ಕೊರೋನಾ ವೈರಸ್ ಎಂದರೆ ಏನು? ಇಷ್ಟೊಂದು ಆತಂಕ ಏಕೆ? ಇಲ್ಲಿದೆ ಮಾಹಿತಿ...

ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆಗೆ ಹೆಸರಾಗಿರುವ ಚೀನಾ ದೇಶ ಕೊರೋನಾ ವೈರಸ್ ನಿಂದ ಆತಂಕಗೊಂಡಿದೆ.ಈ ಸೋಂಕಿನಿಂದಾಗಿ 9 ಮಂದಿ ಮೃತಪಟ್ಟಿದ್ದು, 400 ಕ್ಕೂ ಹೆಚ್ಚು ಜನರಿಗೆ ಹರಡಿರುವ ಸಾಧ್ಯತೆ ಕಂಡುಬಂದಿದೆ.
ಟೋಕಿಯೋದಲ್ಲಿ  ಪಾದಾಚಾರಿಗಳು ಮುಖಕ್ಕೆ ಮಾಸ್ಕ್ ಧರಿಸಿರುವುದು
ಟೋಕಿಯೋದಲ್ಲಿ ಪಾದಾಚಾರಿಗಳು ಮುಖಕ್ಕೆ ಮಾಸ್ಕ್ ಧರಿಸಿರುವುದು

ವುಹಾನ್: ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆಗೆ ಹೆಸರಾಗಿರುವ ಚೀನಾ ದೇಶ ಕೊರೋನಾ ವೈರಸ್ ನಿಂದ ಆತಂಕಗೊಂಡಿದೆ.ಈ ಸೋಂಕಿನಿಂದಾಗಿ 9 ಮಂದಿ ಮೃತಪಟ್ಟಿದ್ದು, 400 ಕ್ಕೂ ಹೆಚ್ಚು ಜನರಿಗೆ ಹರಡಿರುವ ಸಾಧ್ಯತೆ ಕಂಡುಬಂದಿದ್ದು, ಜನ ದಟ್ಟಣೆಯಂತಹ ಕಾರ್ಯಕ್ರಮಗಳಿಗೆ ಹೋಗುವುದನ್ನು ಕಡಿಮೆ ಮಾಡುವಂತೆ ಚೀನಾದ ಆರೋಗ್ಯಕ್ಕೆ ಸಂಬಂಧಿಸಿದ ಆಡಳಿತ ಸಂಸ್ಥೆಗಳು ಸಲಹೆ ನೀಡಿವೆ.

 ಜಿನಿವಾದಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಾಗತಿಕ ಆರೋಗ್ಯ ಸಮಸ್ಯೆ ಎಂದು  ಪರಿಗಣಿಸಲು  ನಿರ್ಧರಿಸಿದ ಬಳಿಕ ಈ ರೀತಿಯ ಮನವಿ ಮಾಡಲಾಗಿದೆ. 

ಕೊರೋನಾ ವೈರಸ್  ಹೇಗೆ ಹರಡುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯ ಹೆಚ್ಚಾಗಿದೆ. 

ಕೊರೋನಾ ವೈರಸ್ ಎಂದರೆ ಏನು?

ಕೊರೋನಾ ವೈರಸ್  (ತೀವ್ರ ತೀವ್ರ ಉಸಿರಾಟದ ಸಿಂಡ್ರೋಮ್- SARS)  ಆಗಿದ್ದು, ನ್ಯೂಮೊನಿಯಾ ಮತ್ತಿತರ ಉಸಿರಾಟದ ತೊಂದರೆಗಳು ಉಂಟಾಗುತ್ತವೆ. ಇದೇ ರೀತಿಯ  ವೈರಸ್ ನಿಂದ ಚೀನಾದ ವುಹಾನ್ ನಲ್ಲಿ ಈ ತಿಂಗಳಲ್ಲಿ 22 ಜನರು ಮೃತಪಟ್ಟಿದ್ದಾರೆ.

ಕೊರೋನಾ ವೈರಸ್  ಹೇಗೆ ಬರುತ್ತದೆ?

ಕೊರೋನಾ ವೈರಸ್ ಸಾಮಾನ್ಯವಾಗಿ ನಾಯಿ , ಬೆಕ್ಕುಗಳ ರೀತಿಯ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಸಮುದ್ರದ ಪ್ರಾಣಿಗಳನ್ನು ಮಾರಾಟ ಮಾಡಲಾಗುವ ಹ್ಯೂನಾನ್ ಸಮುದ್ರ ಆಹಾರ ಮಾರ್ಕೆಟ್ ನಿಂದ ಪ್ರಸ್ತುತ ಈ ಸೋಂಕು ಹರಡುತ್ತಿದೆ ಎಂದು ಚೀನಾದ ಜನರು ನಂಬಿದ್ದಾರೆ. ಹಾಗಾಗೀ ನ್ಯೂ ಇಯರ್ ನಿಂದಲೂ ಆ ಮಾರುಕಟ್ಟೆಯನ್ನು ರದ್ದುಗೊಳಿಸಲಾಗಿದೆ. 

ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದೇ?

ಹೌದು.  ಈ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವುದು ತಜ್ಞ ವೈದ್ಯರಿಂದ ದೃಢಪಟ್ಟಿದೆ. ಕೆಮ್ಮುವುದು, ಸೀನುವುದು, ಹಾಗೂ ಪರಸ್ಪರ ಹಸ್ತ ಲಾಘವ ಮಾಡುವುದರಿಂದಲೂ ಈ ಸೋಂಕು ತಗಲಿದೆ ಎಂಬುದು ವರದಿಯಾಗಿದೆ.

