ಯಾವಾಗಲು ಹೈ ಹೀಲ್ಸ್ ಹಾಕುವ ಮುನ್ನ ಕೊಂಚ ಯೋಚಿಸಿ!

ಯಾವಾಗಲು ಹೈ ಹೀಲ್ಸ್ ಧರಿಸುವುದರಿಂದ ನಿಮ್ಮ ಪಾದ ಮತ್ತು ಸುತ್ತಮುತ್ತಲಿನ ಸ್ನಾಯುಗಳು ಘಾಸಿಕೊಳ್ಳುವ ಸಾಧ್ಯತೆಯಿದೆ, ಇದರಿಂದ ಸ್ನಾಯುಗಳಲ್ಲಿ ಊರಿಯೂತ ಸಮಸ್ಯೆ ಆರಂಭವಾಗುತ್ತದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಯಾವಾಗಲು ಹೈ ಹೀಲ್ಸ್ ಹಾಕುವುದರಿಂದ ಮಾಸಖಂಡಗಳಿಗೆ ಅಧಿಕ ಒತ್ತಡ ಬಿದ್ದು ಗಾಯಗಳಾಗುವ ಸಾಧ್ಯತೆಯಿದೆ. 

ಸತತವಾಗಿ ಹೈ ಹೀಲ್ಸ್ ಧರಿಸುವುದರಿಂದ ನಿಮ್ಮ ಪಾದ ಮತ್ತು ಸುತ್ತಮುತ್ತಲಿನ ಸ್ನಾಯುಗಳು ಘಾಸಿಕೊಳ್ಳುವ ಸಾಧ್ಯತೆಯಿದೆ, ಇದರಿಂದ ಸ್ನಾಯುಗಳಲ್ಲಿ ಊರಿಯೂತ ಸಮಸ್ಯೆ ಆರಂಭವಾಗುತ್ತದೆ. 

2 ಇಂಚಿನ ಹೈ ಹೀಲ್ಸ್ ಹಾಕುವುದರಿಂದ ಪ್ಲಾಟ್ ಶೂ ಧರಿಸಿದಾಗ ಆಗುವ ಶೇ.23 ರಷ್ಟು ಹೆಚ್ಚಿನ ಒತ್ತಡ  ಒಳ ಮೊಣಕಾಲಿನ ಮೇಲೆ ಬೀಳುತ್ತದೆ ಎಂದು ಹಾರ್ವರ್ಡ್ ಅಧ್ಯಯನ ತಿಳಿಸಿದೆ.

ಹೀಲ್ಸ್ ಧರಿಸುವ ಕಾರಣದಿಂದ ಅಸ್ವಾಭಾವಿಕವಾಗಿ ನಿಮ್ಮ ಮಂಡಿಯನ್ನು ಬಗ್ಗಿಸಬೇಕಾಗುತ್ತದೆ, ಇತರ ರೀತಿಯ ಬೂಟುಗಳಿಗಿಂತ ಭಿನ್ನವಾಗಿದ್ದು ಶಾಕ್ ಅಭ್ಸಾರ್ಬ್  ಹೊಂದಿರುವುದಿಲ್ಲ.

ಹೈ ಹೀಲ್ಸ್ ಧರಿಸುವುದರಿಂದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ,  ಈ ನೋವಿನಿಂದ ಪರಿಹಾರ ಕಂಡುಕೊಳ್ಳಲು ಫಿಸಿಯೋಥೆರಪಿಸ ಅಲ್ಚ್ರಾ ಸೌಂಡ್, ವ್ಯಾಕ್ಸ್ ಬಾತ್  ಲೇಸರ್ ಥೆರಪಿ , ಫುಟ್ ಬಾತ್ ಮುಂತಾದ ಚಿಕಿತ್ಸೆಗಳೊಳಾಗಬೇಕಾಗುತ್ತದೆ. 

ಊತ ಕಾಣಿಸಿಕೊಂಡ ಜಾಗದಲ್ಲಿ ಕೋಲ್ಡ್ ಪ್ಯಾಕ್ ಹಾಕಿಕೊಳ್ಳಬೇಕು, ಪಾದಗಳ ಮಸಾಜ್ ಮಾಡಿಸಿಕೊಳ್ಳುವುದರಿಂದ ನೋವಿನಿಂದ ರಿಲೀಫ್ ಪಡೆಯಬಹುದಾಗಿದೆ. ಸ್ನಾಯು ಮತ್ತು ಪ್ಲ್ಯಾಂಟರ್ ಫಾಸ್ಕಿಯಾ ಹಿಗ್ಗಿಸುವಿಕೆಯಿಂದ ನೋವನ್ನು ಸಹ ಬಿಡುಗಡೆ ಮಾಡುತ್ತದೆ. ಆಂತರಿಕ ಸ್ನಾಯುಗಳನ್ನು ಬಲಪಡಿಸುವುದು ಕೂಡ ಸಹಾಯ ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com