ದೇಹದ ತೂಕ ಇಳಿಕೆ, ಆರೋಗ್ಯಕರ ಜೀವನ ಶೈಲಿಯಿಂದ ಕೋವಿಡ್-19 ಹಿಮ್ಮೆಟಿಸಬಹುದು: ತಜ್ಞರು

ಅತಿಯಾದ ತೂಕ ಇಳಿಕೆ, ಆರೋಗ್ಯಕರ ಜೀವನ ಶೈಲಿಯಿಂದ ಕೋವಿಡ್-19 ಅನ್ನು ಹಿಮ್ಮೆಟಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್-19-ಸ್ಥೂಲಕಾಯತೆ
ಕೋವಿಡ್-19-ಸ್ಥೂಲಕಾಯತೆ

ನವದೆಹಲಿ: ಅತಿಯಾದ ತೂಕ ಇಳಿಕೆ, ಆರೋಗ್ಯಕರ ಜೀವನ ಶೈಲಿಯಿಂದ ಕೋವಿಡ್-19 ಅನ್ನು ಹಿಮ್ಮೆಟಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆ ಇಲ್ಲಿದ ಜಡ ಜೀವನಶೈಲಿಯೊಂದಿಗೆ ಆರೋಗ್ಯಕರ ದೇಹ ಕೂಡ ಸಮಸ್ಯೆಗಳ ಗೂಡಾಗಬಹುದು. ಸ್ಥೂಲಕಾಯತೆಯು ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು ದ್ವಿಗುಣಗೊಳಿಸುತ್ತದೆ ಮತ್ತು ಕೋವಿಡ್ -19 ಕಾರಣದಿಂದಾಗಿ ಸಾಯುವ ಅಪಾಯವನ್ನೂ  ಹೆಚ್ಚಿಸುತ್ತದೆ ಎಂದು ಜಾಗತಿಕ ಅಧ್ಯಯನಗಳನ್ನು ಉಲ್ಲೇಖಿಸಿ, ಆರೋಗ್ಯ ಇಲಾಖೆಯು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಅಗತ್ಯತೆಯನ್ನು ಒತ್ತಿಹೇಳುತ್ತಿದೆ.

ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವವರ ಬಹುತೇಕ ಮಂದಿ ಸ್ಥೂಲಕಾಯತೆಯಿಂದ ಬಳಲುತ್ತಿರುವುದು ಕಂಡುಬಂದಿದ್ದು. ಈ ಬಗ್ಗೆ ಯುವಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಕೇರಳ ಆರೋಗ್ಯ ಇಲಾಖೆ ನೀಡಿರುವ ದತ್ತಾಂಶಗಳ ಅನ್ವಯ 'ರಾಜ್ಯದಲ್ಲಿ  ತೀವ್ರ ನಿಗಾ ಘಟಕ ಮತ್ತು ವೆಂಟಿಲೇಟರ್ ಗಳಿಗೆ ದಾಖಲಾಗುತ್ತಿರುವ ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ವಯಸ್ಸಾದವರಿಗೆ ಮತ್ತು ಕೊಮೊರ್ಬಿಡಿಟಿ ಇರುವವರಿಗೆ ಐಸಿಯು ಅಥವಾ ವೆಂಟಿಲೇಟರ್ ಆರೈಕೆಯ ಅಗತ್ಯವಿರುತ್ತದೆ ಎಂಬುದು ಸ್ಪಷ್ಟ. ಆದರೆ ಈಗ, ಯುವ ರೋಗಿಗಳಿಗೆ  ಐಸಿಯು ಪ್ರವೇಶದ ಅಗತ್ಯವಿರುತ್ತದೆ ಮತ್ತು ಅವರಲ್ಲಿ ಹೆಚ್ಚಿನವರು ಬೊಜ್ಜು ಹೊಂದಿದ್ದಾರೆ ಎಂದು ದತ್ತಾಂಶಗಳಿಂದ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಾಂಕ್ರಾಮಿಕವಲ್ಲದ ಕಾಯಿಲೆಗಳ ರಾಜ್ಯ ನೋಡಲ್ ಅಧಿಕಾರಿ ಡಾ. ಬಿಪಿನ್ ಗೋಪಾಲ್ ಅವರು, 'ಬೊಜ್ಜು ಒಂದು ಸಮಸ್ಯೆಯಾಗಿದ್ದು, ಯುವ ಪೀಳಿಗೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿದೆ. ಕೋವಿಡ್-19 ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಪ್ರಚೋದಕ ಅಂಶಗಳಲ್ಲಿ ಇದು ಒಂದು ಎಂದು  ಹೇಳಿದ್ದಾರೆ.  'ಅತಿಯಾದ ತೂಕ ಅಥವಾ ಸ್ಥೂಲಕಾಯ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ದುರ್ಬಲ ರೋಗ ನಿರೋಧಕ ಶಕ್ತಿಯಂತಹ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದೇ ವಿಚಾರವಾಗಿ ಬ್ರಿಟನ್ ನ ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಇಲಾಖೆಯ ಕಾರ್ಯನಿರ್ವಾಹಕ ಸಂಸ್ಥೆಯಾದ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಅಭಿಪ್ರಾಯಪಟ್ಟಿರುವಂತೆ, ಹೆಚ್ಚಿನ ತೂಕ ಹೊಂದಿರುವ ಜನರಿಗೆ ಆಸ್ಪತ್ರೆಯ ಪ್ರವೇಶ ಅಥವಾ ತೀವ್ರ ನಿಗಾ ಅಗತ್ಯತೆ ಹೆಚ್ಚಿನ ಅಪಾಯ ಉಂಟುಮಾಡುತ್ತದೆ.  ಸ್ಥೂಲಕಾಯತೆ ಮತ್ತು ಕೋವಿಡ್-19 ಇರುವವರು ಆಸ್ಪತ್ರೆಯಲ್ಲೇ ಸಾವನ್ನಪ್ಪುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಮತ್ತು ಸ್ಥೂಲಕಾಯತೆಯೊಂದಿಗೆ ತೀವ್ರ ನಿಗಾ ಚಿಕಿತ್ಸೆಯಲ್ಲಿ ದಾಖಲಾಗುವ ಶೇಕಡಾ 74 ರಷ್ಟು ಕೋವಿಡ್ -19 ಸೋಂಕಿತರು ಸಾಯುವ ಅಪಾಯವೂ ಹೆಚ್ಚಿದೆ. ಹೀಗಾಗಿ ಸ್ಥೂಲಕಾಯತೆಯನ್ನು  ನಿಭಾಯಿಸಲು ಯುಕೆ ಸರ್ಕಾರ ಹೊಸ ರಾಷ್ಟ್ರೀಯ ಕಾರ್ಯತಂತ್ರವನ್ನು ಬಿಡುಗಡೆ ಮಾಡಿದೆ. ಇದೇ ರೀತಿಯ ಕಾರ್ಯತಂತ್ರವನ್ನು ಎಲ್ಲ ರಾಜ್ಯಗಳು ಅನುಸರಿಸಬೇಕು. ಆರೋಗ್ಯಕರ ಮತ್ತು ಪೌಷ್ಠಿಕ ಆಹಾರಕ್ಕೆ ಅಂಟಿಕೊಳ್ಳುವ ಅಗತ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ತಜ್ಞರು ಹೇಳಿದ್ದಾರೆ.

ಇದೇ ಕಾರಣಕ್ಕೆ ಕೇರಳ ಸರ್ಕಾರ ಕೋವಿಡ್ ಸೋಂಕು ಸೋಲಿಸಲು ತೂಕ ಇಳಿಸಿಕೊಳ್ಳಿ ಮತ್ತು ಸರಿಯಾದ ಆಹಾರ ಸೇವಿಸಿ ಎಂಬ ಅಭಿಯಾನ ಆರಂಭಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com