ಕೊರೋನಾ ಸೈಲೆಂಟಾಗಿಯೇ ನಿಮಗೂ ಬಂದು ಹೋಗಿರಬಹುದು: ಯುಎಸ್ ಅಧ್ಯಯನ

ಭಾರತದಲ್ಲಿ ಶೇಕಡಾ 80 ರಷ್ಟು ಮಂದಿಯಲ್ಲಿ ಮಾರಕ ಕೊರೋನಾವೈರಸ್ ಸೋಂಕಿನ ಲಕ್ಷಣಗಳು ಕಂಡುಬರದಿದ್ದರೂ ಅಮೆರಿಕಾದ ಹೊಸ ಅಧ್ಯಯನವೊಂದರ ಪ್ರಕಾರ ಅದು ಈಗಾಗಲೇ ನಿಮ್ಮಲ್ಲೂ ಸೈಲಾಂಟಾಗಿಯೇ ಬಂದು ಹೋಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಮಹಿಳೆಯೊಬ್ಬರಿಂದ ಮಾದರಿ ಸಂಗ್ರಹಿಸುತ್ತಿರುವುದು
ಮಹಿಳೆಯೊಬ್ಬರಿಂದ ಮಾದರಿ ಸಂಗ್ರಹಿಸುತ್ತಿರುವುದು

ವಾಷಿಂಗ್ಟನ್ : ಭಾರತದಲ್ಲಿ ಶೇಕಡಾ 80 ರಷ್ಟು ಮಂದಿಯಲ್ಲಿ ಮಾರಕ ಕೊರೋನಾವೈರಸ್ ಸೋಂಕಿನ ಲಕ್ಷಣಗಳು ಕಂಡುಬರದಿದ್ದರೂ ಅಮೆರಿಕಾದ ಹೊಸ ಅಧ್ಯಯನವೊಂದರ ಪ್ರಕಾರ ಅದು ಈಗಾಗಲೇ ನಿಮ್ಮಲ್ಲೂ ಸೈಲಾಂಟಾಗಿಯೇ ಬಂದು ಹೋಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ನಮ್ಮಗೆ ಗೊತ್ತಿಲ್ಲದ ರೀತಿಯಲ್ಲಿ ಸುತ್ತಮುತ್ತ ಇರಲಿರುವ ಜನರಿಂದಲೂ ಈ ಸೋಂಕು ಬರಲಿದೆ ಎಂದು ತಿಳಿದುಬಂದಿದೆ. ಕಳೆದ ವಾರ ನ್ಯೂಯಾರ್ಕ್ ಆಸ್ಪತ್ರೆಯಲ್ಲಿನ ಗರ್ಭಿಣಿ ಮಹಿಳೆ, ಅಮೆರಿಕಾದ ನೌಕ ವಾಹಕ, ಬೊಸ್ಟನ್ ನಲ್ಲಿನ ವಸತಿ ಹೀನರೊಬ್ಬರಲ್ಲಿ ಹಾಗೂ ಕ್ಯಾಲಿಪೋರ್ನಿಯಾ ಮತ್ತು ಅನೇಕ ಯುರೋಪಿಯನ್ ರಾಷ್ಟ್ರಗಳಲ್ಲಿ ಸೈಲಾಂಟಾಗಿ ಸೋಂಕು ಇರುವ ಬಗ್ಗೆ ವರದಿಯಾಗಿದೆ. 

ಶೇಕಡಾ 25 ರಷ್ಟು ಸೋಂಕಿತ ಜನರಲ್ಲಿ ಲಕ್ಷಣಗಳು ಕಂಡುಬರುವುದಿಲ್ಲ ಎಂದು ಅಮೆರಿಕಾದ ರೋಗಗಳ ನಿಯಂತ್ರಣ ಮತ್ತು ತಡೆ ವಿಭಾಗದ ಮುಖ್ಯಸ್ಥರು ಹೇಳುತ್ತಾರೆ. ಮಿಲಿಟರಿ ಸಿಬ್ಬಂದಿಯಲ್ಲಿ ಇದು 60% ರಿಂದ 70% ರಷ್ಟು ಹೆಚ್ಚಿರಬಹುದು ಎಂದು ಉಪಾಧ್ಯಕ್ಷ ಜಾನ್ ಹೆಟೆನ್ ತಿಳಿಸಿದ್ದಾರೆ. 

ವಿಶ್ವದಾದ್ಯಂತ ಸುಮಾರು 2.3 ಮಿಲಿಯನ್ ಗೂ ಹೆಚ್ಚು ಜನರು ಈ ಸೋಂಕಿಗೆ ತುತ್ತಾಗಿದ್ದು, 1 ಲಕ್ಷದ 60 ಸಾವಿರ ಜನರು ಮೃತಪಟ್ಟಿರುವುದು ವರದಿಯಾಗಿದೆ. ಜನವರಿಯಿಂದಲೂ ಕಾಣಿಸಿಕೊಂಡ ಈ ಸೋಂಕು ಆರ್ಥಿಕ ಹಾಗೂ ಸಾಮಾಜಿಕ ವಲಯದ ಮೇಲೆ ತೀವ್ರ ರೀತಿಯ ಹಾನಿಯನ್ನುಂಟುಮಾಡಿದೆ. 

ಸ್ಟೆಲ್ತ್ ಕೇಸ್ ಅಧ್ಯಯನ:  ಕೊರೋನಾವೈರಸ್ ಕಂಡುಬಂದರೆ ಸಾಮಾನ್ಯವಾಗಿ ಜ್ವರ ರೀತಿಯ ಲಕ್ಷಣಗಳು ಕಂಡುಬರುತ್ತವೆ. ಆದರೆ,  ಸೋಂಕಿನ ಲಕ್ಷಣಗಳು ಇಲ್ಲದಿರುವ ಪುರಾವೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಐಸ್ ಲ್ಯಾಂಡಿನ ವಿಜ್ಞಾನಿಗಳು ತನ್ನ ದೇಶದ ಒಟ್ಟಾರೇ ಜನಸಂಖ್ಯೆಯಲ್ಲಿ  ಶೇ. 6 ರಷ್ಟು ತಪಾಸಣೆಗೆ ಒಳಪಡಿಸಿದಾಗ 0.7 ರಷ್ಟು ಪಾಸಿಟಿವ್ ಕಂಡುಬಂದಿದೆ. ಆದ್ದರಿಂದ ಇತ್ತೀಚಿನ ಪ್ರಯಾಣ ಅಥವಾ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಶೇ. 13% ರಷ್ಟು ಜನರು ಹೆಚ್ಚಿನ ಅಪಾಯದಲ್ಲಿದ್ದಾರೆ ಎನ್ನಲಾಗಿದೆ. 

ನ್ಯೂಯಾರ್ಕ್  ಆಸ್ಪತ್ರೆಯೊಂದರಲ್ಲಿ ಹೆರಿಗೆಗಾಗಿ ಆಗಮಿಸಿದ ಎಲ್ಲಾ ಗರ್ಭಿಣಿಯರನ್ನು ತಪಾಸಣೆ ಮಾಡಲಾಗಿದ್ದು, ಶೇ. 14 ರಷ್ಟು ಮಂದಿಯಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ,  33 ಪಾಸಿಟಿವ್ ಪ್ರಕರಣಗಳಲ್ಲಿ  29 ಮಂದಿಯಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಆದಾಗ್ಯೂ, ನಂತರ ಕೆಲವೊಂದು ಬೆಳವಣಿಗೆಯಾಗಿದೆ 

ದೋಷಪೂರಿತ ವಿಧಾನಗಳು: ಗಂಟಲು ಮತ್ತು ಮೂಗಿನ ಹೊಳ್ಳೆಗಳ ಮೂಲಕ ವೈರಸ್ ಗಳ ಪ್ರಮಾಣವನ್ನು ಪತ್ತೆ ಹಚ್ಚಲು ಈ ಅಧ್ಯಯನವನ್ನು ಬಳಸಲಾಗುತ್ತದೆ. ನೆಗೆಟಿವ್ ಕಂಡುಬಂದಂತಹ ವ್ಯಕ್ತಿಗಳಲ್ಲಿ ದಿನ ಕಳೆದಂತೆ ಹೆಚ್ಚಿನ ಸಂಖ್ಯೆಯ ವೈರಸ್ ಗಳು ಕಂಡುಬಾರದೆ ಇದ್ದರೂ ಮುಂದೆ ಪಾಸಿಟಿವ್ ಕಂಡುಬರಬಹುದು.

ಯಾರನ್ನಾದರೂ ಪರೀಕ್ಷಿಸಿದಾಗ ಲಕ್ಷಣಗಳು ಕಂಡಬಾರದೆ ಇದ್ದರೂ ನಂತರದ ದಿನಗಳಲ್ಲಿ ಬದಲಾವಣೆಯಾಗಬಹುದು. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಅರ್ಧಕ್ಕಿಂತ ಹೆಚ್ಚು ಜನರು ಅನಾರೋಗ್ಯದಿಂದ ಬಳಲುತ್ತಿರುವುದು ಜಪಾನಿನ ಅಧ್ಯಯನವೊಂದರಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com