ಕೊರೋನಾ ವೈರಸ್ ನಮ್ಮ ಚರ್ಮದ ಮೇಲೆ ಎಷ್ಟು ಗಂಟೆಗಳ ಕಾಲ ಇರಬಲ್ಲದು?

ಕೊರೋನಾ ವೈರಸ್ ಏನಾದರೂ ನಮ್ಮ ಚರ್ಮಕ್ಕೆ ಅಂಟಿಕೊಂಡರೆ ಅನೇಕ ಗಂಟೆಗಳ ಕಾಲ ಬದುಕಿ ಇರಬಲ್ಲದಂತೆ. ಕೋವಿಡ್-19 ಗೆ ಕಾರಣವಾಗುವ SARS-CoV-2ವೈರಸ್, ಮನುಷ್ಯನ ಚರ್ಮದ ಮೇಲೆ 9 ಗಂಟೆಗಳ ಕಾಲ ಇರಬಲ್ಲದು, ಪ್ಲೋ ವೈರಸ್ ಗಳಿಗಿಂತ ಅಧಿಕ ಗಂಟೆಗಳವರೆಗೂ ಇರಬಲ್ಲದು ಎಂದು ಅಧ್ಯಯನ ತಿಳಿಸಿದೆ.

Published: 09th October 2020 05:04 PM  |   Last Updated: 09th October 2020 06:21 PM   |  A+A-


coronavirus

ಕೊರೋನಾ ಸೋಂಕು

Posted By : Nagaraja AB
Source : PTI

ನವದೆಹಲಿ: ಕೊರೋನಾ ವೈರಸ್ ಏನಾದರೂ ನಮ್ಮ ಚರ್ಮಕ್ಕೆ ಅಂಟಿಕೊಂಡರೆ ಅನೇಕ ಗಂಟೆಗಳ ಕಾಲ ಬದುಕಿ ಇರಬಲ್ಲದಂತೆ. ಕೋವಿಡ್-19 ಗೆ ಕಾರಣವಾಗುವ SARS-CoV-2ವೈರಸ್, ಮನುಷ್ಯನ ಚರ್ಮದ ಮೇಲೆ 9 ಗಂಟೆಗಳ ಕಾಲ ಇರಬಲ್ಲದು, ಪ್ಲೋ ವೈರಸ್ ಗಳಿಗಿಂತ ಅಧಿಕ ಗಂಟೆಗಳವರೆಗೂ ಇರಬಲ್ಲದು ಎಂದು ಅಧ್ಯಯನ ತಿಳಿಸಿದೆ.

ಇದಕ್ಕೆ ವಿರುದ್ಧವಾಗಿ ಇನ್ ಪ್ಲೂಯೆಂಜಾ ಎ ವೈರಸ್ ಮನುಷ್ಯನ ಚರ್ಮದ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಇರಲಿದೆ ಎಂದು ಜಪಾನ್ ನ ಕ್ಯೋಟೋ ಫ್ರಿಪೆಕ್ಟರಲ್ ಯೂನಿರ್ವಸಿಟಿ ಆಫ್ ಮೆಡಿಸನ್ ಸಂಶೋಧಕರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗಗಳ ಕ್ಲಿನಿಕಲ್ ಜರ್ನಲ್ ನಲ್ಲಿ ಅಧ್ಯಯನ ಪ್ರಕಟಗೊಂಡಿದ್ದು, ಕೈಗಳನ್ನು ಸ್ವಚ್ಚಗೊಳಿಸುವ ಮೂಲಕ ಎರಡು ವೈರಸ್ ಗಳನ್ನು ವೇಗವಾಗಿ ನಿಷ್ಕ್ರೀಯಗೊಳಿಸಬಹುದು ಎಂಬುದು ಕಂಡುಬಂದಿದೆ.ಕೋವಿಡ್-19 ಹರಡುವುದನ್ನು ತಡೆಗಟ್ಟಲು ಕೈ ತೊಳೆಯುವ ಅಥವಾ ಸ್ಯಾನಿಟೈಸರ್ ಬಳಸುವ ಮಹತ್ವವನ್ನು ಈ ಸಂಶೋಧನೆಯು ಒತ್ತಿಹೇಳುತ್ತದೆ.

ಸ್ಟೇನ್‌ಲೆಸ್ ಸ್ಟೀಲ್, ಗಾಜುಗಳು ಮತ್ತು ಪ್ಲಾಸ್ಟಿಕ್‌ನಂತಹ ಇತರ ವಸ್ತುಗಳ ಮೇಲ್ಮೈಗಳಿಗಿಂತ ಚರ್ಮದ ಮೇಲ್ಮೈಗಳಲ್ಲಿ ಸಾರ್ಸ್- ಕೋವ್-2  ಮತ್ತು ಐಎವಿ ವೈರಸ್ ನ್ನು ಹೆಚ್ಚು ವೇಗವಾಗಿ ನಿಷ್ಕ್ರಿಯಗೊಳಿಸಬಹುದು ಎಂಬುದನ್ನು ಅಧ್ಯಯನ ಕಂಡುಹಿಡಿದಿದೆ.

Stay up to date on all the latest ಆರೋಗ್ಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp