ಇಂಗ್ಲೆಂಡ್: ಕೋವಿಡ್-19 ಲಸಿಕೆ, ಮೊದಲ ಮಾನವ ಪ್ರಯೋಗ ಆರಂಭ, ಇದರ ಕಾರ್ಯ ಹೇಗಿದೆ ಗೊತ್ತಾ?

ಜಗತ್ತಿನಾದ್ಯಂತ ಮಹಾಮಾರಿಯಾಗಿ ಮನುಕುಲವನ್ನು ಕಾಡುತ್ತಿರುವ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಲಸಿಕೆ ಅಭಿವೃದ್ಧಿ ಪಡಿಸುವಲ್ಲಿ ಅಮೆರಿಕಾ ವಿಫಲವಾದರೂ ಅನೇಕ ರಾಷ್ಟ್ರಗಳು ಪ್ರಯತ್ನವನ್ನು ಮುಂದುವರೆಸಿದ್ದು, ಇಂಗ್ಲೆಂಡ್ ಮೊದಲ ಬಾರಿಗೆ ಮಾನವ ಪ್ರಯೋಗವನ್ನು ಮಾಡಿದೆ.
ಕೋವಿಡ್-19 ಲಸಿಕೆ ಪಡೆಯುತ್ತಿರುವ ಇಂಗ್ಲೆಂಡ್ ನ ಎಲಿಸಾ ಗ್ರಾನಾಟೊ
ಕೋವಿಡ್-19 ಲಸಿಕೆ ಪಡೆಯುತ್ತಿರುವ ಇಂಗ್ಲೆಂಡ್ ನ ಎಲಿಸಾ ಗ್ರಾನಾಟೊ

ಲಂಡನ್: ಜಗತ್ತಿನಾದ್ಯಂತ ಮಹಾಮಾರಿಯಾಗಿ ಮನುಕುಲವನ್ನು ಕಾಡುತ್ತಿರುವ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಲಸಿಕೆ ಅಭಿವೃದ್ಧಿ ಪಡಿಸುವಲ್ಲಿ ಅಮೆರಿಕಾ ವಿಫಲವಾದರೂ ಅನೇಕ ರಾಷ್ಟ್ರಗಳು ಪ್ರಯತ್ನವನ್ನು ಮುಂದುವರೆಸಿದ್ದು, ಇಂಗ್ಲೆಂಡ್ ಮೊದಲ ಬಾರಿಗೆ ಮಾನವ ಪ್ರಯೋಗವನ್ನು ಮಾಡಿದೆ.

ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಸೃಷ್ಟಿಸಿರುವ ಕೋವಿಡ್-19 ಇಂಜೆಕ್ಷನ್ ನ್ನು  ಇಬ್ಬರು ಸ್ವಯಂ ಸೇವಕರಿಗೆ ಚುಚ್ಚಲಾಗಿದೆ. ಎಲ್ಲರ ಕಣ್ಣು  ಈ ಮಾನವ ಪ್ರಯೋಗದ ಮೇಲೆ ನೆಟ್ಟಿದೆ. ಇದರಲ್ಲಿ ಯಶಸ್ವಿಯಾದರೆ ಕೋವಿಡ್- 19 ವಿರುದ್ಧದ ಹೋರಾಟದಲ್ಲಿ ಪ್ರಮುಖ ಪ್ರಗತಿ ಸಾಧಿಸಿದಂತಾಗಲಿದೆ. 

