ಕೊರೋನಾ ವೈರಸ್: ನಿಯಮಿತ ಮೂಗಿನ ಸ್ವಚ್ಛತೆ, ಗಂಟಲಿನ ಗಾರ್ಗಿಲ್ ನಿಂದ ಕೋವಿಡ್-19 ಅನ್ನು ದೂರವಿಡಬಹುದು!

ನಿಯಮಿತವಾಗಿ ಮೂಗಿನ ಸ್ವಚ್ಛತೆ ಮಾಡುವುದರಿಂದ ಮತ್ತು ಆಗಾಗ್ಗೆ ಬಿಸಿ ನೀರಿನ ಮೂಲಕ ಗಂಟಲಿನ ಗಾರ್ಗಿಲ್ ಮಾಡುವ ಮೂಲಕ ಮಾರಕ ಕೊರೋನಾ ವೈರಸ್ ಅನ್ನು ದೂರವಿಡಬಹುದು ಎಂದು ತಜ್ಞರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ನಿಯಮಿತವಾಗಿ ಮೂಗಿನ ಸ್ವಚ್ಛತೆ ಮಾಡುವುದರಿಂದ ಮತ್ತು ಆಗಾಗ್ಗೆ ಬಿಸಿ ನೀರಿನ ಮೂಲಕ ಗಂಟಲಿನ ಗಾರ್ಗಿಲ್ ಮಾಡುವ ಮೂಲಕ ಮಾರಕ ಕೊರೋನಾ ವೈರಸ್ ಅನ್ನು ದೂರವಿಡಬಹುದು ಎಂದು ತಜ್ಞರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಆರೋಗ್ಯ ನಿಯತಕಾಲಿಕೆ ಲಂಗ್ ಇಂಡಿಯಾ (Lung India)ಇಂತಹುದೊಂದು ವರದಿ ನೀಡಿದ್ದು, ಲವಣಯುಕ್ತ ನೀರು (saline water) ಅಥವಾ ಬಿಸಿನೀರಿನಿಂದ ಆಗಾಗ್ಗೆ ಮೂಗಿನ ಹೊಳ್ಳೆಗಳನ್ನು ಸ್ವಚ್ಛ ಮಾಡಿ, ಗಂಟಲಿನ ಗಾರ್ಗಿಲ್ ಮಾಡುತ್ತಿದ್ದರೆ ಕೊರೋನಾ  ವೈರಸ್ ದೇಹ ಪ್ರವೇಶವನ್ನು ಸುಲಭವಾಗಿ ತಡೆಯಬಹುದು. ಕೋವಿಡ್-19 ತಡೆಯುವಲ್ಲಿ ಇದು ಅತ್ಯಂತ ಪರಿಣಾಮಕಾರಿ ವಿಧಾನ ಕೂಡ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಏನಿದು ಲವಣಯುಕ್ತ ನೀರು (saline water)?
ಮೂಗಿನ ಸ್ವಚ್ಛತೆ, ಗಂಟಲಿನ ಗಾರ್ಗಿಲ್ ಗೆ ಲವಣಯುಕ್ತ ನೀರು ಅತ್ಯಂತ ಪ್ರಯೋಜನಕಾರಿಯಾಗಿದ್ದು, ಅರ್ಧ ಲೀಟರ್ ನೀರಿಗೆ ಮೂರು ಟೇಬಲ್ ಸ್ಪೂನ್ ಹೈಪರ್ಟಾನಿಕ್ ಸಲೈನ್ ಅನ್ನು ಮಿಶ್ರಣ ಮಾಡಬೇಕು, ಈ ನೀರನ್ನು ಮೂಗಿನ ಸ್ವಚ್ಛತೆ ಮತ್ತು ಗಂಟಲಿನ ಗಾರ್ಗಿಲ್ ಗೆ  ಬಳಸುವುದರಿಂದ ಕೊರೋನಾ ವೈರಸ್ ಅನ್ನು ತಡೆಯಬಹುದು ಎಂದು ಜೈಪುರದ ಎಸ್ಎಂಎಸ್ ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯ ಮತ್ತು ಲೇಖಕ ಡಾ.ಶೀತು ಸಿಂಗ್ ಹೇಳಿದ್ದಾರೆ.

ಸಾಮಾನ್ಯವಾಗಿ ವೈರಸ್ ಗಳು ಮೂಗಿನಹೊಳ್ಳಿ ಮತ್ತು ಗಂಟಲಿನ ಮೂಲಕ ಮಾನವನ ಪ್ರವೇಶ ಮಾಡುತ್ತವೆ. ಹೀಗಾಗಿ ಮೂಗಿನ ನಿಯಮಿತ ಸ್ವಚ್ಛತೆ ಗಂಟಲಿನ ಗಾರ್ಗಿಲ್ ವೈರಸ್ ತಡೆಯುವಲ್ಲಿ ಪರಿಣಾಮಕಾರಿ. ಇದಲ್ಲದೆ ಆಗಾಗ್ಗೆ ಕೈಗಳನ್ನು ಸ್ಯಾನಿಟೈಸರ್ ಮತ್ತು ಹ್ಯಾಂಡ್ ವಾಶ್  ಅಥವಾ ಸೋಪಿನಿಂದ ತೊಳೆಯುತ್ತಿರಬೇಕು. ಸಮಾಜದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ರಸ್ತೆಗಳಲ್ಲಿ ಓಡಾಡುವಾಗ ಮಾಸ್ಕ್ ಧರಿಸುವುದು ಮರೆಯಬಾರುದು. ಇದರಿಂದಲೂ ವೈರಸ್ ಸೋಂಕು ಪ್ರಸರಣವನ್ನು ನಾವು ತಡೆಯಬಹುದು ಎಂದು ಹಿರಿಯ ಶ್ವಾಸಕೋಶಶಾಸ್ತ್ರಜ್ಞ  ಡಾ.ವೀರೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com