ಸಾಮಾಜಿಕ ಮಾಧ್ಯಮದಲ್ಲಿ ಅನುಕಂಪದ ಹುಡುಕಾಟ: ಮಾನಸಿಕ ಆರೋಗ್ಯದ ಮೇಲಿನ ಪರಿಣಾಮಗಳು

 ಸಾಮಾಜಿಕ ಮಾಧ್ಯಮದಲ್ಲಿನ ಅನುಕಂಪದ ಹುಡುಕಾಟ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುವುದು ಹೊಸ ಅಧ್ಯಯನದಿಂದ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದ್ರಾಬಾದ್:  ಸಾಮಾಜಿಕ ಮಾಧ್ಯಮದಲ್ಲಿನ ಅನುಕಂಪದ ಹುಡುಕಾಟ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುವುದು ಹೊಸ ಅಧ್ಯಯನದಿಂದ ತಿಳಿದುಬಂದಿದೆ.

ಭಾವಾನಾತ್ಮಕ  ವಿಚಾರಗಳನ್ನು ಹೇಳಿಕೊಂಡು  ಸಾಮಾಜಿಕ ಮಾಧ್ಯಮಗಳ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕೆ ಸ್ಯಾಡ್ ಫಿಶಿಂಗ್ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಇದು ಹೊಸದೇನು ಅಲ್ಲ, ಇದೊಂದು ವರ್ತನೆ ಎನ್ನುತ್ತಾರೆ ಮಾನಸಿಕ ಆರೋಗ್ಯ ತಜ್ಞೆ ಪ್ರಜ್ಞಾ ರಶ್ಮಿ

ಈ ಕಲ್ಪನೆ ಅವರಿಗೆ  ಧೀರ್ಘಕಾಲೀನದಾಗಿರುತ್ತದೆ. ಅನೇಕ ಮಂದಿ ತಮ್ಮ ಕಷ್ಟಗಳು,  ದು:ಖಕರ ಸಂಗತಿಗಳನ್ನು ಹೇಳಿಕೊಳ್ಳುವುದನ್ನೇ ಶಕ್ತಿ ಅಂದುಕೊಂಡಿರುತ್ತಾರೆ. ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾಗಿಯೇ ಈ ರೀತಿಯ ತಂತ್ರವನ್ನು ಅವರು ಬಳಸುತ್ತಿರುತ್ತಾರೆ. ಆದರೆ, ಇದರಿಂದಾಗಿ ಕೆಲವೊಂದು ಮಾನಸಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ಸಲಹೆ ಅಗತ್ಯ ಎಂದು ಅವರು ಹೇಳುತ್ತಾರೆ.

ಕಾರಣಗಳು: ಕೀಳರಿಮೆ ಹಾಗೂ  ಅನಾಥ ಪ್ರಜ್ಞೆ ಕಾಡುತ್ತಿದ್ದರೆ ಅಂತವರು ಸ್ಯಾಡ್ ಫಿಶ್ ಮನಸ್ಥಿತಿಯಲ್ಲಿರುತ್ತಾರೆ. ನಮನ್ನು ನೋಡಿಕೊಳ್ಳುವವರು ಯಾರಿಲ್ಲ ಅಂದುಕೊಳ್ಳುವವರು  ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಹೆಚ್ಚು ಆಕರ್ಷಿತರಾಗಿದ್ದರೆ ಅವರ ಮೇಲಿನ ಈ ಅಸೂಯೆಯಿಂದಾಗಿ ಕೆಲವರು ಇಂತಹ ವರ್ತನೆಯನ್ನು ಅನುಸರಿಸುವ ಸಾಧ್ಯತೆ ಇರುತ್ತದೆ ಎಂದು ಮನೋಶಾಸ್ತ್ರಜ್ಞೆ ರಾಧಿಕಾ ಆಚಾರ್ಯ ಹೇಳುತ್ತಾರೆ.

ಬಾಲ್ಯದ ಜೀವನ ನಮ್ಮ ಜೀವನದ ಮೇಲೆ ಪರಿಣಾಮ ಬೀರಲಿದೆ. ಒಂದು ವೇಳೆ ಮಗುವಿನ ವಾತವಾರಣ ಕೆಟ್ಟಕರವಾಗಿದ್ದರೆ ಮತ್ತು ಮನೆಯಲ್ಲಿ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಆಕೆ ಸ್ಯಾಡ್ ಪಿಶ್ ಗೆ ಒಳಗಾಗುತ್ತಾರೆ. ಕುಟುಂಬದೊಂದಿಗಿನ ಸಂಬಂಧ ಸರಿಯಾಗದಿದ್ದರೆ ಅಂತಹವರು ಸಾಮಾಜಿಕ ಮಾಧ್ಯಮಗಳ ಮೂಲಕ ಹೇಳಿಕೊಳ್ಳುವ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಾರೆ.

ಸಹಾಯಕ್ಕಾಗಿ ಅಳುವುದು ಸಹಜ: ಮತ್ತೊರ್ವ ಮನೋಶಾಸ್ತ್ರಜ್ಞ ಬೈಜೇಶ್ ರಮೇಶ್ ಪ್ರಕಾರ,  ಸ್ಯಾಡ್ ಫಿಶಿಂಗ್  ಗೊಳಗಾದವರು ಸಹಜವಾಗಿ ಅಷ್ಟಾಗಿ ಮಾತನಾಡುವುದಿಲ್ಲ, ಅಥವಾ ಹೇಗೆ ವರ್ತಿಸಬೇಕು ಎಂಬುದು ಅವರಿಗೆ ತಿಳಿದಿರುವುದಿಲ್ಲ, ಸಮಸ್ಯೆಗಳನ್ನು ಹೇಳಿಕೊಂಡವರನ್ನು ಹೀಯಾಳಿಸುವುದು ಯುವಕರು ಹೆಚ್ಚಾಗುತ್ತಿದೆ. ಇದು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಆತ್ಮಹತ್ಯೆಯಂತಹ ಕೃತ್ಯಗಳಿಗೆ ಪ್ರೇರೆಪಿಸುತ್ತದೆ ಎನ್ನುತ್ತಾರೆ. 

ಸಾಮಾಜಿಕ ಮಾಧ್ಯಮಗಳನ್ನು ಅನುಕಂಪ ಗಿಟ್ಟಿಸಿಕೊಳ್ಳುವ ಸ್ಯಾಡ್ ಫಿಶಿಂಗ್, ಅಪಮಾನಕ್ಕೂ ಕಾರಣವಾಗುತ್ತದೆ.  ಈ ಪದವನ್ನು ಮೊದಲ ಬಾರಿಗೆ ರೆಬೆಕಾ ರೈಡ್ ಎಂಬವರು ಬಳಕೆಗೆ ತಂದಿದ್ದರು.

ಆನ್ ಲೈನ್ ನಲ್ಲಿ  ಬ್ಲಾಕ್ ಫಿಶಿಂಗ್ ಮತ್ತು ಕ್ಯಾಟ್ ಫಿಶಿಂಗ್ ಎಂಬ ಪದಗಳನ್ನು ಸಹ ಬಳಸಲಾಗುತ್ತದೆ. ಆನ್ ಲೈನ್ ನಲ್ಲಿ ನಕಲಿ ಗುರುತಿನಿಂದ ಮೋಸಗೊಳಿಸುವುದನ್ನು ಕ್ಯಾಟ್ ಫಿಶಿಂಗ್ ಎಂದು ಕರೆಯಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com