ಶೇ.24 ರಷ್ಟು ಜನರು ಬಾರ್ಡರ್ಲೈನ್ ಮಧುಮೇಹಿಗಳು: ಅಧ್ಯಯನ

ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಚ್ಚಿ ಮತ್ತು ಹೈದರಾಬಾದ್ ನಗರಗಳಲ್ಲಿ 4,53,854 ಜನರ ಮೇಲೆ ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ನಡೆಸಿದ ಅಧ್ಯಯನದ ಪ್ರಕಾರ, ಶೇಕಡಾ 24 ರಷ್ಟು ಜನರು ಪೂರ್ವಭಾವಿ ಮಧುಮೇಹಿಗಳಾಗಿದ್ದಾರೆ. 

Published: 15th November 2020 08:58 AM  |   Last Updated: 17th November 2020 03:13 PM   |  A+A-


Diabets1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಬೆಂಗಳೂರು: ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಚ್ಚಿ ಮತ್ತು ಹೈದರಾಬಾದ್  ನಗರಗಳಲ್ಲಿ 4,53,854 ಜನರ ಮೇಲೆ ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ನಡೆಸಿದ ಅಧ್ಯಯನದ ಪ್ರಕಾರ, ಶೇಕಡಾ 24 ರಷ್ಟು ಜನರು ಬಾರ್ಡರ್ಲೈನ್ ಮಧುಮೇಹಿಗಳಾಗಿದ್ದಾರೆ. 

ನವೆಂಬರ್ 14 ಶನಿವಾರ ವಿಶ್ವ ಮಧುಮೇಹ ದಿನವಾಗಿದ್ದು, ಅಕ್ಟೋಬರ್ 2018 ಮತ್ತು ಅಕ್ಟೋಬರ್ 2020 ರ ನಡುವೆ ಈ ಅಧ್ಯಯನವನ್ನು ನಡೆಸಲಾಗಿದೆ.  ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತಿದೆ. 50 ವರ್ಷ ವಯಸ್ಸಾದವರಲ್ಲಿ ಶೇ. 68, 36ರಿಂದ 50 ವರ್ಷದೊಳಗಿನವರಲ್ಲಿ ಶೇ. 24 ಮತ್ತು 35 ವರ್ಷದೊಳಗಿನ ಗುಂಪಿನಲ್ಲಿ ಶೇ. 8 ರಷ್ಟು ಸಕ್ಕರೆ ಪ್ರಮಾಣ ಕಂಡುಬಂದಿದೆ.

ಬೆಂಗಳೂರಿನಲ್ಲಿ 3, 37, 307 ಜನರ ಪೈಕಿಯಲ್ಲಿ 81,075 ಮಂದಿ ಬಾರ್ಡರ್ಲೈನ್ ಮಧುಮೇಹಿಗಳಾಗಿದ್ದಾರೆ. ಇದರಲ್ಲಿ ಅತಿ ಹೆಚ್ಚು 55,111 ಮಂದಿ 50 ವರ್ಷದೊಳಗಿನವರಾಗಿದ್ದಾರೆ. ಮಹಿಳೆಯರಿಗಿಂತ ಹೆಚ್ಚಿನ ಸಂಖ್ಯೆಯ ಪುರುಷರು ಬಾರ್ಡರ್ಲೈನ್ ಮಧುಮೇಹಿ ಹಾಗೂ ಮಧುಮೇಹಿಗಳಾಗಿದ್ದಾರೆ ಎಂದು ಅಧ್ಯಯನ ಹೇಳಿದೆ.

ಮಧುಮೇಹವಾಗುವ ಮೊದಲು, ಆರೋಗ್ಯವಂತ ವ್ಯಕ್ತಿಯು ಬಾರ್ಡರ್ಲೈನ್ ಮಧುಮೇಹಿ ಹಂತದ ಮೂಲಕವೇ ಹೋಗುತ್ತಾನೆ. ಕಳೆದ ಕೆಲವು ತಿಂಗಳು ವರ್ಷಗಳಲ್ಲಿ ಜೀವನ ಶೈಲಿ ಮತ್ತು ಆಹಾರದ ಪದ್ಧತಿಯಿಂದಾಗಿ ಡಯಾಬಿಟಿಸ್ ಅವಲಂಬಿಸಿದೆ. ಮಧುಮೇಹ ಬರುವ ಮುನ್ನ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ನ್ಯೂಬರ್ಗ್ ಡಯಾಗ್ನೋಸ್ಟಿಕ್ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ಸುಜಯ್ ಪ್ರಸಾದ್ ತಿಳಿಸಿದ್ದಾರೆ.

ಯಾವುದೇ ವಯಸ್ಸಿನಲ್ಲಿಯೂ ಪೂರ್ವಭಾವಿ ಮಧುಮೇಹ ಕಂಡುಬರಬಹುದು. ಆದಾಗ್ಯೂ, ವಯಸ್ಸಾದವರಲ್ಲಿ ಅಪಾಯ ಹೆಚ್ಚಾಗಿರುತ್ತದೆ. ಬಾರ್ಡರ್ಲೈನ್ ಮಧುಮೇಹಿಗಳಲ್ಲಿ ಯಾವುದೇ ಲಕ್ಷಣ ಕಂಡುಬರುವುದಿಲ್ಲ, ಡಯಾಬಿಟಿಸ್ ಸೈಲೆಂಟ್ ಕಿಲ್ಲರ್ ಆಗಿದೆ. ಸರಿಯಾದ ಆಹಾರ ಪದ್ಧತಿ, ವ್ಯಾಯಾಮ, ಕಡಿಮೆ ತೂಕದ ಮೂಲಕ ಇದನ್ನು ತಡೆಗಟ್ಟಬಹುದಾಗಿದೆ ಎಂದು ಪ್ರಸಾದ್ ಸಲಹೆ ನೀಡಿದ್ದಾರೆ.

Stay up to date on all the latest ಆರೋಗ್ಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp