ಮೇಲ್ಮೈಯಲ್ಲಿ ಕೊರೋನಾ ವೈರಸ್ ಎಷ್ಟು ಸಮಯ ಜೀವಂತವಿರುತ್ತೆ ಗೊತ್ತೇ?

ಕೊರೋನಾ ವೈರಸ್ ವಿರುದ್ಧ ಜಾಗತಿಕ ಮಟ್ಟದ ಹೋರಾಟ ಮುಂದುವರೆದಿದ್ದು, ಮೇಲ್ಮೈ ನಲ್ಲಿ ಅಥವಾ ಬೇರೆ ವಸ್ತುಗಳ ಮೇಲೆ ಈ ವೈರಸ್ ನ ಜೀವಿತಾವಧಿ ಎಷ್ಟು ಎಂಬುದರ ಬಗ್ಗೆ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ವರದಿ ಪ್ರಕಟಿಸಿದೆ. 
ಕೊರೋನಾ ವೈರಸ್
ಕೊರೋನಾ ವೈರಸ್

ಕೊರೋನಾ ವೈರಸ್ ವಿರುದ್ಧ ಜಾಗತಿಕ ಮಟ್ಟದ ಹೋರಾಟ ಮುಂದುವರೆದಿದ್ದು, ಮೇಲ್ಮೈ ನಲ್ಲಿ ಅಥವಾ ಬೇರೆ ವಸ್ತುಗಳ ಮೇಲೆ ಈ ವೈರಸ್ ನ ಜೀವಿತಾವಧಿ ಎಷ್ಟು ಎಂಬುದರ ಬಗ್ಗೆ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ವರದಿ ಪ್ರಕಟಿಸಿದೆ. 

ಸಾರ್ಸ್-ಸಿಒವಿ-2, ಕೊರೋನಾ ವೈರಸ್ ನ ಸ್ಥಿರತೆಯ ಬಗ್ಗೆ ವಿವರಣೆ ನೀಡಿರುವ ಈ ವರದಿಯ ಪ್ರಕಾರ ಈ ವೈರಸ್ ಗಳು ಏರೋಸಾಲ್ ಗಳಲ್ಲಿ 3 ಗಂಟೆಗಳವರೆಗೂ ಸ್ಥಿರವಾಗುರುತ್ತವೆ ಎಂದು ಹೇಳಿದೆ. 

ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಲಾಸ್ ಏಂಜಲಿಸ್ ನ ಸಂಶೋಧಕರೂ ಸಹ ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದು, ಸಾರ್ಸ್-ಸಿಒವಿ-2 ತಾಮ್ರದ ಮೇಲೆ 4 ಗಂಟೆಗಳ ಕಾಲ ಜೀವಂತವಿರುತ್ತದೆ. ಹಲಗೆಯ ಮೇಲೆ 24 ಗಂಟೆ ಜೀವಂತವಿರುತ್ತವೆ. ಪ್ಲಾಸ್ಟಿಕ್ ಹಾಗೂ ತುಕ್ಕಹಿಡಿಯದ ಉಕ್ಕಿನ ಮೇಲೆ 2-3 ದಿನಗಳ ಕಾಲ ಸ್ಥಿರವಾಗಿರುತ್ತವೆ ಎಂಬುದು ವರದಿಯಿಂದೆ ತಿಳಿದುಬಂದಿದೆ. 

ವಿಜ್ಞಾನಿಗಳ ಪ್ರಕಾರ ಕೋವಿಡ್-19, ಸಾರ್ಸ್ ವೈರಾಣುಗಳ ಸೋಂಕು ತಗುಲಿದ ವ್ಯಕ್ತಿಗೆ ರೋಗ ಲಕ್ಷಣಗಳು ಗೋಚರಿಸುವ ಮುನ್ನವೇ ಆತನಿಂದ ಬೇರೆಯವರಿಗೂ ಹರಡುವ ಸಾಧ್ಯತೆ ಇರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com