ಕೋವಿಡ್-19: ಗುಣಮುಖರಾದ ಬಳಿಕ ಎದುರಾಗುವ ಉರಿಯೂತ ಲಕ್ಷಣಗಳಿಂದ ಮಕ್ಕಳಲ್ಲಿ ಹೃದಯ ಸಮಸ್ಯೆ- ಅಧ್ಯಯನ

ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುವ ಉರಿಯೂತದಂತಹ ರೋಗಲಕ್ಷಣಗಳು ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನವೊಂದು ಹೇಳಿದೆ. 

Published: 06th September 2020 01:28 PM  |   Last Updated: 06th September 2020 02:04 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಹ್ಯೂಸ್ಟನ್: ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುವ ಉರಿಯೂತದಂತಹ ರೋಗಲಕ್ಷಣಗಳು ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನವೊಂದು ಹೇಳಿದೆ. 

ಇಕ್ಲಿನಿಕಲ್'ಮೆಡಿಸಿನ್ ಎಂಬ ಪತ್ರಿಕೆಯು ಈ ಅಧ್ಯಯನದ ವರದಿಯನ್ನು ಪ್ರಕಟಿಸಿದ್ದು, ವರದಿಯಲ್ಲಿ ಅಧ್ಯಯನಕ್ಕೆ 600 ಮಕ್ಕಳನ್ನು ಮಲ್ಟಿ ಇನ್'ಫ್ಲಮೇಟರಿ ಸಿಂಡ್ರೋಮ್ ಎಂಬ ರೋಗ ಲಕ್ಷಣ ಪರೀಕ್ಷೆಗೊಳಪಡಿಸಲಾಗಿದ್ದು, ಅದರಲ್ಲಿ ಲಕ್ಷಣ ರಹಿತ ಕೊರೋನಾ ಸೋಂಕಿನಿಂದ ಗುಣಮುಖರಾಗಿರುವ ಮಕ್ಕಳಲ್ಲಿ ಉರಿಯೂತ ಲಕ್ಷಣಗಳು ಇರುವುದು ಕಂಡು ಬಂದಿದೆ. 

ಅಧ್ಯಯನದ ಪ್ರಕಾರ,  ಎಂಐಎಸ್‌–ಸಿ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮಕ್ಕಳಲ್ಲಿ ಕೋವಿಡ್‌ 19 ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಲೇ ಬೇಕೆಂದೇನಿಲ್ಲ‘ ಎಂದು ಅಮೆರಿಕದ ಸ್ಯಾನ್‌ಆಂಟೊನಿಯೊದ ಟೆಕ್ಸಾಸ್‌ ಆರೋಗ್ಯ ವಿಜ್ಞಾನ ಕೇಂದ್ರೀಯ ವಿಶ್ವವಿದ್ಯಾಲಯದ ಅಲ್ವಾರೊ ಮೊರೆರಾ ಅಭಿಪ್ರಾಯಪಟ್ಟಿದ್ದಾರೆ. 

‘ಕೋವಿಡ್ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿರಬಹುದು. ಹಾಗೆಯೇ, ಆ ಮಕ್ಕಳಲ್ಲಿ ರೋಗವಿರುವುದೂ ಯಾರಿಗೂ ತಿಳಿಯದಿರಬಹುದು. ಆದರೆ, ಕೆಲವು ವಾರಗಳ ನಂತರ ಆ ಮಕ್ಕಳ ದೇಹದಲ್ಲಿ ಉರಿಯೂತದ ಲಕ್ಷಣಗಳೂ ಕಾಣಿಸಿಕೊಳ್ಳಬಹುದು‘ ಎಂದು ಮೊರೆರಾ ಹೇಳಿದ್ದಾರೆ.

ಅಧ್ಯಯನದಲ್ಲಿ ಜನವರಿ 1 ರಿಂದ ಜುಲೈ 25ರ ನಡುವೆ ವಿಶ್ವದಾದ್ಯಂತ ವರದಿಯಾದ 662 ಎಂಐಎಸ್‌–ಸಿ ಪ್ರಕರಣಗಳನ್ನು ವಿಜ್ಞಾನಿಗಳು ಪರಿಶೀಲನೆಗೆ ಒಳಪಡಿಸಿದ್ದಾರೆ. ಅದರಲ್ಲಿ ಶೇ 71ರಷ್ಟು ಮಕ್ಕಳನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಶೇ 60ಷ್ಟು ಮಕ್ಕಳು ಏಳರಿಂದ ಒಂಬತ್ತು ದಿನಗಳವರೆಗೆ ಆಸ್ಪತ್ರೆಯಲ್ಲಿದ್ದು ರೋಗನಿರೋಧಕವನ್ನು ಹೆಚ್ಚಿಸಿಕೊಂಡಿದ್ದಾರೆ.

ವಿಜ್ಞಾನಿಗಳ ಪ್ರಕಾರ, ಅಧ್ಯಯನಕ್ಕೊಳಪಟ್ಟ 662 ಮಕ್ಕಳಿಗೂ ಜ್ವರವಿತ್ತು ಮತ್ತು ಶೇ 73.7 ಮಕ್ಕಳಿಗೆ ಹೊಟ್ಟೆನೋವು ಮತ್ತು ಅತಿಸಾರದಿಂದ ಬಳಲುತ್ತಿದ್ದರು. ಸೇ 68.3ರಷ್ಟ ಮಕ್ಕಳು ವಾಂತಿಯಿಂದ ಬಳಲುತ್ತಿದ್ದರು. 90 ಮಕ್ಕಳಿಗೆ ಎಕೋಕಾರ್ಡಿಯೊಗ್ರಾಂ ಪರೀಕ್ಷೆ ಮಾಡಿಸಲಾಗಿದ್ದು, ಶೇ 54ರಷ್ಟು ಪ್ರಕರಣಗಳು ಅಸಹಜವಾಗಿವೆ ಎಂದು ಅವರು ತಿಳಿಸಿದ್ದಾರೆ. 

‘ಇದು ಮಕ್ಕಳಿಗೆ ತಗಲುವ ಹೊಸ ಕಾಯಿಲೆಯಾಗಿದ್ದು, ಕೊರೋನಾ ವೈರಸ್ ಸೋಂಕಿಗೆ ಸಂಬಂಧಿಸಿರಬಹುದು‘ ಎಂದು ಮೊರೆರಾ ಅಭಿಪ್ರಾಯಪಟ್ಟಿದ್ದಾರೆ.

Stay up to date on all the latest ಆರೋಗ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp