ರಾಷ್ಟ್ರೀಯ ಬಾಯಿ ಶುಚಿತ್ವ ದಿನ; ಬಾಯಿ ಆರೋಗ್ಯದ ಕಡೆ ಇರಲಿ ಗಮನ!

ಇಂದು ಆಗಸ್ಟ್ 1 ರಾಷ್ಟ್ರೀಯ ಬಾಯಿ ಶುಚಿತ್ವ ದಿನ. ಹೀಗಾಗಿ ಬಾಯಿಯ ಶುಚಿತ್ವದ ಕುರಿತು ಮತ್ತು ಬಾಯಿಯ ಸಾಮಾನ್ಯ ಸಮಸ್ಯೆಗಳು, ಆರೋಗ್ಯದ ಮೇಲೆ ಅವುಗಳ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

Published: 01st August 2020 04:51 PM  |   Last Updated: 01st August 2020 04:51 PM   |  A+A-


Oral hygiene

ಸಂಗ್ರಹ ಚಿತ್ರ

Posted By : Srinivasamurthy VN
Source : The New Indian Express

ಕೊಚ್ಚಿ: ಇಂದು ಆಗಸ್ಟ್ 1 ರಾಷ್ಟ್ರೀಯ ಬಾಯಿ ಶುಚಿತ್ವ ದಿನ. ಹೀಗಾಗಿ ಬಾಯಿಯ ಶುಚಿತ್ವದ ಕುರಿತು ಮತ್ತು ಬಾಯಿಯ ಸಾಮಾನ್ಯ ಸಮಸ್ಯೆಗಳು, ಆರೋಗ್ಯದ ಮೇಲೆ ಅವುಗಳ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

ಭಾರತದ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ.60ರಷ್ಟು ಮಂದಿ ಹಲ್ಲಿನ ಕ್ಷಯ ಅಥವಾ ಹಲ್ಲಿನ ಕೊಳೆತದಂತಹ ಸಮಸ್ಯೆಗಳಿಂದ ನೇರ ಅಥವಾ ಪರೋಕ್ಷವಾಗಿ ಬಳಲುತ್ತಿದ್ದಾರೆ. ಈ ಪೈಕಿ ಶೇ.85 ಅದರ ಸಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.  ಶೇ.70 ರಷ್ಟು ಶಾಲಾ ಮಕ್ಕಳು ಹಲ್ಲಿನ ಕ್ಷಯದಿಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಧೂಮಪಾನ ಮತ್ತು ಸಕ್ಕರೆ ಖಾಯಿಲೆ ಬಾಯಿ ಸಮಸ್ಯೆಗಳನ್ನು ಮತ್ತಷ್ಟು ಉಲ್ಪಣಗೊಳಿಸುತ್ತದೆ. 

ಪಥ್ಯಾಹಾರ ಸೇವನೆ ಬಾಯಿ ಆರೋಗ್ಯ ಮಾತ್ರವಲ್ಲದೇ ದೇಹಾರೋಗ್ಯದಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಬಹುತೇಕ ಮಂದಿಯಲ್ಲಿ ವಸಡಿನ ತೊಂದರೆ ಸಾಮಾನ್ಯವಾಗಿರುತ್ತದೆ. ವಸಡುಗಳ ಸಂದಿಯಲ್ಲಿನ ಸೂಕ್ಷ್ಮ ಕೊಳೆಯನ್ನು ತೆಗೆಯುವ ಮೂಲಕ ವಸಡಿನ ಸಮಸ್ಯೆಗಳನ್ನು ದೂರವಾಗಿಸಿಕೊಳ್ಳಬಹುದು.   

ಸರಿಯಾದ ಬಾಯಿ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಬಾಯಿಯ ಕ್ಯಾನ್ಸರ್ ಸೇರಿದಂತೆ ಇತರೆ ಸಮಸ್ಯೆಗಳನ್ನು ನಿಗ್ರಹಿಸಲು ನೆರವಾಗುತ್ತದೆ.   