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಜನರನ್ನು ರಕ್ಷಿಸಲು ಈ ಲಸಿಕೆಯನ್ನು ಸೃಷ್ಟಿಸಲಾಗಿದೆ ಅಧ್ಯಯನಕ್ಕಾಗಿ 800 ಸ್ವಯಂ ಸೇವಕರ ಪೈಕಿಯಲ್ಲಿ 400 ಜನರಿಗೆ ಈ ಇಂಜೆಕ್ಷನ್ ಚುಚ್ಚಲಾಗುತ್ತಿದೆ. ಚಿಂಪಾಜಿಗಳ ದುರ್ಬಲ ಮತ್ತು ಮಾರ್ಪಡಿಸಿದ  ಸಾಮಾನ್ಯ ಶೀತ ವೈರಸ್ ನಿಂದ ಈ ಲಸಿಕೆಯನ್ನು ಸೃಷ್ಟಿಸಲಾಗಿದೆ. 

ಈ ಲಸಿಕೆಯನ್ನು ದೇಹದೊಳಗೆ ಚುಚ್ಚಿದಾಗ, ಔಷಧಿ ಕೋಶಗಳಿಗೆ ಪ್ರವೇಶಿಸಿ, ಪ್ರೊಟೀನ್ ಅಂಶವನ್ನು ಹೆಚ್ಚಿಸುತ್ತದೆ.  ಪ್ರೋಟಿನ್ ನಿಂದ ರೋಗ ನಿರೋಧಕ ಶಕ್ತಿ ಉತ್ಪಾದನೆ ಹೆಚ್ಚಾಗಲಿದ್ದು, ಕೋಶಗಳಲ್ಲಿನ ಸೋಂಕನ್ನು ನಾಶಪಡಿಸಲಿದೆ ಎಂದು ಸೌತಾಂಪ್ಟನ್‌ ಯೂನಿವರ್ಸಿಟಿಯ ಆರೋಗ್ಯ ಸಂಶೋಧನಾ ರಾಷ್ಟ್ರೀಯ ಸಂಸ್ಥೆ ನಿರ್ದೇಶಕ ಸಾಲ್  ಫೌಸ್ಟ್  ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ನಾನು ವಿಜ್ಞಾನಿ, ಹಾಗಾಗಿ ನಾನು ಎಲ್ಲಿ ಸಾಧ್ಯವೋ ಅಲ್ಲಿ ವೈಜ್ಞಾನಿಕ ಪ್ರಕ್ರಿಯೆಯನ್ನು ಬೆಂಬಲಿಸಲು ಪ್ರಯತ್ನಿಸಲು ಬಯಸುತ್ತೇನೆ ಎಂದು ಸ್ವಯಂ ಪೇರಿತವಾಗಿ ಕೋವಿಡ್-19 ವಿರುದ್ದದ ಮೊದಲ ಲಸಿಕೆ ಪಡೆದುಕೊಂಡಿರುವ ಸೂಕ್ಷ್ಮ ಜೀವಶಾಸ್ತ್ರಜ್ಞೆ ಎಲಿಸಾ ಗ್ರಾನಾಟೊ ಬಿಬಿಸಿಗೆ ಪ್ರತಿಕ್ರಿಯಿಸಿದ್ದಾರೆ.

ಲಸಿಕೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಅರಿಯಲು 48 ಗಂಟೆಗಳ ಕಾಲ ನಿಗಾ ವಹಿಸಲಾಗಿದೆ. ನಂತರ 18 ರಿಂದ 55 ವರ್ಷದೊಳಗಿರುವ ಸ್ವಯಂ ಸೇವಕರಿಗೆ ಈ ಲಸಿಕೆಯನ್ನು ನೀಡಲು ಆರಂಭಿಸಲಾಗುವುದು, ವೈಯಕ್ತಿಕವಾಗಿ ಈ ಔಷಧಿ ಬಗ್ಗೆ ಹೆಚ್ಚಿನ ವಿಶ್ವಾಸ ಹೊಂದಿರುವುದಾಗಿ ಆಕ್ಸ್ ಫರ್ಡ್ ವಿಶ್ವವಿದ್ಯಾನಿಯದ ವ್ಯಾಕ್ಸಿನಾಲಜಿ ಪ್ರಾಧ್ಯಾಪಕ ಸಾರಾ ಗಿಲ್ಬರ್ಟ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com