ಅಧಿಕ ಉಷ್ಣತೆಯಿಂದ ಕೊರೊನಾ ತಡೆ ಅಸಾಧ್ಯ.. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೊಂದೇ ಪರಿಹಾರ

ಹೆಚ್ಚಿನ ಪ್ರಮಾಣದಲ್ಲಿ ಜನರು ರೋಗ ನಿರೋಧಕ ಶಕ್ತಿ ವೃದ್ದಿಸಿಕೊಳ್ಳುವುದರಿಂದ ಮಾತ್ರ ಕೊರೊನಾ ವೈರಸ್ ಹರಡುವುದನ್ನು ತಡೆಯಬಹುದು. ಹವಾಮಾನ ಬದಲಾವಣೆಯಿಂದ ಇದನ್ನು ನಿಯಂತ್ರಿಸಲಾಗದು ಎಂದು ಹೊಸ ಅಧ್ಯಯನವೊಂದು ದೃಢಪಡಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಹೆಚ್ಚಿನ ಪ್ರಮಾಣದಲ್ಲಿ ಜನರು ರೋಗ ನಿರೋಧಕ ಶಕ್ತಿ ವೃದ್ದಿಸಿಕೊಳ್ಳುವುದರಿಂದ ಮಾತ್ರ ಕೊರೊನಾ ವೈರಸ್ ಹರಡುವುದನ್ನು ತಡೆಯಬಹುದು. ಹವಾಮಾನ ಬದಲಾವಣೆಯಿಂದ ಇದನ್ನು ನಿಯಂತ್ರಿಸಲಾಗದು ಎಂದು ಹೊಸ ಅಧ್ಯಯನವೊಂದು ದೃಢಪಡಿಸಿದೆ. 

ಕೊರೊನಾ ಸಾಂಕ್ರಾಮಿಕ ಹರಡುವಿಕೆಯ ಮೇಲೆ ಉಷ್ಣಾಂಶ ಹಾಗೂ ಶೀತ ವಾತಾವರಣ ಯಾವುದೇ ಪ್ರಭಾವ ಬೀರುವುದಿಲ್ಲ. ಕೋವಿಡ್ -19 ಸೋಂಕಿನ ಮೊದಲ ಹಂತ ಪ್ರಸಕ್ತ ಬೇಸಿಗೆ ಅವಧಿಯಲ್ಲಿ ಗಮನಾರ್ಹವಾಗಿ ತಡೆಯುತ್ತದೆ ಎಂಬ ಅಂಶ ತಮ್ಮ ಅಧ್ಯಯನದಲ್ಲಿ ದೃಢಪಟ್ಟಿಲ್ಲ  ಎಂದು ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಸಂಶೋಧಕರು ಹೇಳಿದ್ದಾರೆ. ಕಠಿಣ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳದ ಹೊರತು ಹೆಚ್ಚಿನ ತಾಪಮಾನ    ವೈರಸ್ ವೃದ್ದಿಯನ್ನು ತಡೆಯುವುದಿಲ್ಲ ಎಂದು ಹೇಳುತ್ತದೆ. ಪ್ರಪಂಚದಾದ್ಯಂತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರು ವೈರಸ್‌ಗೆ ಪ್ರಭಾವಕ್ಕೆ  ಒಳಗಾಗುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. 

ಹವಾಮಾನ ಬದಲಾವಣೆ ಸೋಂಕು ವೃದ್ದಿಯ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ.  ವೈರಸ್ ವಿರುದ್ಧ ಹೆಚ್ಚಿನ ರೋಗನಿರೋಧಕ ಶಕ್ತಿ ಹೊಂದಿದರೆ ಮಾತ್ರ ಹವಾಮಾನದ ಪರಿಣಾಮ ಜನಸಾಮಾನ್ಯರ ಮೇಲೆ ಇರುತ್ತದೆ ಎಂಬುದು ಸ್ಪಷ್ಟವಾಗಿದೆ. ಹವಾಮಾನ ಪರಿಸ್ಥಿತಿಗಳನ್ನು ಲೆಕ್ಕಿಸದೆ ವೈರಸ್ ವೇಗವಾಗಿ ಹರಡುತ್ತಿದೆ ಎಂದು ಸಂಶೋಧಕ ಡಾ.ರಾಚೆಲ್ ಬೆಕರ್ ಹೇಳಿದ್ದಾರೆ.  ಸೋಂಕಿಗೆ ಇನ್ನೂ ಲಸಿಕೆ ಕಂಡುಹಿಡಿಯದ ಕಾರಣ ದೈಹಿಕ ಅಂತರ ಕಾಪಾಡುವುದರಿಂದ ಮಾತ್ರವೇ ವೈರಾಣು ಹರಡುವುದನ್ನು ತಡೆಯಲು ಸಾಧ್ಯ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com