ಕೋವಿಡ್ ಮಧ್ಯೆ ಮಕ್ಕಳಲ್ಲಿ ಅಪರೂಪದ ಕಾಯಿಲೆ: ತೀವ್ರ ಕಳವಳ

ಮಕ್ಕಳಲ್ಲಿ  ಮಲ್ಟಿಸಿಸ್ಟಮ್ ಇನ್ಫ್ಲಾಮೇಟರಿ ಎಂದು ಕರೆಯಲ್ಪಡುವ ಕವಾಸಕಿ ತರಹದ ಅಪರೂಪದ ಕೋವಿಡ್-19ಗೆ ಸಂಬಂಧಿತ  ಕಾಯಿಲೆಗಳ  ರೋಗ ಲಕ್ಷಣಗಳ ಬಗ್ಗೆ ಪೋಷಕರು ಎಚ್ಚರ ವಹಿಸುವಂತೆ ನಗರದಲ್ಲಿನ ಮಕ್ಕಳ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಕ್ಕಳಲ್ಲಿ  ಮಲ್ಟಿಸಿಸ್ಟಮ್ ಇನ್ಫ್ಲಾಮೇಟರಿ ಎಂದು ಕರೆಯಲ್ಪಡುವ ಕವಾಸಕಿ ತರಹದ ಅಪರೂಪದ ಕೋವಿಡ್-19ಗೆ ಸಂಬಂಧಿತ  ಕಾಯಿಲೆಗಳ  ರೋಗ ಲಕ್ಷಣಗಳ ಬಗ್ಗೆ ಪೋಷಕರು ಎಚ್ಚರ ವಹಿಸುವಂತೆ ನಗರದಲ್ಲಿನ ಮಕ್ಕಳ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಇಂತಹ ಕಾಯಿಲೆಗಳು ಈ ಹಿಂದೆ ಮುಂಬೈ ಮತ್ತು ದೆಹಲಿಯಲ್ಲಿ ವರದಿಯಾಗಿವೆ ಎಂದು ಹೇಳಿರುವ ಅಸ್ಟರ್ ಸಿಎಂಐ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ಸಾಗರ್  ಭಟ್ಟಾದ್, ಈ ಸಿಂಡ್ರೋಮ್ ಬಗ್ಗೆ ಅಳವಾದ ಅಧ್ಯಯನ ನಡೆಸಿದ್ದಾರೆ.

ರೋಗ ಲಕ್ಷಣಗಳು: ಸಂಶೋಧನೆ ವೇಳೆಯಲ್ಲಿ ಕಳೆದ ಒಂದು ವಾರದಲ್ಲಿ  ಇಂತಹ ಮೂರು ಅಥವಾ ನಾಲ್ಕು  ಪ್ರಕರಣಗಳನ್ನು ಬೆಂಗಳೂರಿನಲ್ಲಿ ಡಾ. ಭಟ್ಟಾದ್ ಪತ್ತೆ ಹಚ್ಚಿದ್ದಾರೆ.  ಕವಾಸಕಿ ಕಾಯಿಲೆ ಐದು ವರ್ಷದೊಳಗೆ ಮಕ್ಕಳಲ್ಲಿ ಪ್ರಮುಖ ಕಂಡುಬರಲಿದ್ದು, ಏನೂ ಇಲ್ಲದೆ ಜ್ವರ ಬರಲಿದೆ. ಇದು ರಕ್ತನಾಳದ ಒಂದು ರೂಪವಾಗಿದ್ದು,  ನಾಳಗಳು ದೇಹದಾದ್ಯಂತ ಉಬ್ಬಿಕೊಳ್ಳುತ್ತವೆ. ಜ್ವರವು ಸಾಮಾನ್ಯವಾಗಿ ಐದು ದಿನಗಳಿಗಿಂತ ಹೆಚ್ಚು ಇರುತ್ತದೆ ಮತ್ತು ಸಾಮಾನ್ಯ ಔಷಧಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ಇದು 7ರಿಂದ 15 ವರ್ಷದ  ನಡುವಿನ ಮಕ್ಕಳಲ್ಲಿಯೂ ವರದಿಯಾಗಿರುವುದಾಗಿ ವೈದ್ಯರು ಹೇಳಿದ್ದಾರೆ.

