ಶೀಘ್ರದಲ್ಲೇ ಕೊರೋನಾವೈರಸ್ ಲಸಿಕೆ ಮಾರುಕಟ್ಟೆಗೆ: ಬೆಲೆ ಎಷ್ಟು ಗೊತ್ತಾ?

ಜಗತ್ತಿನಾದ್ಯಂತ ಆತಂಕ, ತಲ್ಲಣದ ತರಂಗ ಎಬ್ಬಿಸಿರುವ ಮಾರಕ ಕೊರೋನಾವೈರಸ್ ನಿಯಂತ್ರಣದ ಲಸಿಕೆ ಸೆಪ್ಟೆಂಬರ್ ಮಾಸಾಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜಗತ್ತಿನಾದ್ಯಂತ ಆತಂಕ, ತಲ್ಲಣದ ತರಂಗ ಎಬ್ಬಿಸಿರುವ ಮಾರಕ ಕೊರೋನಾವೈರಸ್ ನಿಯಂತ್ರಣದ ಲಸಿಕೆ ಸೆಪ್ಟೆಂಬರ್ ಮಾಸಾಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿವೆ.

ವಿಶ್ವದ ಅತಿ ದೊಡ್ಡ ಲಸಿಕೆ ತಯಾರಕ ಕಂಪನಿಯ ಮುಖ್ಯಸ್ಥರು ಸುದ್ದಿವಾಹಿನಿಯೊಂದಕ್ಕೆ ಈ ವಿಷಯವನ್ನು ತಿಳಿಸಿದ್ದು, ಇದರ ಬೆಲೆ ಸುಮಾರು  1 ಸಾವಿರ ರೂ. ಆಗಿರಲಿದೆ ಎಂದು ಅವರು ಹೇಳಿದ್ದಾರೆ. 

ಮೇ ಅಂತ್ಯ ಭಾಗದಲ್ಲಿ ಲಸಿಕೆಯನ್ನು ಉತ್ಪಾದನಾ ಕಾರ್ಯ ಆರಂಭವಾಗಲಿದ್ದು, ಸೆಪ್ಟೆಂಬರ್ ನಲ್ಲಿ ಪ್ರಾಯೋಗಿಕ ಕಾರ್ಯ ನಡೆಯಲಿದೆ. ನಾವು ಲಸಿಕೆಯನ್ನು ಹೊಂದಿದ ನಂತರ ವಿಶ್ವ ಹಾಗೂ ಭಾರತೀಯರಿಗೆ ನೀಡುತ್ತೇವೆ.  ಅದಕ್ಕಾಗಿ ಆರು ತಿಂಗಳ ಕಾಲ ಕಾಯಬೇಕಾದ ಅಗತ್ಯವಿರುವುದಿಲ್ಲ ಎಂದು ಭಾರತದ ಸೆರುಮ್ ಸಂಸ್ಥೆಯ ಮುಖ್ಯಸ್ಥ ಆದರ್ ಪೂನಾವಾಲಾ  ತಿಳಿಸಿದ್ದಾರೆ. 

ಪುಣೆ ಮೂಲಕ ಸೆರುಮ್ ಸಂಸ್ಥೆ ಜಾಗತಿಕವಾಗಿ ಹರಡಿರುವ ಕೊರೋನಾವೈರಸ್ ನಿಯಂತ್ರಣಕ್ಕಾಗಿ ಲಸಿಕೆ ತಯಾರಿಸುತ್ತಿರುವ ಇಂಗ್ಲೆಂಡ್ ಮತ್ತು ಅಮೆರಿಕಾದ ವಿಜ್ಞಾನಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. 

ಲಸಿಕೆ ತಯರಾಗಿ ಎರಡು ವರ್ಷ ಅಥವಾ 18 ತಿಂಗಳಿಗೂ ಮುಂಚಿತವಾಗಿ ಮಾರುಕಟ್ಟೆ ಪ್ರವೇಶಿಸುವುದಿಲ್ಲ ಎಂದು ಅನೇಕ ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ಆಕ್ಸ್ ಫರ್ಡ್ ವಿಶ್ವವಿದ್ಯಾನಿಯದ ವಿಜ್ಞಾನಿಗಳೊಂದಿಗೆ  ಪಾಲುದಾರಿಕೆ ಮಾಡಿಕೊಂಡಿರುವುದರಿಂದ ಬಹಳ ಧೀರ್ಘಕಾಲ ಆಗುವುದಿಲ್ಲ ಎಂಬ ವಿಶ್ವಾಸ ಹೊಂದಿರುವುದಾಗಿ ಪೂನಾವಾಲಾ ಹೇಳಿದ್ದಾರೆ

ಅಮೆರಿಕಾ ಮತ್ತು ಕೊಡಾಜಿಕ್ಸ್ ಪಾಲುದಾರಿಕೆಯಿಂದ 2021ರಲ್ಲಿ ಲಸಿಕೆ ದೊರೆಯಲಿದೆ. ಆದರೆ,ಕಳೆದೊಂದು ವಾರದಿಂದ ಕೊರೋನಾವೈರಸ್ ವಿರುದ್ಧದ ಲಸಿಕೆ ಪ್ರಾಯೋಗಿಕ ಹಂತದಲ್ಲಿ ಆಕ್ಸ್ ಫರ್ಡ್ ವಿಜ್ಞಾನಿಗಳು ಬಹಳಷ್ಟು ಯಶಸ್ಸು ಸಾಧಿಸಿದ್ದು, ಅವರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಕಂಡುಹಿಡಿರುವ ಲಸಿಕೆಯ ಮಾನವ ಪ್ರಯೋಗ ಏಪ್ರಿಲ್ 23 ರಿಂದ ಆರಂಭವಾಗಿದ್ದು, ವಿಶ್ವದಾದ್ಯಂತ 100ಕ್ಕೂ ಹೆಚ್ಚು ಜನರ ಮೇಲೆ ಪ್ರಯೋಗಿಸಲಾಗಿದೆ. ಇತರ ಚೀನಾ ಮತ್ತು ಅಮೆರಿಕಾದಲ್ಲಿರುವ ಇತರ ಏಳು ಜನರ ಮೇಲೆ ಕ್ಲಿನಿಕಲ್ ಪ್ರಯೋಗವಾಗಿದೆ ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಎಬೊಲಾ ವೈರಸ್ ಗೆ ಯಶಸ್ವಿ ಲಸಿಕೆ ಕಂಡುಹಿಡಿದಿದ್ದ ಆಕ್ಸ್ ಫರ್ಡ್ ವಿವಿಯ ವಿಜ್ಞಾನಿಗಳ ತಂಡದ ಮೇಲೆ ತಮ್ಮಗೆ ನಂಬಿಕೆ ಇದೆ. ಮಲೇರಿಯಾ ಲಸಿಕೆಗಾಗಿ  ಅವರೊಂದಿಗೆ ಸೆರುಮ್ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದಾಗಿ ಪೂನಾವಾಲಾ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com