ಸಿಕ್ಕಿತಾ ಮದ್ದು!?

ನವದೆಹಲಿ: ಮಾರಣಾಂತಿಕ ಕೊರೋನಾ ವೈರಸ್ ಗೆ 2 ಮಿಲಿಯನ್ ಗೂ ಅಧಿಕ ಜನರು ವಿಶ್ವಾದ್ಯಂತ ಬಲಿಯಾಗಿದ್ದು, ನಿಖರವಾದ ಚಿಕಿತ್ಸೆ ಇನ್ನೂ ಲಭ್ಯವಾಗಿಲ್ಲ. ವೈದ್ಯರು ಇನ್ನೂ ಔಷಧಗಳ ಶೋಧದಲ್ಲಿ ಮುಳುಗಿದ್ದಾರೆ. 

ಹಲವು ವಿಧಾನಗಳ ಮೂಲಕ ಕೋವಿಡ್-19 ನ್ನು ಗುಣಪಡಿಸಲು ಯತ್ನಿಸುತ್ತಿರುವ ವೈದ್ಯರಿಗೆ ಇತ್ತೀಚಿನ ದಿನಗಳಲ್ಲಿ ಮಹತ್ವದ ಔಷಧ ವಿಧಾನವೊಂದು ಲಭಿಸಿದೆ. ಅದೇನೆಂದರೆ ಪ್ಲಾಸ್ಮಾ ಥೆರೆಪಿ!

ಸಾಕೇತ್ ನಲ್ಲಿರುವ ಮಾಕ್ಸ್ ಆಸ್ಪತ್ರೆಯಲ್ಲಿನ 49 ವರ್ಷದ ಕೊರೋನಾ ಪೀಡಿತರ ಮೇಲೆ ಈ ಪ್ಲಾಸ್ಮಾ ಥೆರೆಪಿಯನ್ನು ಪ್ರಯೋಗ ಮಾಡಲಾಗಿದ್ದು ಅದು ಫಲ ನೀಡಿದೆ. ವೆಂಟಿಲೇಟರ್ ಸಹಾಯದಲ್ಲಿದ್ದ ವ್ಯಕ್ತಿ ಈಗ ಚೇತರಿಕೆ ಕಂಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 

ಕೊರೋನಾ ಚಿಕಿತ್ಸೆಗೆ ಆಶಾಕಿರಣದಂತೆ ಕಾಣುತ್ತಿರುವ ಪ್ಲಾಸ್ಮಾ ಥೆರೆಪಿಯನ್ನು ಅನುಸರಿಸಲು ಐಸಿಎಂಆರ್ ಸಹ ಇತ್ತೀಚೆಗೆ ರಾಜ್ಯಗಳಿಗೆ ಅನುಮತಿ ನೀಡಿತ್ತು. ಸುಮಾರು 100 ಸಂಸ್ಥೆಗಳು ಪ್ಲಾಸ್ಮಾ ಥೆರೆಪಿ ಕೋವಿಡ್-19 ಚಿಕಿತ್ಸೆಗೆ ಎಷ್ಟರ ಮಟ್ಟಿಗೆ ಫಲಕಾರಿ ಹಾಗೂ ಸುರಕ್ಷಿತ ಎಂಬುದನ್ನು ಅಧ್ಯಯನ ನಡೆಸಲು ಮುಂದಾಗಿವೆ. ಗುಜರಾತ್, ಕೇರಳ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್-19 ಚಿಕಿತ್ಸೆ ನೀಡಲು ಪ್ಲಾಸ್ಮಾ ಥೆರೆಪಿಯನ್ನು ಪ್ರಯೋಗಿಸಲಾಗುತ್ತಿದೆ. 

ಏನಿದು ಪ್ಲಾಸ್ಮಾ ಥೆರೆಪಿ?

ಈ ಚಿಕಿತ್ಸಾ ವಿಧಾನದಲ್ಲಿ ಕೋವಿಡ್-19 ರೋಗದಿಂದ ಗುಣಮುಖರಾಗಿರುವ ವ್ಯಕ್ತಿಯ ಪ್ಲಾಸ್ಮಾವನ್ನು ಕೋವಿಡ್-19 ನಿಂದ ಗಂಭೀರ ಸ್ಥಿತಿಯಲ್ಲಿ ಬಳಲುತ್ತಿರುವ ವ್ಯಕ್ತಿಗೆ ವರ್ಗಾವಣೆ ಮಾಡಲಾಗುತ್ತದೆ. 

ಇದು ಹೇಗೆ ಕಾರ್ಯನಿರ್ವಹಣೆ ಮಾಡಲಿದೆ? 

ಈ ಚಿಕಿತ್ಸಾ ವಿಧಾನದಲ್ಲಿ ಕೊರೋನಾ ವೈರಸ್ ನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕೊರೋನಾ ವೈರಸ್ ನಿಂದ ಬಳಲುತ್ತಿರುವ ರೋಗಿಗೆ ನೀಡಲಾಗುತ್ತದೆ. ಗುಣಮುಖಗೊಂಡ ವ್ಯಕ್ತಿಯ ರಕ್ತದಿಂದ ಪ್ರತಿಕಾಯಗಳನ್ನು ರೋಗಿಗೆ ವರ್ಗಾವಣೆ ಮಾಡುವುದರಿಂದ ವೈರಸ್ ವಿರುದ್ಧ ಈ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಹೊಂದಿರುವ ಪ್ರತಿಕಾಯಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿವೆ. 

ಪ್ಲಾಸ್ಮಾ ಥೆರೆಪಿಯಲ್ಲಿ ಪ್ಲಾಸ್ಮಾವನ್ನು ರಕ್ತದಾನದ ಮಾದರಿಯಲ್ಲೇ ಬೇರೊಬ್ಬ ರೋಗಿಗೆ ವರ್ಗಾವಣೆ ಮಾಡಲಾಗುತ್ತದೆ. ಸಧ್ಯಕ್ಕೆ ಕೊರೋನಾ ಚಿಕಿತ್ಸೆಗೆ ವೈದ್ಯರು ಕಂಡುಕೊಂಡಿರುವ ಪರಿಣಾಮಕಾರಿ ಚಿಕಿತ್ಸಾ ವಿಧಾನ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com