ಏಪ್ರಿಲ್ ತಿಂಗಳ ಕೊನೆಯ ವಾರದಿಂದಲೂ ಈ ಕಾಯಿಲೆ ಮಕ್ಕಳಲ್ಲಿ ಕಂಡುಬರುತ್ತಿರುವುದನ್ನು ಡಾ. ಭಟ್ಟಾದ್ ಪತ್ತೆ ಹಚ್ಚಿದ್ದಾರೆ.  ತೀವ್ರ ಹೊಟ್ಟೆ, ಜ್ವರ , ಊರಿಯುತದಂತಹ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರಲಿವೆ. ಇತರ ವೈರಸ್ ಗಳು ಕೂಡಾ ಈ ಲಕ್ಷಣಕ್ಕೆ ಕಾರಣವಾಗಬಹುದು. ಆದರೆ, ನಾವೀಗ ಸಾಂಕ್ರಾಮಿಕ ರೋಗದ ಮಧ್ಯಭಾಗದಲ್ಲಿದ್ದು, ಕೋವಿಡ್-19 ಗೂ ಸಂಬಂಧಿತ ಕಾಯಿಲೆಯೂ  ಆಗಿರಬಹುದು ಎಂದು ಡಾ. ಭಟ್ಟಾದ್ ತಿಳಿಸಿದ್ದಾರೆ.

ಬೆಂಗಳೂರಿನ ಮಕ್ಕಳಲ್ಲಿ ಹಠಾತ್ತನೆ ಕೋವಿಡ್-19 ಕಾಣಿಸಿಕೊಳ್ಳುತ್ತಿದ್ದು,  ಈ ತಿಂಗಳಲ್ಲಿ ಕವಾಸಕಿ ರೀತಿಯ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಯಿದೆ.  ಕೋವಿಡ್-19 ಕೇಸ್ ಗಳು ಹೆಚ್ಚಾಗಿರುವ ದೆಹಲಿ ಮತ್ತು ಮುಂಬೈಯಲ್ಲಿ ಕವಾಸಕಿ ರೀತಿಯ ಕಾಯಿಲೆಗಳು ಕೂಡಾ ಹೆಚ್ಚಾಗುತ್ತಿದೆ.

ಆದಾಗ್ಯೂ, ಇಂತಹ ಕೋವಿಡ್-19 ಸಹಭಾಗಿತ್ವದ ರೋಗ ಲಕ್ಷಣಗಳನ್ನು ಈವರೆಗೂ ನೋಡಿಲ್ಲ, ಇಂತಹ ಪ್ರಕರಣಗಳು ಬಂದರೂ ಆಶ್ಚರ್ಯಪಡಬೇಕಾಗದಿಲ್ಲ ಎಂದು ಜಯನಗರದ ಎಸ್ ಹೆಚ್ ಆರ್ ಸಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸಂಜಯ್ ಗುರುರಾಜ್ ಹೇಳುತ್ತಾರೆ. 

ಜುಲೈ ತಿಂಗಳಲ್ಲಿ ಈ ರೀತಿಯ ನಾಲ್ಕು ಪ್ರಕರಣಗಳು ನೋಡಿದ್ದೇವೆ. ಐದು ದಿನಗಳವರೆಗೂ ತೀವ್ರ ರೀತಿಯ ಜ್ವರ, ಹೊಟ್ಟೆ ನೋವು, ಕಣ್ಣುಗಳು ಕೆಂಪಾಗುವುದು, ಬಾಯಿಯಲ್ಲಿ ಊಣ್ಣು ಈ  ಕಾಯಿಲೆಯ ರೋಗಲಕ್ಷಣಗಳಾಗಿರುತ್ತವೆ ಎಂದು ಮಾರತ್ತಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಚಂದ್ರಿಕಾ ಭಟ್ ತಿಳಿಸಿದ್ದಾರೆ.ಕವಾಸಕಿ ರೀತಿಯ ರೋಗಲಕ್ಷಣ ಕಂಡುಬಂದ ಅನೇಕ ಮಕ್ಕಳು ಗುಣಮುಖರಾಗಿದ್ದಾರೆ ಎಂದು  ಅವರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com