ಸೆಕ್ಸ್ ಮಾಡುವುದರಿಂದ ಕೋವಿಡ್-19 ಸೋಂಕು ಹರಡುವುದೇ? ಇಲ್ಲಿದೆ ಒಂದು ಅಧ್ಯಯನ

ಸೆಕ್ಸ್ ಮಾಡುವುದರಿಂದ ಕೋವಿಡ್-19 ಹರಡಲಿದೆಯೇ?ಎಂಬ ಪ್ರಶ್ನೆ ಸಾಕಷ್ಟು ಜನರನ್ನು ಕಾಡುತ್ತಿದೆ.ಆದರೆ, ಅಧ್ಯಯನವೊಂದರ ಪ್ರಕಾರ ಪುರುಷರ ವೀರ್ಯ ಅಥವಾ ವೃಷಣಗಳಿಂದ ಕೊರೋನಾವೈರಸ್ ಹರಡುವಿಕೆಗೆ ಸಂಬಂಧಿಸಿದ ಯಾವುದೇ ಪುರಾವೆಗಳು ದೊರೆತಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸೆಕ್ಸ್ ಮಾಡುವುದರಿಂದ ಕೋವಿಡ್-19 ಹರಡಲಿದೆಯೇ?ಎಂಬ ಪ್ರಶ್ನೆ ಸಾಕಷ್ಟು ಜನರನ್ನು ಕಾಡುತ್ತಿದೆ.ಆದರೆ, ಅಧ್ಯಯನವೊಂದರ ಪ್ರಕಾರ ಪುರುಷರ ವೀರ್ಯ ಅಥವಾ ವೃಷಣಗಳಿಂದ ಕೊರೋನಾವೈರಸ್ ಹರಡುವಿಕೆಗೆ ಸಂಬಂಧಿಸಿದ ಯಾವುದೇ ಪುರಾವೆಗಳು ದೊರೆತಿಲ್ಲ.

ಫರ್ಟಿಲಿಟಿ ಮತ್ತು ಸ್ಟೆರಿಲಿಟಿ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಕೋವಿಡ್-19 ಸೋಂಕು ಲೈಂಗಿಕವಾಗಿಹರಡಲಿದೆ ಎಂಬುದನ್ನು ಸಮಗ್ರವಾಗಿ ತಳ್ಳಿ ಹಾಕಿಲ್ಲ. ಆದಾಗ್ಯೂ, ಈ ಸೀಮಿತಿ ಅಧ್ಯಯನದ ಪ್ರಕಾರ, ಲೈಂಗಿಕವಾಗಿ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ಸಂಶೋಧಕರು ಹೇಳಿದ್ದಾರೆ.

ಪ್ರಾಥಮಿಕ ಅಧ್ಯಯನದಲ್ಲಿ ಕೋವಿಡ್-19 ವೈರಸ್ ಪುರುಷರ ವೀರ್ಯ ಅಥವಾ ವೃಷಣಗಳಲ್ಲಿ ಕಂಡುಬಂದಿಲ್ಲ ಎಂದು ಅಮೆರಿಕಾದ ಉತಾಹ್ ವಿಶ್ವವಿದ್ಯಾಲಯದ ವಿಶ್ವವಿದ್ಯಾನಿಲಯದ ಸಹಾಯಕ ಪ್ರೊಫೆಸರ್ ಜೆಮ್ಸ್ ಎಂ ಹೊಟಾಲಿಂಗ್ ತಿಳಿಸಿದ್ದಾರೆ. 

ಕೋವಿಡ್-19 ನಂತಹ ರೋಗವು ಲೈಂಗಿಕವಾಗಿ ಹರಡಬಹುದಾದರೆ ಅದು ರೋಗ ತಡೆಗಟ್ಟುವಿಕೆ ಹಾಗೂ ಮನುಷ್ಯನ ದೀರ್ಘಕಾಲೀನ ಸಂತಾನೋತ್ಪತ್ತಿ ಆರೋಗ್ಯಕ್ಕೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಹೊಟಾಲಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಎಬೊಲಾ, ಜಿಕಾ ಮತ್ತಿತರ ವೈರಸ್ ನಿಂದ ಹರಡುವ ರೋಗಗಳಂತೆ  ಕೋವಿಡ್-19ಗೆ ಕಾರಣವಾಗುವ ವೈರಸ್  ಲೈಂಗಿಕವಾಗಿ ಹರಡಬಲ್ಲದೇ ಎಂಬುದರ ಬಗ್ಗೆ ಚೀನಾ ಮತ್ತು ಅಮೆರಿಕಾದ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. 

ಕೊರೋನಾವೈರಸ್ ಕಡಿಮೆ ಹಾಗೂ ಸಾಧಾರಾಣ ಮಟ್ಟದಲ್ಲಿದ್ದಾಗ  34 ಚೀನಿಯರಿಂದ ವೀರ್ಯವನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದಾಗ, ಆಗ ಸಾರ್ಸ್, ಕೋವಿ-2 ನಂತರ ಯಾವುದೇ ವೈರಸ್ ಗಳು ಅದರಲ್ಲಿ ಪತ್ತೆಯಾಗದಿರುವುದನ್ನು ಸಂಶೋಧಕರು ಕಂಡುಹಿಡಿದ್ದಾರೆ.

 ಆದಾಗ್ಯೂ, ವೀರ್ಯದಲ್ಲಿ ವೈರಸ್ ಇಲ್ಲ ಎಂದ ಮಾತ್ರಕ್ಕೆ ವೀರ್ಯ ಕೋಶಗಳು ರೂಪುಗೊಳ್ಳುವ ವೃಷಣಗಳನ್ನು ವೈರಸ್ ಪ್ರವೇಶಿಸಿಲ್ಲ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.  ಒಂದು ವೇಳೆ ವೈರಸ್ ವೃಷಣಗಳಲ್ಲಿ ಇದ್ದರೆ ವೀರ್ಯ ಹಾಗೂ ವೀರ್ಯ ಕೋಶದ ಮೇಲೆ ಧೀರ್ಘಕಾಲದ ಹಾನಿಯನ್ನುಂಟುಮಾಡಲಿದೆ ಎಂದು  ಉತಾಹ್ ವಿಶ್ವವಿದ್ಯಾಲಯದ ಹಂಟ್ಸ್‌ಮನ್ ಕ್ಯಾನ್ಸರ್ ಸಂಸ್ಥೆಯ ವಿಜ್ಞಾನಿ ಜಿಂಗ್ಟಾವೊ ಗುವೊ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com