ಚೀನಾದಿಂದ ಇತರೆಡೆಯೂ ಈ ಸೋಂಕು ಹರಡಿದೆಯೇ?

ದುರಾದೃಷ್ಟಕರ ಸಂಗತಿ ಎಂದರೆ, ಚೀನಾದ ವಿವಿಧ ಪ್ರಾಂತ್ಯಗಳಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯವಾಗಿಯೂ ಈ ಸೋಂಕು ಹರಡುತ್ತಿದೆ. ಥೈಲ್ಯಾಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲೂ ಕೊರೋನಾ ವೈರಸ್   ಪ್ರಕರಣಗಳು ಕಂಡುಬಂದಿವೆ. ಇತ್ತೀಚಿಗೆ ವುಹಾನ್ ನಿಂದ ಬಂದ ವ್ಯಕ್ತಿಯೊಬ್ಬರಲ್ಲಿ ಈ ಸೋಂಕು ತಗುಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ತುರ್ತು ನಿಗಾ ಘಟಕದಲ್ಲಿ ದಾಖಲಾಗಿರುವುದಾಗಿ ಅಮೆರಿಕಾ ಖಚಿತಪಡಿಸಿದೆ.

ಕೊರೋನಾ ವೈರಸ್ ಹರಡುವಿಕೆ ನಿಯಂತ್ರಣದಲ್ಲಿದೆಯೇ?

ಚೀನಾದ ಆಡಳಿತ ಸಂಸ್ಥೆಗಳ ಪ್ರಕಾರ ಜನವರಿ 21 ರಂದು 217 ಪ್ರಕರಣಗಳು ಕಂಡುಬಂದಿವೆ. ಈ ಹಿಂದೆ ಅದಕ್ಕೂ ದುಪ್ಪಟ್ಟು ಸಂಖ್ಯೆಯಲ್ಲಿತ್ತು ಎನ್ನಲಾಗಿದೆ.  ಒಟ್ಟಾರೇ, 1 ಸಾವಿರದ 394 ಜನರು ವೈದ್ಯಕೀಯ ನಿಗಾದಲ್ಲಿದ್ದು, 765 ಮಂದಿ  ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ  ಅದರ ನಿಯಂತ್ರಣ ಹಾಗೂ ತಡೆಗಟ್ಟುವಲ್ಲಿ ದೇಶ ಗಂಭೀರ ಸ್ಥಿತಿಯಲ್ಲಿದೆ ಎಂದು ಚೀನಾ ಅಧಿಕಾರಿಗಳು ತಿಳಿಸಿದ್ದಾರೆ.ಈ ಸೋಂಕಿನ ಹಿನ್ನೆಲೆಯಲ್ಲಿ  ವಿಶ್ವದಾದ್ಯಂತ ಅನೇಕ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರಯಾಣಿಕರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ. 

ಕೊರೋನಾ ವೈರಸ್  ಲಕ್ಷಣಗಳೇನು?

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಈ ಸೋಂಕು ತಗುಲಿದವರಲ್ಲಿ ಜ್ವರ, ಕೆಮ್ಮು, ಗಂಟಲು ಕೆರತ, ಉಸಿರಾಟದ ತೊಂದರೆ ಮತ್ತಿತರ ಸಮಸ್ಯೆಗಳು ಉಂಟಾಗಲಿವೆ.

ಈ ಸೋಂಕು ಹೇಗೆ ಅಪಾಯಕಾರಿ?

ಕೊರೋನಾ ಸೋಂಕಿನಿಂದ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು  ಸುಮಾರು ಶೇ, 35 ರಷ್ಟು ಜನರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.  

ಕೊರೋನಾ ತಡೆಗೆ ಚಿಕಿತ್ಸೆ ಲಭ್ಯವಿದೆಯೇ? 

ಇಲ್ಲ. ಕೊರೋನಾ ತಡೆಗಾಗಿ ಈವರೆಗೂ ಎಲ್ಲಿಯೂ ಚಿಕಿತ್ಸೆ ದೊರೆಯುವುದಿಲ್ಲ. ಆದಾಗ್ಯೂ, ಎಂಇಆರ್ ಎಸ್ ಚಿಕಿತ್ಸೆ ನೀಡಲಾಗುತ್ತಿದೆ.  ಇದರಿಂದಾಗಿ ಒಂದಷ್ಟು ಸಮಯ ಈ ಸೋಂಕು ಹರಡುದಂತೆ ತಡೆಯುವ ನಿರೀಕ್ಷೆಯಿದೆ. ಈ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಉತ್ತಮ ಮುಂಜಾಗ್ರತಾ ಕ್ರಮವೆಂದರೆ ಮೂಗು ಮತ್ತು ತುಟಿಯನ್ನು ಮಾಸ್ಕ್ ನಿಂದ ಮುಚ್ಚಿಕೊಳ್ಳಬೇಕಾಗುತ್ತದೆ. ಜನ ಹೆಚ್ಚಾಗಿ ಸೇರುವ ಪ್ರದೇಶಗಳಿಗೆ ಹೋಗುವುದನ್ನು ತಡೆಯಬೇಕಾಗಿದೆ. 

ಭಾರತದಲ್ಲಿಯೂ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಿಶೇಷವಾಗಿ ಚೀನಾ, ಜಪಾನ್, ಥೈಲ್ಯಾಂಡ್ ಮತ್ತು ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಬರುವ ಹಾಗೂ ತೆರಳುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com