ಬಾಯಿ ಶುಚಿತ್ವಕ್ಕೆ ಸಂಬಂಧಿಸಿದಂತೆ ಕೆಲ ಆರೋಗ್ಯ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
1. ದಂತ ವೈದ್ಯರ ಸೂಚನೆಯಿಲ್ಲದೆ ಮೌತ್‌ವಾಶ್ ಗಳನ್ನು ಬಳಸಬೇಡಿ. ಇದು ರಾಸಾಯನಿಕ ಸುಡುವಿಕೆ (ಕೆಮಿಕಲ್ ಬರ್ನಿಂಗ್)ಗೆ ಕಾರಣವಾಗಬಹುದು.
2. ಹಲ್ಲುಜ್ಜುವ ಬ್ರಷ್‌ನಿಂದ ಪ್ರತಿದಿನ ಒಮ್ಮೆ ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸಿ.  ಸ್ಟೀಲ್ ಕ್ಲೀನರ್ಗಳನ್ನು ಬಳಸುವುದರಿಂದ ನಾಲಿಗೆಯನ್ನು ಹಾನಿಗೊಳಿಸಬಹುದು.
3. ಹಲ್ಲಿನ ನೋವು, ವಸಡುಗಳಲ್ಲಿ ರಕ್ತಸ್ರಾವ, ಊತ ಅಥವಾ ಹುಣ್ಣುಗಳಾದ ಸಂದರ್ಭದಲ್ಲಿ, ದಂತವೈದ್ಯರನ್ನು ಸಂಪರ್ಕಿಸಿ. ಸ್ವಯಂ ಔಷಧಿ ಬೇಡ
4. ಬಾಯಿ ಶುದ್ಧಿಗೊಳಿಸುವ ಪರಿಕರಗಳನ್ನು ಬಳಕೆಗೂ ಮುನ್ನ ನಿತ್ಯ ತಪ್ಪದೇ ಶುಚಿಗೊಳಿಸಿ. 
5. ಗಟ್ಟಿಯಾದ ಬ್ರಷ್‌ಗಳು, ಗಟ್ಟಿಯಾಗಿ ಹಲ್ಲುಜ್ಜುವುದು ಮತ್ತು ಜೆಲ್ ಮಾದರಿಯ ಪೇಸ್ಟ್‌ಗಳ ಬಳಕೆ ಬೇಡ. 
6. ಪ್ರತಿದಿನ ಎರಡು ಬಾರಿ ಬ್ರಷ್ ಮಾಡಿ. ಇದಕ್ಕಾಗಿ ಫ್ಲೆಕ್ಸಿಬಲ್ ಬ್ರಷ್ ಗಳನ್ನು ಬಳಕೆ ಮಾಡಿ. 
7. ಹಲ್ಲುಗಳಲ್ಲಿ ಸಿಲುಕಿರುವ ಆಹಾರದ ತುಂಡುಗಳನ್ನು ತೆಗೆಯಲು ಟೂತ್‌ಪಿಕ್‌ಗಳ ಅಥವಾ ಪಿನ್ ಗಳಂತಹ ಚೂಪಾದ ವಸ್ತುಗಳ ಬಳಕೆ ಬೇಡ. 
8. ಮಗು ಫೀಡಿಂಗ್ ಸಂದರ್ಭದಲ್ಲೇ ಮಲಗಿದರೆ ಮಗುವಿನ ಬಾಯಲ್ಲಿ ಫೀಡಿಂಗ್ ಬಾಟಲಿಯನ್ನು ಹಾಗೆಯೇ ಬಿಡದೆ. ಬಾಟಲಿ ತೆಗೆದು ಬಿಡಿ.
9. ಊಟದ ನಡುವೆ ಅನಾವಶ್ಯಕವಾಗಿ ಲಘು ತಿಂಡಿ ತಿನಿಸುಗಳನ್ನು ತಿನ್ನುವುದನ್ನು ಸಾಧ್ಯವಾದಷ್ಟೂ ನಿಯಂತ್ರಿಸಿ
10. ನಿಮ್ಮ ಬಾಯಿ ಆರೋಗ್ಯವನ್ನು ನೀವೇ ಆಗಾಗ ಪರೀಕ್ಷಿಸಿಕೊಳ್ಳಿ. ಬಾಯಿಯಲ್ಲಿನ ಕೆಂಪು ಮತ್ತು ಬಿಳಿ ತೇಪೆಗಳು ಬಾಯಿಯ ಅನಾರೋಗ್ಯವನ್ನು ಸೂಚಿಸುತ್ತವೆ.
11.ಬಾಯಿ ಹುಣ್ಣುಗಳು 2 ವಾರಕ್ಕಿಂತ ಹೆಚ್ಚು ಸಮಯ ಇದ್ದರೆ ಅದನ್ನು ಅಲಕ್ಷಿಸದೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಿರಿ. ಅದು ಬಾಯಿಯ ಕ್ಯಾನ್ಸರ್ ನ ಲಕ್ಷಣವಾಗಿರಬಹುದು.
12. ವಾರ್ಷಿಕ ಕನಿಷ್ಠ 2 ಬಾರಿಯಾದರೂ ವೈದ್ಯರ ಬಳಿಗೆ ಹೋಗಿ ಬಾಯಿಯ ಆರೋಗ್ಯ ಪರೀಕ್ಷಿಸಿಕೊಳ್ಳಿ.

Stay up to date on all the latest ಆರೋಗ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp